80ರ ದಶಕದಲ್ಲಿ ಚಿತ್ರರಂಗ ಆಳಿದ ಈ ಸ್ಟಾರ್​ ನಟಿ ಈಗ ಎಲ್ಲಿದ್ದಾರೆ? ಇಲ್ಲಿವೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು | Actress

actress Madhavi
Published on

ಬೆಂಗಳೂರು: ಮೇಲಿನ ಫೋಟೋದಲ್ಲಿ ಇರುವ ಸ್ಟಾರ್​ ಹಿರಿಯ ನಟಿ (Actress) ಯಾರು? ಇವರನ್ನು ಹಲವಾರು ಸಿನಿಮಾಗಳಲ್ಲಿ ನೋಡಿದ್ದೀವಿ. ಆದರೆ, ತಕ್ಷಣಕ್ಕೆ ಸುಲಭವಾಗಿ ನೆನಪಾಗುತ್ತಿಲ್ಲ, ಯಾರಿರಬಹುದು ಎಂಬ ನಿಮ್ಮ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ವಿವರವಾದ ಉತ್ತರ.

ಕನ್ನಡದ 'ಒಡ ಹುಟ್ಟಿದವರು’, 'ಹಾಲುಜೇನು', 'ಅನುರಾಗ ಅರಳಿತು' ಮತ್ತು ಇತರೆ ಭಾಷೆಯ 'ಮಾತೃ ದೇವೋ ಭವ'ದಂತಹ ಸೂಪರ್ ಹಿಟ್ ಭಾವನಾತ್ಮಕ ಸಿನಿಮಾಗಳ ಮೂಲಕ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಕಣ್ಣೀರಾಕುವಂತೆ ಮಾಡಿದ ನಟಿ ಬೇರಾರು ಅಲ್ಲ ಅವರೇ ಹಿರಿಯ ನಟಿ ಮಾಧವಿ. 80ರ ದಶಕದಲ್ಲಿ ಭಾರತೀಯ ಚಿತ್ರೋದ್ಯಮವನ್ನು ಆಳಿದ ಸ್ಟಾರ್ ಹೀರೋಯಿನ್​ಗಳ ಪೈಕಿ ಮಾಧವಿ ಮುಂಚೂಣಿಯಲ್ಲಿದ್ದರು. ವರನಟ, ಡಾ. ರಾಜ್​ಕುಮಾರ್​ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ, ಸಿನಿಪ್ರೇಕ್ಷಕರ ಮನಸೂರೆಗೊಳಿಸಿ, ಸೈಎನಿಸಿಕೊಂಡ ನಟಿ.

ಅಂದಿನ ಸಮಯದಲ್ಲಿ ಬಹುಬೇಡಿಕೆಯ ಕಲಾವಿದೆಯಾಗಿದ್ದ ಮಾಧವಿ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರರಂಗದಲ್ಲಿ ಸೂಪರ್​ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ರಾಜ್​ಕುಮಾರ್​ ಅವರ ಜತೆಗೆ ಹೆಚ್ಚಾಗಿ ತೆರೆ ಹಂಚಿಕೊಂಡ ಈ ಚೆಲುವೆ, ಇಂದಿಗೂ ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿ ಭಾಷೆಯ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವೃತ್ತಿಜೀವನದ ಉತ್ತುಂಗದಲ್ಲಿ ದಿಢೀರ್​ ನಟನೆ ತೊರೆದ ಮಾಧವಿ ಇಂದು ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ? ಎಂಬ ಮಾಹಿತಿ ಹಲವರಿಗೆ ತಿಳಿದಿಲ್ಲ. ಕಾರಣ, ಚಿತ್ರರಂಗದಲ್ಲಿ ಅವರ ಬಹುರ್ಷಗಳ ಅನುಪಸ್ಥಿತಿ!

1996ರಲ್ಲಿ ದಾಂಪತ್ಯ

ಬಣ್ಣದ ಬದುಕಿನಲ್ಲಿ ಉತ್ತುಂಗದಲ್ಲಿದ್ದಾಗಲೇ ಮಾಧವಿ ದಿಢೀರನೆ ಮದುವೆ ನಿರ್ಧಾರಕ್ಕೆ ಬಂದು ಚಿತ್ರರಂಗಕ್ಕೆ ಗುಡ್​ಬೈ ಹೇಳಿದರು. ದಾಂಪತ್ಯದ ಬಳಿಕ ಇಂದಿಗೂ ಅವರು ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಮಾಧವಿ 1996ರಲ್ಲಿ ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ವಿವಾಹವಾದರು. ಪ್ರಸ್ತುತ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದು, ಮೂವರು ಹೆಣ್ಣು ಮಕ್ಕಳೊಂದಿಗೆ ಸುಖ ಸಂಸಾರವನ್ನು ಸಾಗಿಸುತ್ತಿದ್ದಾರೆ.

Senior Actress Mathrudevobhava Madhavi Recent Photos goes Viral

ಮಾಧವಿ ಅವರು ತಮ್ಮ ಹಾಗೂ ಕುಟುಂಬದ ಫೋಟೋಗಳನ್ನು ಆಗಾಗ್ಗೆ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ, ತಮ್ಮ ಕುಟುಂಬದೊಂದಿಗೆ ಕಳೆದ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಫೋಟೋಗಳನ್ನು ನೋಡಿದಾಗ ಬಹಳಷ್ಟು ಬದಲಾಗಿರುವುದು ಕಾಣಬಹುದು.

ದಿಗ್ಗಜ ನಟರೊಂದಿಗೆ ಅಭಿನಯ

ಕನ್ನಡ ಸಿನಿ ಪ್ರೇಕ್ಷಕರಿಗೆ ಮಾಧವಿ ಚಿರಪರಿಚಿತ ಎಂಬುದರಲ್ಲಿ ಎರಡು ಮಾತಿಲ್ಲ. ‘ಆಕಸ್ಮಿಕ’, ‘ಒಡ ಹುಟ್ಟಿದವರು’ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಇವರು. ಸುಮಾರು 20 ವರ್ಷಗಳ ಸಿನಿ ಪಯಣದಲ್ಲಿ ರಾಜಕುಮಾರ್​, ಅಂಬರೀಶ್​ ಸೇರಿದಂತೆ ಮಹಾನ್​ ದಿಗ್ಗಜರೊಡನೆ ತೆರೆ ಹಂಚಿಕೊಂಡು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net