More

    ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆ; ಪ್ರಪಂಚದಲ್ಲಿ ಒಂದೇ ದಿನದಲ್ಲಿ 475 ಜನರು ಮೃತ

    ನವದೆಹಲಿ: ಚೀನಾದಲ್ಲಿ ಮೊದಲು ಪತ್ತೆಯಾಗಿ ವಿಶ್ವವ್ಯಾಪಿಯಾಗಿ ಹರಡುತ್ತಿರುವ ಕರೊನಾ ವೈರಸ್​ಗೆ ಪೂರ್ತಿ ಪ್ರಪಂಚವೇ ತತ್ತರಿಸಿದೆ. ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಇಂದು ಬೆಳಗ್ಗೆಯ ವರದಿಯ ಪ್ರಕಾರ ದೇಶದಲ್ಲಿ 147 ಜನರಲ್ಲಿ ಸೋಂಕು ಇರುವುದು ಧೃಡವಾಗಿದೆ.

    ಕರೊನಾ ವೈರಸ್​ ಕುರಿತಾಗಿ ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದ್ದು, ದೇಶದಲ್ಲಿ 147 ಜನರು ವೈರಸ್​ ದಾಳಿಗೆ ಒಳಗಾಗಿರುವುದಾಗಿ ತಿಳಿಸಿದೆ. ಅದರಲ್ಲಿ 122 ಜನರು ವಿದೇಶಿಗರು ಎಂದು ತಿಳಿಸಲಾಗಿದೆ. ಮಹಾರಾಷ್ಟ್ರದಲ್ಲಿ 38, ಕೇರಳದಲ್ಲಿ 25, ಉತ್ತರ ಪ್ರದೇಶದಲ್ಲಿ 15 ಮತ್ತು ಕರ್ನಾಟಕದಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದು ಈ ನಾಲ್ಕು ರಾಜ್ಯಗಳು ಅತಿ ಹೆಚ್ಚು ದಾಳಿಗೊಳಗಾದ ರಾಜ್ಯಗಳಾಗಿವೆ.

    ಕೇರಳದಲ್ಲಿ ಕಳೆದ ತಿಂಗಳು ಕರೊನಾದಿಂದ ಗುಣಮುಖರಾದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 14 ಜನರನ್ನು ದೇಶದಲ್ಲಿ ಕರೊನಾದಿಂದ ಗುಣಪಡಿಸಲಾಗಿದೆ. ಕರೊನಾ ಸೋಂಕಿತರ ಬಳಿ ಇದ್ದ 5,700 ಜನರನ್ನು ತಪಾಸಣೆಯಲ್ಲಿಡಲಾಗಿದೆ ಎಂದು ಸಚಿವಾಲಯದ ವರದಿಯಲ್ಲಿ ತಿಳಿಸಲಾಗಿದೆ.

    ಒಟ್ಟಾರೆ ಪ್ರಪಂಚದಲ್ಲಿ ಮಂಗಳವಾರದಂದು 11,500 ನೂತನ ಪ್ರಕರಣಗಳೊಂದಿಗೆ ಕರೊನಾ ಪೀಡಿತರ ಸಂಖ್ಯೆ 1,79,000ಕ್ಕೆ ತಲುಪಿದೆ. ಒಂದೇ ದಿನದಲ್ಲಿ 475 ಜನರು ಮೃತರಾಗಿರುವುದು ವರದಿಯಾಗಿದ್ದು ಸಾವಿನ ಸಂಖ್ಯೆ 7,426ಕ್ಕೆ ಏರಿದೆ. (ಏಜೆನ್ಸೀಸ್​)

    ಕರೊನಾದಿಂದಾಗಿ ಗೋಮೂತ್ರ, ಸಗಣಿಗೂ ಬಂತು ಬೆಲೆ; 1 ಲೀಟರ್​ ಗೋಮೂತ್ರಕ್ಕೆ 500 ರೂ. 1 ಕೆ.ಜಿ ಸಗಣಿಗೆ 500 ರೂ.

    ಭಾರತೀಯ ಸೇನೆಯ ಯೋಧನಲ್ಲಿ ಕರೊನಾ ಪತ್ತೆ; ತಂದೆಯಿಂದ ಮಗನಿಗೆ ತಗುಲಿದ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts