ಬದಿಯಡ್ಕ: ಪೆರ್ಲ ನಲ್ಕದ ಜಗದೀಶ್ ಪತ್ನಿ ಹೇಮಲತಾ(40) ನಾಪತ್ತೆಯಾಗಿರುವುದಾಗಿ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಅ.18ರಂದು ಬೆಳಗ್ಗೆ ಮನೆಯಿಂದ ಹೊರಗೆ ತೆರಳಿದ ಹೇಮಲತಾ ಮನೆಗೆ ವಾಪಸಾಗಿಲ್ಲ. ಮಧ್ಯಾಹ್ನ ಪತಿಗೆ ಫೋನ್ ಮಾಡಿ ತಾನು ಜುವೆಲ್ಲರಿಯಲ್ಲಿರುವುದಾಗಿ ತಿಳಿಸಿದ್ದರು.
ಅನಂತರ ಆಕೆ ಕುರಿತು ಯಾವುದೇ ಮಾಹಿತಿ ಇಲ್ಲದ ಕಾರಣ ಪೊಲೀಸರಿಗೆ ದೂರು ನೀಡಲಾಗಿದೆ. ನಾಪತ್ತೆಯಾದ ಹೇಮಲತಾ ಜುವೆಲ್ಲರಿಯಲ್ಲಿ 40 ಸಾವಿರ ರೂ.ಚಿನ್ನಾಭರಣ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ. ಸಂಜೆ 4 ಕ್ಕೆ ಅವರನ್ನು ಪೆರ್ಲ ಪೇಟೆಯಲ್ಲಿ ಕಂಡವರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.