ರೋಗಿಯ ಜೀವ ಉಳಿಸುವಲ್ಲಿ ರಕ್ತದ ಪಾತ್ರ ಮಹತ್ವದ್ದಾಗಿದೆ-ಡಾ.ವಸಂತ ಹೆಗಡೆಕಟ್ಟೆ

Blood Donetion
Published on

ಕಾರವಾರ: ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ರಕ್ತ ನಿಧಿ ಕೇಂದ್ರದಲ್ಲಿ ಶೇಖರಿಸಿ ಇಟ್ಟಂತಹ ರಕ್ತವನ್ನು ತಕ್ಷಣ ರೋಗಿಗೆ ನೀಡಲು ಸಹಕಾರಿಯಾಗುತ್ತದೆ ಎಂದು ಹೃದ್ರೋಗ ತಜ್ಞ ಡಾ.ವಸಂತ ಹೆಗಡೆಕಟ್ಟೆ ಹೇಳಿದರು.

ಕಾರವಾರ ಆಜಾದ್ ಯೂಥ್ ಕ್ಲಬ್ ನಿಂದ ಕ್ವಿಟ್  ಇಂಡಿಯಾ ಚಳುವಳಿ ಸ್ಮರಣಾರ್ಥ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹಮ್ಮಿಕೊಂಡ 'ಸ್ವಯಂ ಪ್ರೇರಿತ ರಕ್ತದಾನ ಶಿಬಿರ' ಉದ್ಘಾಟಿಸಿ ಮಾತನಾಡಿದರು.

ಒಂದು ಜೀವ ಉಳಿಸುವಲ್ಲಿ ರಕ್ತವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿದಾಗ ಆರೋಗ್ಯವಂತ ವ್ಯಕ್ತಿಗಳು ಆದಷ್ಟು ಸ್ವಯಂ ಪ್ರೇರಿತ ರಕ್ತದಾನಕ್ಕೆ ಮುಂದೆ ಬಂದು ಜೀವವನ್ನು ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಕುಡ್ತರಕರ್, ಸಂಘ ಸಂಸ್ಥೆಗಳು ಈ ರೀತಿಯಾಗಿ ಶಿಬಿರಗಳನ್ನು ಆಯೋಜಿಸಿದಾಗ ಸಂಗ್ರಹಿಸಿಟ್ಟ ರಕ್ತವನ್ನು ರೋಗಿಗಳಿಗೆ ನೀಡಲು ಸಹಕಾರಿಯಾಗುತ್ತದೆ. ಜಿಲ್ಲಾ ಆಸ್ಪತ್ರೆಗೆ ಎಲ್ಲರ ಸಹಕಾರವು ಅಗತ್ಯವಾಗಿದೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಜೀರ್ ಅಹಮದ್ ಯು.ಶೇಖ್ ಉಪಸ್ಥಿತರಿದ್ದರು. ಕ್ಲಬ್ ನ ಅಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ಎಲ್ಲರನ್ನು ಸ್ವಾಗತಿಸಿದರು. ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಸಾಧಿಕ್ ಖಾನ್ ವಂದಿಸಿದರು.

ನಗರಸಭೆ ಸದಸ್ಯ ರವಿರಾಜ ಅಂಕೋಲೆಕರ್, ಎಚ್‌.ಡಿ.ಎಫ್.ಸಿ. ಬ್ಯಾಂಕ್ ನ ಪ್ರಫುಲ್ ಅಂಬಿಗ, ಐಡಿ.ಎಫ್‌.ಸಿ. ಬ್ಯಾಂಕ್ ನ ಗೋಪಿ ಆದೇಶ ಬಳ್ಳಾರಿ, ವಿಶಾಲ್ ಬಾನಾವಳಿಕರ್, ಮಹಾಲಕ್ಷ್ಮಿ ಸೂಪರ್ ಮಾರ್ಕೆಟ್ ನ ಪ್ರಸಾದ್ ಉಳಗೇಕರ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಾಧಿಕ್ ಖಾನ್ ಮತ್ತಿತರರು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ರಕ್ತದಾನದ ಸಂದೇಶ ಸಾರುವ ಟಿ-ಶರ್ಟ್ ಹಾಗೂ ಪ್ರಮಾಣ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪ್ರಿಯಾ ಸಾವಂತ್, ಅಬ್ದುಲ್ ಅಜೀಜ್ ಶೇಖ್, ಸಾಧಿಕ್ ಖಾನ್ , ಶುಶ್ರೂಕಿಯರಾದ ವಿದ್ಯಾ ಮಾಲ್ವಣ್ಕರ್,ರೇಖಾ. ಪಿ, ನಜ್ಮಾ,ದೀಪಾ.ಸಿ ಉಪಸ್ಥಿತರಿದ್ದರು. ರಕ್ತ ತಂತ್ರಜ್ಞರಾದ ಬಬಿತಾ. ಟಿ, ಮತ್ತು ಶ್ವೇತಾ ನಾಯ್ಕ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net