ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮ ವೃತ್ತಿ ಜೀವನ ಕಟ್ಟಿಕೊಳ್ಳಬೇಕು. ಮಾದಕ ವ್ಯಸನ, ಸೈಬರ್ ಅಪರಾಧ ಕೃತ್ಯವನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ ಎಂದು ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ್ ಎ.ಹೆಗಡೆ ಹೇಳಿದರು.
ಮೂಡ್ಲಕಟ್ಟೆ ಐ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಕಾಲೇಜಿನ ವಠಾರದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶನಿವಾರ ರಾಜ್ಯಮಟ್ಟದ ಫೆಸ್ಟ್ ನವೋನ್ಮೇಶ್-2024 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರೋಬೊಸಾಫ್ಟ್ ಕಂಪನಿಯ ಶ್ರುತಿ ರೇಳಲ್ ಡಿಸೋಜ ಶುಭಹಾರೈಸಿದರು. ಪ್ರಾಂಶುಪಾಲೆ ಡಾ.ಪ್ರತಿಭಾ ಎಂ. ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಜಯಶೀಲ್ ಕುಮಾರ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ರಕ್ಷಿತಾ ಅಡಿಗ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ರಿಯಾನ್ ಮತ್ತು ಫರ್ಜಾನ ಕಾರ್ಯಕ್ರಮ ನಿರೂಪಿಸಿದರು. ಶ್ರೀರಕ್ಷಾ ವಂದಿಸಿದರು.
ಮದರ್ ತೆರೇಸಾ ಪಿಯು ಕಾಲೇಜು ಶಂಕರನಾರಾಯಣ ಚಾಂಪಿಯನ್ ಹಾಗೂ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ರನ್ನರ್‌ಅಪ್ ಪ್ರಶಸ್ತಿ ಪಡೆದುಕೊಂಡಿತು. ಪಿಯುಸಿ ವಿದ್ಯಾರ್ಥಿಗಳಿಗೆ ವಿನೂತನ ಮತ್ತು ವಿಭಿನ್ನ ಪ್ರಯತದೊಂದಿಗೆ ಐಟಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಎಂಬ ಮೂರು ವಿಭಾಗವಾಗಿ ವಿಂಗಡಿಸಿ, 13 ಸ್ಪರ್ಧೆಯನ್ನು ಏರ್ಪಡಿಸಿತ್ತು. ರಾಜ್ಯದ ವಿವಿಧ ಭಾಗದ 20 ಕಾಲೇಜಿನ 550 ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಫಲಿತಾಂಶ:
ಐಟಿ ರಸಪ್ರಶ್ನೆ: ಎಸ್.ವಿ.ಪದವಿ ಪೂರ್ವ ಕಾಲೇಜು ಗಂಗೊಳ್ಳಿ (ಪ್ರ), ಮದರ್ ತೆರೇಸಾ ಶಂಕರನಾರಾಯಣ (ದ್ವಿ) ವಿಡಿಯೋಗ್ರಫಿ: ಮದರ್ ತೆರೇಸಾ ಕಾಲೇಜು ಶಂಕರನಾರಾಯಣ (ಪ್ರ), ಶ್ರೀ ವೆಂಕಟರಮಣ ಕಾಲೇಜು ಕುಂದಾಪುರ (ದ್ವಿ), ಕೊಲಾಜ್ ಮೇಕಿಂಗ್: ಮದರ್ ತೆರೇಸಾ ಕಾಲೇಜು ಶಂಕರನಾರಾಯಣ (ಪ್ರ), ಶ್ರೀ ವೆಂಕಟರಮಣ ಕಾಲೇಜು ಕುಂದಾಪುರ (ದ್ವಿ) ಎರರ್ ಡೀಬಗಿಂಗ್: ಜನತಾ ಕಾಲೇಜು ಹೆಮ್ಮಾಡಿ (ಪ್ರ), ಶ್ರೀ ವೆಂಕಟರಮಣ ಕಾಲೇಜು ಕುಂದಾಪುರ (ದ್ವಿ) ಕಾಮರ್ಸ್ ಕ್ವಿಜ್: ಶ್ರೀ ವೆಂಕಟರಮಣ ಕಾಲೇಜು ಕುಂದಾಪುರ (ಪ್ರ), ಜನತಾ ಕಾಲೇಜು ಹೆಮ್ಮಾಡಿ (ದ್ವಿ) ಬ್ರಾಂಡ್ ರಂಗೋಲಿ: ಮದರ್ ತೆರೇಸಾ ಕಾಲೇಜು ಶಂಕರನಾರಾಯಣ (ಪ್ರ), ಎಸ್.ವಿ.ಕಾಲೇಜು ಗಂಗೊಳ್ಳಿ (ದ್ವಿ) ಮ್ಯಾಡ್ ಯಾಡ್: ಶ್ರೀ ವೆಂಕಟರಮಣ ಪಿಯು ಕಾಲೇಜು ಕುಂದಾಪುರ (ಪ್ರ), ಮದರ್ ತೆರೇಸಾ ಕಾಲೇಜು ಶಂಕರನಾರಾಯಣ (ದ್ವಿ), ಗುಂಪು ಹಾಡುಗಾರಿಕೆ: ಶ್ರೀ ವೆಂಕಟರಮಣ ಕಾಲೇಜು ಕುಂದಾಪುರ (ಪ್ರ), ತೌಹೀದ್ ಗರ್ಲ್ಸ್ ಪಿ. ಯು ಕಾಲೇಜು ಗಂಗೊಳ್ಳಿ (ದ್ವಿ), ನೃತ್ಯ ಸ್ಪರ್ಧೆ: ಮದರ್ ತೆರೇಸಾ ಪಿಯು ಕಾಲೇಜ್ ಶಂಕರನಾರಾಯಣ (ಪ್ರ), ಜನತಾ ಕಾಲೇಜು ಹೆಮ್ಮಾಡಿ (ದ್ವಿ), ಏಕಪಾತ್ರ ಅಭಿನಯ: ಮದರ್ ತೆರೇಸಾ ಕಾಲೇಜು ಶಂಕರನಾರಾಯಣ (ಪ್ರ), ಶ್ರೀ ವೆಂಕಟರಮಣ ಕಾಲೇಜು ಕುಂದಾಪುರ (ದ್ವಿ), ಮುಖ ಚಿತ್ರಕಲೆ: ಜನತಾ ಕಾಲೇಜು ಹೆಮ್ಮಾಡಿ (ಪ್ರ), ಸರಕಾರಿ ಪಿಯು ಕಾಲೇಜು ಬೈಂದೂರು (ದ್ವಿ), ಸಾಂಸ್ಕೃತಿಕ ಸ್ಪರ್ಧೆ (ವೆರೈಟಿ ಶೋ): ಮದರ್ ತೆರೇಸಾ ಕಾಲೇಜು ಶಂಕರನಾರಾಯಣ (ಪ್ರ), ಜನತಾ ಕಾಲೇಜು ಹೆಮ್ಮಾಡಿ (ದ್ವಿ), ನಿಧಿ ಶೋಧ ಸ್ಪರ್ಧೆ: ಎಸ್.ವಿ.ಕಾಲೇಜು ಗಂಗೊಳ್ಳಿ (ಪ್ರ), ಉತ್ತಮ ನಿರೂಪಕ ಪ್ರಶಸ್ತಿ: ಜನತಾ ಕಾಲೇಜು ಹೆಮ್ಮಾಡಿ.