ಮನೆ ಬಳಿ ಬಂದ ಹಸುಗಳ ಮೇಲೆ ಆ್ಯಸಿಡ್‌ ಎರಚಿದ ವೃದ್ಧೆ

1 Min Read
ಮನೆ ಬಳಿ ಬಂದ ಹಸುಗಳ ಮೇಲೆ ಆ್ಯಸಿಡ್‌ ಎರಚಿದ ವೃದ್ಧೆ

ನೆಲಮಂಗಲ: ಬಾಯಿ ಬಾರದ ಮೂಕ ಪ್ರಾಣಿಗಳು ದೇವರಿಗೆ ಸಮಾನ. ಆದರೆ ಇಲ್ಲೊಬ್ಬ ಮಾನವೀಯತೆ ಇಲ್ಲದೆ ಮಹಿಳೆ, ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು? ಜೋಸೆಫ್ ಗ್ರೇಸ್ (76 ವರ್ಷ)  ಎನ್ನುವ ಮಹಿಳೆ ಮನೆ ಬಳಿಯಿರುವ ಖಾಲಿ ಜಾಗದಲ್ಲಿ ಕಳೆದ ಮೂರು ದಿನಗಳಿಂದ ಹಸುಗಳು ಮೇಯಲು ಬರುತ್ತಿದ್ದವು. ಹೀಗಾಗಿ ಜೋಸೆಫ್ ಗ್ರೇಸ್ ನಿರಂತರವಾಗಿ 18 ಹಸುಗಳಿಗೆ ಆ್ಯಸಿಡ್‌ ಎರಚುತ್ತಿದ್ದಾರೆ. ಹಸುಗಳಿಗೆ ಗಾಯವಾಗಿದೆ. ಈ ಬಗ್ಗೆ ಹಸುಗಳ ಮಾಲೀಕರು ಜೋಸೆಫ್ ಗ್ರೇಸ್ ಅವರನ್ನು ಪ್ರಶ್ನಿಸಿದಾಗ ಬಾತ್‌ ರೂಂಗೆ ಬಳಸುವ ಆ್ಯಸಿಡ್‌ ಎರಚಿದ್ದೇನೆ ಎಂದು ಸಬೂಬು ನೀಡಿದ್ದಾರೆ.

ಸುಟ್ಟ ಗಾಯಗಳಿಂದ ಹಸುಗಳು ಹಾಲು ಕೊಡುತ್ತಿಲ್ಲ, ನೋವಿನಿಂದ ಬಳಲುತ್ತಿವೆ. ನಮಗೆ ನ್ಯಾಯ ಕೊಡಿಸಿ ಎಂದು ಹಸುಗಳ ಮಾಲೀಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡುಗೆಮನೆಯಲ್ಲಿ ಇರುವ ಈ 5 ವಸ್ತುಗಳು ಕೊಲೆಸ್ಟ್ರಾಲ್, ಮಧುಮೇಹಕ್ಕೆ ಮೂಲ ಕಾರಣ!

See also  ಬಿಜೆಪಿ ಸೇರ್ಪಡೆ ಬಳಿಕ ನಿತಿನ್​ ಗುತ್ತೇದಾರ್​ ಮಾತು!
Share This Article