ಪಾಲಿಕೆ ಆಯುಕ್ತರ ನಿವಾಸ ಸಮೀಪ ಹೆಚ್ಚುತ್ತಿದೆ ತ್ಯಾಜ್ಯ ರಾಶಿ, ಸರ್ಕಾರಿ ನಿವಾಸ ಸುತ್ತಮುತ್ತ ತೆರವಾವಾಗದೆ ರಾಶಿ ಬಿದ್ದರೂ ಎಚ್ಚೆತ್ತುಕೊಳ್ಳದ ಪಾಲಿಕೆ ಆಯುಕ್ತರು

mng_20 sept thyajya
ಮಂಗಳೂರು ಪಾಲಿಕೆ ಆಯುಕ್ತರ ಸರ್ಕಾರಿ ನಿವಾಸ ಸುತ್ತಮುತ್ತ ತೆರವಾವಾಗದೆ ತ್ಯಾಜ್ಯ ರಾಶಿ ಬಿದ್ದರೂ ಪಾಲಿಕೆ ಆಯುಕ್ತರು ಮಾತ್ರ ಎಚ್ಚೆತ್ತುಕೊಳ್ಳದೆ ಮೌನವಾಗಿದ್ದಾರೆ.
Published on

ಮಂಗಳೂರು: ಪಾಲಿಕೆ ಆಯುಕ್ತರ ಸರ್ಕಾರಿ ನಿವಾಸದ ಸುತ್ತಮುತ್ತ ಹಲವು ದಿನಗಳಿಂದ ಘನತ್ಯಾಜ್ಯ ನಿರ್ವಹಣೆಯಾಗದೆ ಬಿದ್ದುಕೊಂಡಿದ್ದರೂ, ಇಡೀ ಮಂಗಳೂರಿಗೆ ಸ್ವಚ್ಚತೆಯ ಪಾಠ ಹೇಳಬೇಕಿದ್ದ ಆಯುಕ್ತರ ಮನೆ ಮುಂದೆ ಮತ್ತೆ ರಾಶಿ ರಾಶಿ ತ್ಯಾಜ್ಯ ಬೀಳುತ್ತಿದೆ.

ಮಂಗಳೂರು ಕೇಂದ್ರ ಭಾಗದ ಮಣ್ಣಗುಡ್ಡೆ ವೇರ್‌ಹೌಸ್ ಬಳಿಯಿರುವ ಮಂಗಳೂರು ಮಹಾನಗರ ಪಾಲಿಕೆ ಮುಖ್ಯಾಆಯುಕ್ತರ ಸರ್ಕಾರಿ ನಿವಾಸದ ತ್ಯಾಜ್ಯ ನಿರ್ವಹಣೆಯಾಗದೆ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ. ಈ ಬಗ್ಗೆ ಇತ್ತೀಚೆಗೆ ವಿಜಯವಾಣಿ ಸಮಗ್ರ ವರದಿ ಮಾಡಿದೆ. ಪ್ರತೀ ದಿನ ರಾಶಿಗಟ್ಟಲೆ ತ್ಯಾಜ್ಯ ಇಲ್ಲಿ ಬಿದ್ದರೂ ವಿಲೇವಾರಿಯಾಗುತ್ತಿಲ್ಲ. ಈಬಾಗದಲ್ಲಿ ದುರ್ನಾಥ ಬೀರುತ್ತಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೊಗಲೂ ಹೇಸಿಗೆಯಾಗುವ ಸ್ಥಿತಿಯಲ್ಲಿದೆ. ಇಡೀ ಮಂಗಳೂರಿಗೆ ಸ್ವಚ್ಚತೆಯ ಪಾಠ ಹೇಳಿ ಸ್ವಚ್ಛಮಂಗಳೂರು ನಿರ್ಮಾಣದ ಯೋಜನೆ ರೂಪಿಸಬೇಕಾಗಿದ್ದ ಪಾಲಿಕೆ ಆಯುಕ್ತರ ಸರ್ಕಾರಿ ನಿವಾಸ ಸುತ್ತಮುತ್ತ ಸ್ವಚ್ಚತೆಗೆ ಈವರೆಗೆ ಕ್ರಮ ಕೈಗೊಳ್ಳದ್ದು ವಿಪರ್ಯಾಸ.

*ಪ್ರತೀ ದಿನ ತ್ಯಾಜ್ಯ ಹೆಚ್ಚಳ

ಮಣ್ಣಗುಡ್ಡೆ ವೇರ್‌ಹೌಸ್ ಸುತ್ತಮುತ್ತ, ಆಯುಕ್ತರ ಸರ್ಕಾರಿ ನಿವಾಸದ ಸುತ್ತಮುತ್ತ ಪ್ರತೀ ದಿನ ತ್ಯಾಜ್ಯ ರಾಶಿ ಹೆಚ್ಚಳವಾಗುತ್ತಿದೆ. ತ್ಯಾಜ್ಯ ವಿಲೇವಾರಿಯಾಗದ ಕಾರಣ ಇಲ್ಲಿ ಸಣ್ಣ ಡಂಪಿಂಗ್ ಯಾರ್ಡ್‌ನಂತೆ ಕಾಣುತ್ತಿದೆ. ಈಭಾಗದಲ್ಲಿ ತೆರೆದ ಪ್ರದೇಶ ಇದ್ದು, ಜನವಸತಿಯೂ ಇದೆ. ಆದರೆ ಪಾಲಿಕೆಯಿಂದ ಕಸದ ತೊಟ್ಟಿ ಅಳವಡಿಸಲೂ ಪಾಲಿಕೆ ಮನಸ್ಸು ಮಾಡಿಲ್ಲ.

-----------------

ಪಾಲಿಕೆ ಆಯುಕ್ತರ ಮನೆಯ ತ್ಯಾಜ್ಯವೂ ರಾಶಿ!

ಲಭ್ಯ ಮಾಹಿತಿಯಂತೆ ಮಂಗಳೂರು ಮಹಾನಗರ ಪಾಲಿಕೆ ಮುಖ್ಯಾಆಯುಕ್ತರ ಸರ್ಕಾರಿ ನಿವಾಸದ ತ್ಯಾಜ್ಯವೂ ವಿಲೇವಾರಿಯಾಗದೆ ಅಲ್ಲಲ್ಲಿ ಡಲಾಗುತ್ತಿದ್ದು, ಬೀದಿನಾಯಿಗಳು ಎಳೆದಾಡಿ ಊರಿಡಿ ಚೆಲ್ಲಾಪಿಲ್ಲಿಯಾದ ಘಟನೆಗಳೂ ನಡೆಯುತ್ತಿದೆ. ಈಬಾಗದಲ್ಲಿ ಹೆಚ್ಚಿನ ವಾಹನ ಸವಾರರು ಸಂಚರಿಸುತ್ತಿದ್ದು, ಡಂಪಿಂಗ್ ಯಾರ್ಡ್‌ನ ದುರ್ನಾಥ ಇಲ್ಲಿನ ನಿತ್ಯದ ಪರಿಸ್ಥಿತಿ. ಈ ಬಗ್ಗೆ ನಿಕಟಪೂರ್ವ ಪಾಲಿಕೆ ಸದಸ್ಯರಲ್ಲಿ ಸಾರ್ವಜನಿಕರು ದೂರು ನೀಡಿದ್ದರೂ ನಮಗೀಗ ಅಧಿಕಾರ ಇಲ್ಲ ಎಂಬ ಉತ್ತರ ಅವರದ್ದು.

----------------

ಪಾಲಿಕೆ ಆಯುಕ್ತರ ಸರ್ಕಾರಿ ನಿವಾಸದ ಸುತ್ತಮುತ್ತ ರಾಶಿ ಬಿದ್ದ ತ್ಯಾಜ್ಯವನ್ನು ಬೀದಿ ನಾಯಿಗಳು ಎಲೆದಾಡಿ ತಿಂದು ಬೀದಿಯಿಡಿ ದುರ್ನಾಥ ಬೀರುತ್ತಿದ್ದರೂ ಪಾಲಿಕೆ ಆಯುಕ್ತರಿಗೆ ಮಾತ್ರ ಈಬಗ್ಗೆ ಪರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಡೀ ಮಂಗಳೂರಿಗೆ ಸ್ವಚ್ಚತೆ ಪಾಠ ಹೇಳುವ ಹಾಗೂ ಸ್ವಚ್ಚತೆಗೆ ನಿಯಮ ರೂಪಿಸುವ ಪಾಲಿಕೆ ಆಯುಕ್ತರ ನಿವಾಸದ ಸುತ್ತಮುತ್ತ ತ್ಯಾಜ್ಯವೇ ತುಂಬಿಕೊಂಡಿರುವ ಬಗ್ಗೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

-ಜಿ. ಗೋಪಾಲಕೃಷ್ಣ ಭಟ್, ಸಾಮಾಜಿಕ ಕಾರ್ಯಕರ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net