More

    ಭಾರತೀಯ ಸೇನೆಯ ಯೋಧನಲ್ಲಿ ಕರೊನಾ ಪತ್ತೆ; ತಂದೆಯಿಂದ ಮಗನಿಗೆ ತಗುಲಿದ ಸೋಂಕು

    ಲಡಾಕ್​: ಪ್ರಪಂಚವೇ ಭಯದಿಂದ ಮನೆಯೊಳಗೆ ಕೂರುವಂತೆ ಮಾಡಿರುವ ಕರೊನಾ ವೈರಸ್​ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಭಾರತೀಯ ಸೇನಗೂ ಸಹ ಕರೊನಾ ಸೋಂಕು ಕಾಲಿಟ್ಟಿದ್ದು ಯೋಧನೊಬ್ಬನಲ್ಲಿ ಕರೊನಾ ವೈರಸ್​ ಇರುವುದು ಧೃಡವಾಗಿದೆ.

    ಲಡಾಕ್​ನ ಮೂಲದ ಲ್ಯಾನ್ಸ್​ ನಾಯಕ್​ ಹೆಸರಿನ ಯೋಧನ ತಂದೆ ಇರಾನ್​ಗೆ ತೆರಳಿದ್ದು ಫೆ.27ರಂದು ಭಾರತಕ್ಕೆ ಮರಳಿದ್ದಾರೆ. ಫೆ.29ರಂದು ತಂದೆಯಲ್ಲಿ ಕರೊನಾ ರೋಗ ಲಕ್ಷಣಗಳು ಕಂಡು ಬಂದಿದ್ದು ಆತನನ್ನು ಪ್ರತ್ಯೇಕಿಸಿಡಲಾಗಿದೆ. ಮಾರ್ಚ್​ 6ರಂದು ಅವರ ವೈದ್ಯಕೀಯ ವರದಿ ಬಂದಿದ್ದು ಅದರಲ್ಲಿ ಅವರಿಗೆ ಕರೊನಾ ಇರುವುದು ಧೃಡವಾಗಿದೆ.

    ಲಡಾಕ್​ ಸ್ಕೌಟ್ಸ್​ನಲ್ಲಿ ಸೇವೆ ಸಲ್ಲಿಸುತ್ತಿರುವ ಲ್ಯಾನ್ಸ್​ ನಾಯಕ್​ ಫೆ.27ರಿಂದ ಮಾರ್ಚ್​ 1ರವರೆಗೆ ರಜೆಯಲ್ಲಿದ್ದರು. ಮನೆಯಲ್ಲಿ ತಂದೆ, ಹೆಂಡತಿ, ಮಕ್ಕಳು ಮತ್ತು ತಂಗಿಯೊಂದಿಗೆ ಸಮಯ ಕಳೆದು ಯೋಧ ಮಾರ್ಚ್​ 2ರಂದು ಕೆಲಸಕ್ಕೆ ಹಾಜರಾಗಿದ್ದಾರೆ. ಕೆಲಸಕ್ಕೆ ಹಾಜರಾದ ನಂತರವೂ ಆತ ಪ್ರತ್ಯೇಕ ಕೋಣೆಯಲ್ಲಿದ್ದ ತನ್ನ ತಂದೆಯನ್ನು ಆಗಾಗ ನೋಡಿ ಬರುತ್ತಿದ್ದರು ಎನ್ನಲಾಗಿದೆ.

    ಮಾರ್ಚ್​ 6ರಂದು ಲ್ಯಾನ್ಸ್​ನ ತಂದೆಯಲ್ಲಿ ಕರೊನಾ ಧೃಡವಾಗುತ್ತಿದ್ದಂತೆ ಲ್ಯಾನ್ಸ್​ನನ್ನು ಪ್ರತ್ಯೇಕಿಸಿಡಲಾಗಿದೆ. ಆತನ ವೈದ್ಯಕೀಯ ವರದಿ ಸೋಮವಾರದಂದು ಬಂದಿದ್ದು ಅದರಲ್ಲಿ ಆತನಿಗೆ ಕರೊನಾ ಸೋಂಕು ತಗುಲಿರುವುದು ಧೃಡವಾಗಿದೆ. ಇದೀಗ ಎಸ್​ಎನ್​ಎಮ್​ ಆಸ್ಪತ್ರೆಯಲ್ಲಿ ಆತನಿಗೆ ಮತ್ತು ಆತನ ತಂದೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಯೋಧನ ಹೆಂಡತಿ ಮಕ್ಕಳು ಮತ್ತು ತಂಗಿಯನ್ನೂ ಸಹ ಪ್ರತ್ಯೇಕಿಸಿಡಲಾಗಿದೆ.

    ಯೋಧರಿಗೆ ಮಾರ್ಚ್​ 23ರಿಂದ ಪ್ರಾರಂಭವಾಗಬೇಕಿದ್ದ ತರಬೇತಿ ಕೋರ್ಸ್​ಗಳನ್ನು ಕರೊನಾ ಹರಡುವಿಕೆ ತಡೆಗಟ್ಟುವ ಸಲುವಾಗಿ ಮುಂದೂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ಅನಿವಾರ್ಯವಲ್ಲದ ತರಬೇತಿ, ಸಮಾವೇಶ ಮತ್ತು ಸಿಬ್ಬಂದಿಗಳ ಚಲನೆಯನ್ನು ರದ್ದುಗೊಳಿಸಿದಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಅವರು ಒಂಟಿಯಲ್ಲ, ನಾನೂ ಇದ್ದೇನೆ ಅವರ ಜತೆಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲ್ಲ ಎಂದು ಅಬ್ಬರಿಸಿದ ಕಾಂಗ್ರೆಸ್ ಟ್ರಬಲ್​ ಶೂಟರ್ ಡಿಕೆಶಿ!

    VIDEO: ಮಧ್ಯಪ್ರದೇಶ ಶಾಸಕರನ್ನು ಭೇಟಿ ಮಾಡಲೆತ್ನಿಸಿದ ದಿಗ್ವಿಜಯ ಸಿಂಗ್ ಬಂಧನ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts