ಸ್ವತಃ ತಾವೇ ವಿಮಾನ ಚಲಾಯಿಸಿಕೊಂಡು ವಿದೇಶಕ್ಕೆ ಭೇಟಿ ನೀಡಿದ ಥೈಲ್ಯಾಂಡ್ ರಾಜ-ರಾಣಿ! Paro

Paro
Published on

ಪಾರೋ: ಒಂದು ದೇಶದಿಂದ ಮತ್ತೊಂದು ದೇಶಕ್ಕೆ (paro)  ಜಾಗತಿಕ ನಾಯಕರು ಪ್ರವಾಸ ಮಾಡುವಾಗ ಅವರ ಸುತ್ತಮುತ್ತಲೂ ಬಿಗಿ ಭದ್ರತಾ ವ್ಯವಸ್ಥೆ, ಪೊಲೀಸ್​​ ಪಡೆಗಳಿರುವುದು ಸಾಮಾನ್ಯ. ಆದರೆ ಇಲ್ಲೊಂದು ದೇಶದ ರಾಜ-ರಾಣಿ ಯಾರ ಸಹಾಯವಿಲ್ಲದೆ ಸ್ವತ: ತಾವೇ ವಿಮಾನ ಓಡಿಸಿ ಭೂತಾನ್​​ಗೆ ಭೇಟಿ ನೀಡಿ ಎಲ್ಲರಿಗೂ ಅಚ್ಚರಿಮೂಡಿಸಿದ್ದಾರೆ.

ಹೌದು, ಥೈಲ್ಯಾಂಡ್ ರಾಜ ವಜಿರಲಾಂಗ್‌ ಕಾರ್ನ್ ಮತ್ತು ಅವರ ಪತ್ನಿ ರಾಣಿ ಸುತಿದಾ ಅವರು ತಾವೇ ವಿಮಾನವನ್ನು ಚಲಾಯಿಸಿಕೊಂಡು ಏ.25 (ಶುಕ್ರವಾರ)ರಂದು ಭೂತಾನ್​​​ನ ಪಾರೋಗೆ ಭೇಟಿ ನೀಡಿದ್ದಾರೆ.

ಈ ದಂಪತಿಗಳಿಬ್ಬರು ತಮ್ಮ ಬೋಯಿಂಗ್​​​ 737-800 ವಿಮಾನದ ಮೂಲಕ ಪಾರೋದಲ್ಲಿ ಇಳಿಯುವುದನ್ನು ಕಂಡು ಜನರೆಲ್ಲಾ ಅಚ್ಚರಿಗೊಂಡಿದ್ದಾರೆ. ಥೈಲ್ಯಾಂಡ್ ರಾಜ ರಾಯಲ್ ಥಾಯ್ ಸೈನ್ಯದಲ್ಲಿ ವೃತ್ತಿ ಅಧಿಕಾರಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಮಿಲಿಟರಿ ಪೈಲಟ್ ಕೂಡ ಆಗಿದ್ದರು. ಈ ದಂಪತಿಗಳಿಬ್ಬರ ಭೂತಾನ್​​ ಪ್ರವಾಸದ ವೇಳೆ ರಾಣಿ ಸುತಿದಾ ಸಹ ಪೈಲಟ್ ಆಗಿ ಗಂಡನಿಗೆ ನೆರವು ನೀಡಿದ್ದಾಳೆ.

ಭೂತಾನ್ ರಾಜನ ಆಹ್ವಾನದ ಮೇರೆಗೆ ಥೈಲ್ಯಾಂಡ್ ರಾಜ ಮತ್ತು ರಾಣಿ ಭೂತಾನ್​ಗೆ ಪ್ರವಾಸ ಬೆಳೆಸಿದ್ದರು. ವಿಮಾನ ಇಳಿಯುತ್ತಿದ್ದಂತೆ ರಾಜ ಮತ್ತು ರಾಣಿಗೆ ಭೂತಾನ್​ಲ್ಲಿ ಅದ್ಧೂರಿ ಸ್ವಾಗತ ಮಾಡಿ ಬರಮಾಡಿಕೊಳ್ಳಲಾಯಿತು. 2019ರಲ್ಲಿ ಥಾಯ್ಲೆಂಡ್ ರಾಜನಾಗಿ ಅಧಿಕಾರಕ್ಕೇರಿದ ಬಳಿಕ ಇದು ಅವರ ಮೊದಲ ಅಧಿಕೃತ ವಿದೇಶ ಭೇಟಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net