ಕಳವಳ ಮೂಡಿಸಿದ ಅನಾರೋಗ್ಯ : ನದಿ ನೀರು ಕಲುಷಿತಗೊಂಡ ಪರಿಣಾಮ : ಉಪ್ಪಿನಂಗಡಿಯಲ್ಲಿ ಸಮಸ್ಯೆಗಳ ಸರಮಾಲೆ

blank

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ ಹಿನ್ನೀರು ನಿಲ್ಲಿಸಲಾದ ಬಳಿಕ ಗ್ರಾಮದ ಎಲ್ಲ ದಿಕ್ಕುಗಳಿಂದಲೂ ತ್ಯಾಜ್ಯ ನೀರು ನದಿಯ ಒಡಲನ್ನು ಸೇರುತ್ತಿರುವ ನಡುವೆ ಉಪ್ಪಿನಂಗಡಿಯಲ್ಲಿ ಅನಾರೋಗ್ಯಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಕಳವಳ ಮೂಡಿಸಿದೆ.

blank

ಒಂದೆಡೆ ನೇತ್ರಾವತಿ ನದಿಯ ಹಿನ್ನೀರು ನಿಂತಂತಿದ್ದು, ಸಾಲದಕ್ಕೆ ವಸತಿ ಸಮುಚ್ಚಯಗಳಿಂದ ತ್ಯಾಜ್ಯ ನೀರು ಹರಿದು ನದಿಯನ್ನು ಸೇರುತ್ತಿರುವ ದೃಶ್ಯ ಕಳವಳ ಮೂಡಿಸುತ್ತಿದೆ. ಇನ್ನೊಂದೆಡೆ ಚರಂಡಿಗಳಲ್ಲಿ ಅಲ್ಲಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ನೀರು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗುತ್ತಿವೆ. ಹೆದ್ದಾರಿ ಅಗಲೀಕರಣದ ಕಾರಣಕ್ಕೆ ರಾಜಕಾಲುವೆಯಂಥ ಚರಂಡಿ ನೀರು ಸರಾಗವಾಗಿ ಹರಿಯಲಾಗದೆ ಹೆದ್ದಾರಿ ಪಾರ್ಶ್ವದಲ್ಲಿ ದಾಸ್ತಾನುಗೊಂಡಿರುವುದು ಉಪ್ಪಿನಂಗಡಿಯನ್ನು ಅಕ್ಷರಶ ಹೈರಾಣಾಗಿಸಿದೆ.

ಉಪ್ಪಿನಂಗಡಿಯ ಪೃಥ್ವಿ ಕಮರ್ಷಿಯಲ್ ಕಾಂಪ್ಲೆಕ್ಸ್ ಪರಿಸರದಲ್ಲಿ ಹಲವಾರು ಮಂದಿ ಜ್ವರಪೀಡಿತರಾಗಿದ್ದು, ಶಂಕಿತ ಡೆಂೆ ರೋಗವೆಂದು ಹೇಳಲಾಗಿದೆ. ಆದರೆ ಆರೋಗ್ಯ ಇಲಾಖೆಯ ಪ್ರಕಾರ ಫೆಬ್ರವರಿ 2ರಿಂದ ಉಪ್ಪಿನಂಗಡಿಯಲ್ಲಿ ಯಾವುದೇ ಡೆಂೆ ಪ್ರಕರಣ ಪತ್ತೆಯಾಗಿಲ್ಲ ಎಂದು ತಿಳಿಸಲಾಗುತ್ತಿದೆ. ಆದರೆ ಉಪ್ಪಿನಂಗಡಿಯಲ್ಲಿ ವ್ಯಾಪಾರಿಗಳನ್ನು ಒಳಗೊಂಡಂತೆ ಹಲವಾರು ಮಂದಿ ಜ್ವರ ಪೀಡಿತರಾಗಿ ವಾರಗಟ್ಟಲೆ ಅಂಗಡಿಮುಂಗಟ್ಟು ಬಂದ್ ಮಾಡಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಆರೋಗ್ಯ ಸಂಬಂಧಿ ಕಳವಳಕಾರಿ ವಿದ್ಯಮಾನ ಬಗ್ಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಅವರನ್ನು ವಿಚಾರಿಸಿದಾಗ, ಉಪ್ಪಿನಂಗಡಿ ಪರಿಸರದಲ್ಲಿ ಈ ವರ್ಷ ಒಟ್ಟು 3 ಡೆಂೆ ಪ್ರಕರಣ ದಾಖಲಾಗಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ. ಉಳಿದಂತೆ ಡೆಂೆ ಪ್ರಕರಣ ವರದಿಯಾಗಿಲ್ಲ. ನದಿಯಲ್ಲಿ ನೀರು ನಿಂತಿದ್ದರೂ, ನದಿಯಲ್ಲಿನ ಮೀನುಗಳಿಂದಾಗಿ ಸೊಳ್ಳೆ ಉತ್ಪಾದನೆಗೊಳ್ಳಲು ಅವಕಾಶವಿಲ್ಲ. ಆದರೆ ಪೇಟೆಯ ಹಲವೆಡೆ ತ್ಯಾಜ್ಯ ನೀರು ಸಂಗ್ರಹಗೊಂಡು ಅಲ್ಲಿ ಸೊಳ್ಳೆ ಉತ್ಪಾದನೆಯಾದರೆ ರೋಗರುಜಿನಗಳ ಸಾಧ್ಯತೆ ಹೆಚ್ಚೆಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಡೆಂೆ ಜ್ವರದ ಪ್ರಕರಣ ಕಂಡುಬಂದರೆ ತಕ್ಷಣ ಇಲಾಖೆಗೆ ವರದಿ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಡೆಂೆ ಪ್ರಕರಣ ಹೆಚ್ಚಿದೆ ಎಂದರೆ ಒಪ್ಪಲಾಗದು. ಫೆ.15ರ ಬಳಿಕ ಯಾವುದೇ ಪ್ರಕರಣ ಹೊಸದಾಗಿ ದಾಖಲಾಗಿಲ್ಲ. ಪರಿಸರ ಸ್ವಚ್ಛತೆಯ ಕಡೆಗೆ ಎಲ್ಲರೂ ಗಮನವಿರಿಸಿದರೆ ರೋಗಕಾರಕ ಸೊಳ್ಳೆ ನಿಯಂತ್ರಣ ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ನದಿ ಒಡಲಿಗೆ ಚರಂಡಿ ನೀರು ಬೇಡ

ಉಪ್ಪಿನಂಗಡಿ ಪರಿಸರದಲ್ಲಿ ಹೆಚ್ಚುತ್ತಿರುವ ಜ್ವರ ಬಾಧಿತರ ಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್, ಹರಿದು ಹೋಗುವ ಚರಂಡಿಯ ತ್ಯಾಜ್ಯ ನೀರು ನದಿಯಲ್ಲಿ ನಿಂತ ನೀರಿನೊಂದಿಗೆ ಬೆರೆತು ದುರ್ನಾತಭರಿತವಾಗಿದೆ. ಎಲ್ಲೆಲ್ಲ ಚರಂಡಿ ನೀರು ಸರಾಗವಾಗಿ ಹರಿಯುವುದಿಲ್ಲವೋ ಅಲ್ಲ್ಲಿ ಸೊಳ್ಳೆ ಉತ್ಪಾದನೆಯಾಗಿ ಕೆಟ್ಟ ವಾಸನೆ ಪ್ರಸರಿಸುತ್ತಿದೆ. ಇದೆಲ್ಲದರ ಫಲವಾಗಿ ಪರಿಸರದಲ್ಲಿ ರೋಗ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಪಾವನ ನದಿ ನೇತ್ರಾವತಿಯ ಒಡಲಿಗೆ ಈ ಪ್ರಮಾಣದ ಮಲಿನ ನೀರು ಹರಿದು ಸೇರುತ್ತಿರುವುದು ಸರಿಯಲ್ಲ ಎಂದಿದ್ದಾರೆ.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank