More

    ಕತಾರ್ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ ಸಾನಿಯಾ ಮಿರ್ಜಾ ಜೋಡಿ

    ದೋಹಾ: ಭಾರತದ ಸಾನಿಯಾ ಮಿರ್ಜಾ ಮತ್ತು ಸ್ಲೊವೇನಿಯಾದ ಆಂಡ್ರೆಜಾ ಕ್ಲೆಪಕ್ ಜೋಡಿ ಕತಾರ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದೆ. ಸಾನಿಯಾ ಕರೊನಾ ಕಾಲದಲ್ಲಿ ಆಡುತ್ತಿರುವ ಮೊದಲ ಟೂರ್ನಿ ಇದಾಗಿದೆ.

    ಬುಧವಾರ ನಡೆದ ಕ್ವಾರ್ಟರ್​ಫೈನಲ್‌ನಲ್ಲಿ ಸಾನಿಯಾ-ಕ್ಲೆಪಕ್ ಜೋಡಿ 6-2, 6-0 ನೇರಸೆಟ್‌ಗಳಿಂದ 4ನೇ ಶ್ರೇಯಾಂಕಿತ ಕೆನಡದ ಗ್ಯಾಬ್ರಿಯೆಲಾ ದಬ್ರೋಸ್ಕಿ ಮತ್ತು ರಷ್ಯಾದ ಆನ್ನಾ ವ್ಲಾದಿಮಿರೋವ್ನಾ ಜೋಡಿಗೆ ಸೋಲುಣಿಸಿತು.

    ಇದನ್ನೂ ಓದಿ: ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮ ಅವರ ಈ ಫೋಟೋ!

    ಇದಕ್ಕೂ ಮುನ್ನ ಸೋಮವಾರ, ಕರೊನಾ ಕಾಲದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಜಯಿಸುವ ಮೂಲಕ 34 ವರ್ಷದ ಸಾನಿಯಾ ಗೆಲುವಿನ ಪುನರಾಗಮನ ಕಂಡಿದ್ದರು. ಸಾನಿಯಾ-ಕ್ಲೆಪಕ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ನಾಡಿಯಾ ಕಿಚೆನಾಕ್ ಮತ್ತು ಲೈಯುಡ್‌ಮೈಲಾ ಕಿಚೆನಾಕ್ ಜೋಡಿಯ ವಿರುದ್ಧ 6-4, 6-7 (5), 10-5ರಿಂದ ಗೆಲುವು ದಾಖಲಿಸಿತ್ತು.

    ಕಳೆದ 12 ತಿಂಗಳ ಅವಧಿಯಲ್ಲಿ ಸಾನಿಯಾ ಮಿರ್ಜಾ ಆಡುತ್ತಿರುವ ಮೊದಲ ಟೂರ್ನಿ ಇದಾಗಿದೆ. 2020ರ ಫೆಬ್ರವರಿಯಲ್ಲಿ ಇಲ್ಲೇ ದೋಹಾ ಓಪನ್‌ನಲ್ಲಿ ಕೊನೆಯದಾಗಿ ಅವರು ಪಂದ್ಯವಾಡಿದ್ದರು. ಬಳಿಕ ಕರೊನಾದಿಂದಾಗಿ ಟೆನಿಸ್ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ನಡುವೆ ಗ್ರಾಂಡ್ ಸ್ಲಾಂ ಟೂರ್ನಿಗಳು ಪುನರಾರಂಭಗೊಂಡಿದ್ದರೂ, ಸಾನಿಯಾ ಕಣಕ್ಕಿಳಿದಿರಲಿಲ್ಲ. ಈ ವರ್ಷ ಜನವರಿಯಲ್ಲಿ ಸಾನಿಯಾ ಕೂಡ ಕರೊನಾ ಸೋಂಕಿತರಾಗಿ, ಬಳಿಕ ಗುಣಮುಖರಾಗಿದ್ದರು. ತಾಯ್ತನದ ಬಿಡುವಿನ ಬಳಿಕ ಕಳೆದ ವರ್ಷವಷ್ಟೇ ಅವರು ಟೆನಿಸ್ ಕೋರ್ಟ್‌ಗೆ ಪುನರಾಗಮನ ಕಂಡಿದ್ದರು.

    ಮ್ಯಾಕ್ಸ್‌ವೆಲ್, ಅಗರ್ ಸಾಹಸ; ಕಿವೀಸ್ ವಿರುದ್ಧ 3ನೇ ಟಿ20 ಗೆದ್ದ ಆಸೀಸ್

    ಮದುವೆ ಸಿದ್ಧತೆಗಾಗಿ ಕ್ರಿಕೆಟ್‌ನಿಂದ ರಜೆ ಬಿಡುವು ಪಡೆದರೇ ಬುಮ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts