ಉದ್ಯಾನನಗರಿಯಲ್ಲಿ ಮಳೆಗಾಲದಲ್ಲೂ ವಾಡಿಕೆಗಿಂತ ಅಧಿಕ ಉಷ್ಣಾಂಶ

heat
Published on

ಬೆಂಗಳೂರು: ಹೊತ್ತಲ್ಲದ ಹೊತ್ತಲ್ಲಿ ಸುರಿಯುವ ಮಳೆ, ಇದ್ದಕ್ಕಿದ್ದಂತೆ ಸುಡುವ ರಣ ಬಿಸಿಲು, ಕೆಲವೇ ಗಂಟೆಗಳಲ್ಲಿ ಥಂಡಿ... ದಿನದ 24 ಗಂಟೆಗಳಲ್ಲೇ ಮಳೆಗಾಲ, ಚಳಿಗಾಲ, ಬೇಸಿಗೆಯ ಮಿಶ್ರ ವಾತಾವರಣಕ್ಕೆ ಬೆಂಗಳೂರು ಜನತೆ ಸಾಯಾಗಿದ್ದಾರೆ. ಇದಕೆಲ್ಲ ಹವಾಮಾನ ವೈಪರೀತ್ಯವೇ ಕಾರಣವೆಂದು ತಜ್ಞರು ಹೇಳಿದ್ದಾರೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು, ಸೆಖೆ ಇದ್ದರೆ ಸಂಜೆ ಚಳಿ, ರಾತ್ರಿ ವೇಳೆ ಮಳೆಯ ಜತೆಗೆ ಸೆಖೆಯ ಅನುಭವವಾಗುತ್ತಿದೆ. ನಗರದಲ್ಲಿ ವಾರದಿಂದ ಈ ವಿಚಿತ್ರ ಹವಾಮಾನಕ್ಕೆ ಜನರು ಅಯಾಸಯಾಗಿದ್ದಾರೆ. ಜತೆಗೆ, ಬದಲಾದ ಹವಾಮಾನದಿಂದಾಗಿ ಬೆವರು, ಸುಸ್ತು, ಆಯಾಸ, ತಲೆನೋವು, ಜ್ವರ, ಗಂಟಲುನೋವು, ಮೈಕೈನೋವು, ಕೆಮ್ಮು, ನೆಗಡಿ, ಡೆಂಘೆ, ಚಿಕೂನ್​ಗುನ್ಯ ಸೇರಿ ಹಲವು ಸಾಂಕ್ರಾಮಿಕ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಯತ್ತ ಹೆಜ್ಜೆ ಇಡುತ್ತಿದ್ದಾರೆ.

ಜೂನ್​ನಿಂದ ಸೆಪ್ಟೆಂಬರ್​ವರೆಗೆ ಮಳೆಗಾಲ ಇರುತ್ತದೆ. ಈಗ ದಿಢೀರ್​ ಬದಲಾವಣೆಯಿಂದ ಕೆಲ ಸಮಯ ಮಳೆಯಾದರೆ, ಇನ್ನೂ ಕೆಲ ಸಮಯದಲ್ಲಿ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಗರಿಷ್ಠ ತಾಪಮಾನದಲ್ಲಿ 30-31 ಡಿಗ್ರಿ ಸೆಲ್ಸಿಯಸ್​ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದ್ದು, ವಾಡಿಕೆಗಿಂತ 2-3 ಡಿ.ಸೆ. ಹೆಚ್ಚು ತಾಪಮಾನ ದಾಖಲಾಗುತ್ತಿರುವುದು ಕಂಡುಬಂದಿದೆ. ಬಿಸಿಲಿನ ಝಳದಿಂದ ಜನರು ಅತಿಯಾದ ಬೆವರುವಿಕೆ, ಸುಸ್ತು, ಆಯಾಸ ಉಂಟಾಗುತ್ತಿದ್ದು, ಜನರು ಗಾಬರಿಗೊಂಡು ಆಸ್ಪತ್ರೆ ತೆರಳುತ್ತಿದ್ದಾರೆ. ಮುರ್ನಾಲ್ಕು ದಿನಗಳಿಂದ ಹವಾಮಾನದಲ್ಲಿ ಬದಲಾವಣೆಯಾದ ಪರಿಣಾಮ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ.ಹಾಗಾಗಿ, ಹೆದರುವ ಅಗತ್ಯವಿಲ್ಲವೆಂದು ವೈದ್ಯರು ರೋಗಿಗಳಿಗೆ ತಿಳಿಹೇಳಿ ಮನೆಗೆ ಕಳುಹಿಸುತ್ತಿದ್ದಾರೆ.

ಇರಲಿ ಕಾಳಜಿ

ಬದಲಾದ ಹವಾಮಾನದಿಂದಾಗಿ ಸಾಂಕ್ರಾಮಿಕ ರೋಗಗಳ ಕುರಿತು ಎಚ್ಚರಿವಹಿಸಬೇಕು. ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಶುಚಿಯಾದ ಆಹಾರವನ್ನು ಸೇವಿಸಬೇಕು. ಫ್ರಿಡ್ಜ್​ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರ ಸೇವಿಸಬಾರದು. ಬಿಸಿನೀರು ಅಥವಾ ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.

ಬೇಸಿಗೆಯಲ್ಲೂ ಬಳಲಿದ್ದ ಜನತೆ

ಕಳೆದ ಬೇಸಿಗೆಯಲ್ಲೂ ಜನರು ಬಳಲಿ ಬೆಂಡಾಗಿದ್ದರು. ಈ ಬಾರಿ ನಗರದಲ್ಲಿ 41.3 ಡಿ.ಸೆ. ದಾಖಲಾಗಿತ್ತು. ಈವರೆಗೆ ದಾಖಲಾದ ಅತ್ಯಧಿಕ ತಾಪಮಾನ ಇದಾಗಿತ್ತು. ಬಿಸಿಲಿನ ಧಗೆಗೆ ಜನರು ಕಂಗೆಟ್ಟಿದ್ದರು. ವರ್ಷದಿಂದ ವರ್ಷಕ್ಕೆ ನಗರದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಬೇಸಿಗೆ ಅಂದರೆ ಮಾರ್ಚ್​ನಿಂದ ಆರಂಭವಾಗಿ ಮೇ ತಿಂಗಳವರೆಗೆ ಇರುತ್ತದೆ. ಆದರೆ, ಈ ಬಾರಿ ನಗರದಲ್ಲಿ ವಾಡಿಕೆಗಿಂತ ಮುನ್ನ ಬೇಸಿಗೆ ಶುರುವಾಗಿತ್ತು. ಸಾಮಾನ್ಯವಾಗಿ ಮಾರ್ಚ್​ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ೆಬ್ರವರಿಯಲ್ಲೇ ಸುಡುಬಿಸಿಲು ಕಾಣಿಸಿಕೊಂಡಿತ್ತು. ಏಪ್ರಿಲ್​ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್​ನಲ್ಲಿ ಅಧಿಕವಾಗಿತ್ತು. ಕಳೆದ ವರ್ಷ ತೀವ್ರ ಮಳೆ ಅಭಾವ, ಗಾಳಿಯಲ್ಲಿ ತೇವಾಂಶ ಕುಂಠಿತ ಸೇರಿ ವಿವಿಧ ಕಾರಣಗಳಿಂದ ಉತ್ತರ ಕರ್ನಾಟಕ ಮಾದರಿ ಉರಿಬಿಸಿಲು ಕಾಣಿಸಿಕೊಂಡಿತ್ತು.

ತಾಪಮಾನ ವಿವರ

ದಿನಾಂಕ           ಉಷ್ಣಾಂಶ (ಡಿ.ಸೆ)

ಆ. 15              31.0

ಆ. 16              29.6

ಆ. 17              30.7

ಆ. 18               30.8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net