More

    ಕರೊನಾದಿಂದಾಗಿ ಗೋಮೂತ್ರ, ಸಗಣಿಗೂ ಬಂತು ಬೆಲೆ; 1 ಲೀಟರ್​ ಗೋಮೂತ್ರಕ್ಕೆ 500 ರೂ. 1 ಕೆ.ಜಿ ಸಗಣಿಗೆ 500 ರೂ.

    ಕೊಲ್ಕತ್ತಾ: ಕರೊನಾ ವೈರಸ್​ ಚೀನಾದಲ್ಲಿ ಹುಟ್ಟಿ ಇಡೀ ಪ್ರಪಂಚವನ್ನೇ ತನ್ನ ಮುಷ್ಠಿಗೆ ತೆಗೆದುಕೊಂಡುಬಿಟ್ಟಿದೆ. ಹೀಗಿರುವಾಗ ಅನೇಕರು ಕರೊನಾ ವೈರಸ್​ ತಡೆಗೆ ದೇಸೀ ಔಷಧಗಳಿವೆ ಎಂದು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೊಲ್ಕತ್ತಾದಲ್ಲಿ ಗೋಮೂತ್ರದಿಂದ ಕರೊನಾ ತಡೆಯಬಹುದು ಎನ್ನುವ ಸುದ್ದಿ ಹೆಚ್ಚು ಹರಿದಾಡಿದ್ದು ಇದೀಗ ಅಲ್ಲಿ ಗೋಮೂತ್ರ ಮತ್ತು ಸಗಣಿ ಮಾರುವ ಅಂಗಡಿಯೇ ಆರಂಭವಾಗಿಬಿಟ್ಟಿದೆ.

    ದೆಹಲಿ ಮತ್ತು ಕೊಲ್ಕತ್ತಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾಂಕುನಿಯಲ್ಲಿ ಮಾಬುದ್​ ಅಲಿ ಹೆಸರಿನ ಹಸು ಸಂಗೋಪಕನೊಬ್ಬ ತಾತ್ಕಾಲಿಕ ಅಂಗಡಿಯನ್ನು ತೆರೆದಿದ್ದು ಅದರಲ್ಲಿ ಗೋಮೂತ್ರ ಮತ್ತು ಸಗಣಿಯನ್ನು ಮಾರಲಾರಂಭಿಸಿದ್ದಾನೆ. ದೇಸಿ ದನದ 1 ಲೀಟರ್​ ಗೋಮೂತ್ರಕ್ಕೆ 500 ರೂಪಾಯಿ ಮತ್ತು 1 ಕೆ.ಜಿ. ಸಗಣಿಗೆ 500 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಆತನ ಬಳಿ ಜೆರ್ಸಿ ದನದ ಗೋಮೂತ್ರ ಮತ್ತು ಸಗಣಿಯೂ ಲಭ್ಯವಿದ್ದು ಅದನ್ನು 300 ರೂಪಾಯಿ ಲೀಟರ್​ ಮತ್ತು ಕೆ.ಜಿಯಂತೆ ಮಾರಾಟ ಮಾಡಲಾಗುತ್ತಿದೆ.

    ಒಂದು ಜೆರ್ಸಿ ದನ ಮತ್ತು ಒಂದು ದೇಸೀ ದನವನ್ನು ಸಾಕಿಕೊಂಡಿರುವ ಮಾಬುದ್​, ಹಾಲು ಮಾರಾಟ ಮಾಡಿ ತನ್ನ ಜೀವನವನ್ನು ಸಾಗಿಸುತ್ತಾನಂತೆ. ಗೋಮೂತ್ರಾ ಸೇವನಾ ಕಾರ್ಯಕ್ರಮಗಳು ನಗರದಲ್ಲಿ ನಡೆಯುತ್ತಿವೆ ಎನ್ನುವುದು ತಿಳಿದ ನಂತರ ಒಂದಿಷ್ಟು ಲಾಭ ಮಾಡಿಕೊಳ್ಳೋಣ ಎನ್ನುವ ಆಸೆಯಿಂದ ಆತ ಈ ಅಂಗಡಿಯನ್ನು ತೆರೆದಿರುವುದಾಗಿ ಹೇಳಿಕೊಂಡಿದ್ದಾನೆ.

    ಕೊಲ್ಕತ್ತಾದಲ್ಲಿ ಸೋಮವಾರದಂದು ಗೋಮೂತ್ರದಿಂದ ಕರೊನಾ ವೈರಸ್​ ತಡೆಯಬಹುದು ಎಂದು ಹೇಳಿ ಗೋಮೂತ್ರಾ ಸೇವನಾ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮವನ್ನು ಕೇಸರಿ ಪಡೆಯ ಕೆಲಸ ಎಂದು ಟೀಕಿಸಿದ್ದ ಟಿಎಂಸಿ ಮತ್ತು ಕಾಂಗ್ರೆಸ್​ ಪಕ್ಷದ ನಾಯಕರು ಇಂಥ ಮೂಢನಂಬಿಕೆಗಳನ್ನು ನಂಬಬೇಡಿ ಎಂದು ಜನರಲ್ಲಿ ಕೇಳಿಕೊಂಡಿದ್ದರು. (ಏಜೆನ್ಸೀಸ್​)

    ಭಾರತೀಯ ಸೇನೆಯ ಯೋಧನಲ್ಲಿ ಕರೊನಾ ಪತ್ತೆ; ತಂದೆಯಿಂದ ಮಗನಿಗೆ ತಗುಲಿದ ಸೋಂಕು

    ಬೆಂಗಳೂರಿನಲ್ಲಿ ಮಧ್ಯಪ್ರದೇಶ ರಾಜಕೀಯದ ಹೈಡ್ರಾಮಾ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts