ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಹೈದರಾಬಾದ್​: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಇದಿಷ್ಟೇ ಅಲ್ಲದೆ, ನಟ-ನಟಿಯರು ಹೇರ್​ ಸ್ಟೈಲ್ ಬಗ್ಗೆಯೂ ಸಿನಿಪ್ರಿಯರಿಗೆ ಕುತೂಹಲವಿರುತ್ತದೆ. ಇನ್ನೂ ಕೆಲವರಿಗೆ ನಟರ ಹೇರ್​ ಸ್ಟೈಲ್​ ನಿಜವೇ ಎಂಬ ಅನುಮಾನವೂ ಇರುತ್ತದೆ. ಏಕೆಂದರೆ, ಕೆಲವರು ವಿಗ್​ ಬಳಸುತ್ತಾರೆ ಎಂ​ಬ ಸಂಗತಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋದೊಂದಿಗೆ ಚರ್ಚೆಯಾಗುತ್ತಲೇ ಇರುತ್ತದೆ.

ಟಾಲಿವುಡ್​ ಸ್ಟಾರ್​​ ನಟ ಮಹೇಶ್​ ಬಾಬು ಕೂಡ ವಿಗ್​ ಧರಿಸುತ್ತಾರೆ ಎಂಬ ಚರ್ಚೆ ಆಗಾಗ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತದೆ. ಮಹೇಶ್​ ಬಾಬು ಅವರದ್ದು, ಒರಿಜನ್​ ಕೂದಲಲ್ಲ, ವಿಗ್ ಎಂದು ಹೇಳುತ್ತಾರೆ. ಈ ವಿಚಾರವಾಗಿ ಮಹೇಶ್​ ಬಾಬು ಅವರ ತಂದೆ ಹಾಗೂ ಸೂಪರ್​ ಸ್ಟಾರ್​ ಕೃಷ್ಣ ಅವರಿಗೆ ಮೇಕಪ್​ ಮ್ಯಾನ್​ ಆಗಿ ಕೆಲಸ ಮಾಡಿದ್ದ ಮಾಧವ ರಾವ್​ ಎಂಬುವರು ಈ ಹಿಂದಿನ ಸಂದರ್ಶನಗಳಲ್ಲಿ ಸ್ಪಷ್ಟನೆ ನೀಡಿದ್ದರು. ಅದರ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದೆ.

ಮಾಧವರಾವ್​ ಅವರು ಅನೇಕ ಯೂಟ್ಯೂಬ್​ ಚಾನೆಲ್​ಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಮಹೇಶ್​ ಬಾಬು ಹೇರ್​ ಸ್ಟೈಲ್​ ಬಗ್ಗೆ ಆ್ಯಂಕರ್​ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಸೂಪರ್​ಸ್ಟಾರ್​ ಕೃಷ್ಣ ಅವರು ಈ ಹಿಂದೆ ಸಿನಿಮಾದಲ್ಲಿ ನಟಿಸುವಾಗ ಒರಿಜಿನಲ್ ಕೂದಲಿನಲ್ಲೇ ನಟಿಸುತ್ತಿದ್ದರಾ? ಅಥವಾ ವಿಗ್ ಬಳಸುತ್ತಿದ್ದರಾ? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರ ನೀಡಿದ ಮಾಧವರಾವ್​, ಆರಂಭದಲ್ಲಿ ಕೃಷ್ಣ ಅವರು ತಮ್ಮ ಒರಿಜನಲ್​ ಕೂದಲಿನಲ್ಲೇ ಸಿನಿಮಾ ಮಾಡುತ್ತಿದ್ದರು. ಆದರೆ, ಕೂದಲು ತೆಳುವಾದಾಗ ವಿಗ್​ ಬಳಸಲು ಶುರು ಮಾಡಿದರು ಎಂದರು.

ಮಹೇಶ್​ ಬಾಬು ಕೂಡ ವಿಗ್​ ಬಳಸುತ್ತಾರಾ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಮಾಧವರಾವ್​, ಮಹೇಶ್​ ಬಾಬು ಯಾವಾಗಲು ವಿಗ್​ ಬಳಸುತ್ತಾರೆ. ವಿಗ್​ ಇಲ್ಲದೆ ನಟಿಸುವುದಿಲ್ಲ. ಮಹೇಶ್​ ಬಾಬು ಅವರು ತುಂಬಾ ತೆಳುವಾದ ಕೂದಲು ಹೊಂದಿರುವುದರಿಂದ ವಿಗ್​ ಬಳಸುತ್ತಾರೆ ಎಂದಿದ್ದಾರೆ. ಆರಂಭದಲ್ಲಿ ಕೆಲವು ಸಿನಿಮಾಗಳಲ್ಲಿ ಮಹೇಶ್​ ಬಾಬು ಕೂಡ ಒರಿಜಿನಲ್​ ಕೂದಲಿನಲ್ಲಿ ನಟಿಸಿದ್ದಾರೆ. ಕೂದಲು ಕಡಿಮೆಯಾದಂತೆ ವಿಗ್​ ಬಳಸಲು ಶುರು ಮಾಡಿದರು. ತಿಂಗಳಿಗೊಮ್ಮೆ ವಿಗ್ ಹಾಕಿಕೊಳ್ಳುವುದು ಕಷ್ಟ ಎಂದು ತಿಳಿದು ತಲೆಗೂದಲು ಕಸಿ ಕೂಡ ಮಾಡಿಸಿಕೊಂಡಿದ್ದಾರಂತೆ. ಸುಧಾರಿತ ಕೂದಲು ಕಸಿ ಹೊಂದಿರುವ ಹೇರ್ ಪ್ಯಾಚ್ ತಂತ್ರಜ್ಞಾನವನ್ನು ಬಳಸಲಾಗಿದೆ ಎನ್ನಲಾಗಿದೆ. ಇದಾದ ಬಳಿಕ ಮಹೇಶ್ ತಲೆಯಲ್ಲಿ ಕೂದಲು ಬೆಳೆದಿದೆ ಎಂದು ವರದಿಯಾಗಿದೆ.

ಹೇರ್ ಸರ್ಜಿಕಲ್ ಫಿಕ್ಸಿಂಗ್ ಸಿಸ್ಟಮ್ ಅನ್ನು ಹೊಂದಿಸಲಾಗಿದೆ. ಮಹೇಶ್ ಬಾಬು ಮಾತ್ರವಲ್ಲದೆ ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್, ಆಮೀರ್ ಖಾನ್ ಮುಂತಾದ ಹಲವು ಹೀರೋಗಳು ಸಹ ಈ ಹೇರ್ ಫಿಕ್ಸಿಂಗ್ ಪದ್ಧತಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ಇದೊಂದು ಹಳೆಯ ಸಂದರ್ಶನದ ವಿಷಯವಾಗಿದ್ದು, ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?

ಊರ್ವಶಿಗೆ ದುಬಾರಿ ಗಿಫ್ಟ್​ ಕೊಟ್ಟ ಹನಿಸಿಂಗ್! ಈ ಚಿನ್ನದ ಕೇಕ್​ ಬೆಲೆ ನಿಮ್ಮಿಂದ ಊಹಿಸಲು ಸಾಧ್ಯವಿಲ್ಲ

ಕೇವಲ ಐದು ಸೆಕೆಂಡ್ ಧ್ವನಿ ಕೊಟ್ಟಿದ್ದಕ್ಕೆ ಇಷ್ಟು ಕೋಟಿ ರೂ.?! ಅಬ್ಬಬ್ಬಾ ಎಂದ ನೆಟ್ಟಿಗರು

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…