ಬೆಲೆಬಾಳುವ ಟಿವಿಯನ್ನು ಟೀ ಶರ್ಟ್‌ನೊಳಗೆ ಕದ್ದೊಯ್ದ ಕಳ್ಳ! ವಿಡಿಯೋ ವೈರಲ್​| Crime

untitled-design-2025-09-17t115418383-68ca54254c07f
Published on

Crime : ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಾರೆ ಎಂದು ನೀವು ಕೇಳಿರುತ್ತೀರಿ ಇದೇನು ಆಶ್ಚರ್ಯವೇನಲ್ಲ. ಇಂದಿನ ದಿನಗಳಲ್ಲಿ ಎಲ್ಲೆಡೆ ಕೇಳಿಬರುತ್ತಿರುವಂತ ಸಾಮಾನ್ಯ ವಿಚಾರ ಇದಾಗಿದೆ. ಅಂದರೆ ಸಾಂಆನ್ಯವಾಗಿ, ದಿನಸಿ ಸಾಮಾನು ಕಳ್ಳತನ ಮಾಡುವುದು ಇಲ್ಲವೇ, ಚಾರ್ಜರ್​ಗಳು, ಇನ್ನಿತರ ಆಟಿಕೆಗಳನ್ನು ಸುಲಭವಾಗಿ ವಿವೇಚನೆಯಿಂದ ಅಂಗಡಿಯಲ್ಲಿ ಕಳ್ಳತನ ಮಾಡುತ್ತಾರೆ. ಆದರೆ, ಆಸ್ಟ್ರೇಲಿಯಾದ ಮೈಯಲ್ಲಾ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಟೀ ಶರ್ಟ್​ ಒಳಗೆ ದೊಡ್ಡ ಟಿವಿಯೊಂದನ್ನು ತುಂಬಿಕೊಳ್ಳುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದ್ಂತೆಯೇ, ನೆಟ್ಟಿಗರು ಆಶ್ಚರ್ಯ ಸೂಚಿಸಿದ್ದಾರೆ.

ವಿಡಿಯೋದಲ್ಲೇನಿದೆ?

ಆಸ್ಟ್ರೇಲಿಯಾದ ಮೈಯಲ್ಲಾದಲ್ಲಿರುವ ಒಬ್ಬ ವ್ಯಕ್ತಿ ಎಲೆಕ್ಟ್ರಾನಿಕ್​ ಅಂಗಡಿಯೊಂದರಲ್ಲಿ ನಡೆದುಕೊಂಡು ಹೋಗುವುದನ್ನು ಈ ಸಿಸಿಟಿವಿ ದೃಶ್ಯ ತೋರಿಸುತ್ತಿದೆ. ನಂತರ ಅವನು ಇದ್ದಕ್ಕಿಂದತೆಯೇ, ತನ್ನ ಟೀ ಶರ್ಟ್​ನಲ್ಲಿ ಟಿವಿಯೊಂದನ್ನು ತುಂಬಲು ಪ್ರಾರಂಭಿಸುತ್ತಾನೆ. ಆದರೆ, ಇಲ್ಲಿ ಪೂರ್ತಿಯಅಗಿ ಮರೆಮಾಡಲು ಸಾಧ್ಯವಾಗುವುದಿಲ್ಲ. ಇದಾದ ನಂತರ, ಅಂಗಡಿಯರ ಕಣ್ಣಿಗೆ ಈ ದೃಶ್ಯ ಬೀಳದಂತೆ ತನ್ನನ್ನು ರಕ್ಷಿಸಿಕೊಂಡು ಅಂಗಡಿಯಿಂದ ಹೊರಹೋಗುತ್ತೇನೆ.

ಈ ಘಟನೆಯನ್ನು @7newsadelaide ಎಂಬ ಇನ್​ಸ್ಟಾಗ್ರಾಮ್​ ಖಾತೆದಾರರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈಯಲ್ಲಾ ಎಲೆಕ್ಟ್ರಾನಿಕ್​​ ಅಂಗಡಿಯಿಂದ ಕಳ್ಳನೊಬ್ಬ ನಾಚಿಕೆಯಿಲ್ಲದೇ, ಬೆಲೆಬಾಳುವ ವಸ್ತುವೊಂದನ್ನು ತನ್ನ ಶರ್ಟ್​ನಲ್ಲಿ ತುಂಬಿಕೊಳ್ಳುತತಿರುವುದನ್ನು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ವಿಡಿಯೋಗೆ ನೆಟಿಜನ್‌ಗಳು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ವಾವ್, ಈತ ತುಂಬಾ ಬುದ್ಧಿವಂತ! ಅವರು ಒಬ್ಬ ಒಳ್ಳೆಯ ಪ್ರತಿಭೆ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಇದ್ದಕ್ಕಿದ್ದಂತೆ ಅವರಿಗೆ ಹೊಟ್ಟೆ ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net