More

    2500ರ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಒಂದೇ ದಿನದಲ್ಲಿ 53ಮಂದಿ ಡಿಸ್​ಚಾರ್ಜ್​

    ಬೆಂಗಳೂರು: ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ ಒಟ್ಟು 115 ಹೊಸ ಕೊವಿಡ್​-19 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2533ಕ್ಕೆ ಏರಿದೆ.

    ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಹ್ನ 12ಗಂಟೆವರೆಗೆ 75ಮಂದಿಯಲ್ಲಿ ಕರೊನಾ ದೃಢಪಟ್ಟಿತ್ತು. ಸಂಜೆ ಹೊತ್ತಿಗೆ ಮತ್ತೂ 40 ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

    ಇದನ್ನೂ ಓದಿ: ಪಟ್ಟಣಕ್ಕೆ ಬಂದ ಕರಡಿಯನ್ನು ಸೆರೆ ಹಿಡಿಯಲು ಬಳಸಿದ ವಸ್ತು ಯಾವುದು ಗೊತ್ತಾ? ಕೇಳಿದ್ರೆ ನಗ್ತೀರಿ…!

    ಇಂದು 53 ಮಂದಿ ಕರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಡಿಸ್​ಚಾರ್ಜ್​ ಆದವರ ಒಟ್ಟು ಸಂಖ್ಯೆ 834ಕ್ಕೆ ಏರಿದೆ. ಕೊವಿಡ್​-19ನಿಂದು ಇದುವರೆಗೆ 47ಮಂದಿ ಮೃತಪಟ್ಟಿದ್ದಾರೆ.

    ಯಾವ ಜಿಲ್ಲೆಗಳಲ್ಲಿ ಎಷ್ಟು..ಇಲ್ಲಿದೆ ಮಾಹಿತಿ

    ಬೆಂಗಳೂರು ನಗರ-9
    ಮಂಡ್ಯ-5
    ಯಾದಗಿರಿ-7
    ಉಡುಪಿ-29
    ಹಾಸನ-13
    ಬೀದರ್​-12
    ದಕ್ಷಿಣ ಕನ್ನಡ-24
    ವಿಜಯಪುರ-2
    ರಾಯಚೂರು-1
    ಚಿತ್ರದುರ್ಗ-6
    ಚಿಕ್ಕಮಗಳೂರು-3
    ಹಾವೇರಿ -4

    ರಾಜ್ಯದಲ್ಲಿ ಶೇ.50ರಷ್ಟು ಕರೊನಾ ಸೋಂಕಿತರು ಗುಣಮುಖ: 75 ಹೊಸ ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts