

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ನಿಶ್ಚಿಂತೆಯಿಂದಿದ್ದ ಕೃಷಿಕರಿಗೆ ಕಾಡಾನೆ ಹಾವಳಿ ಮತ್ತೆ ನಿದ್ದೆಗೆಡಿಸಿದೆ. ಕಡಿರುದ್ಯಾವರ ಗ್ರಾಮದ ರಾಮಂದೊಟ್ಟು ಜಯರಾಜ ಗೌಡ ಎಂಬವರ ತೋಟಕ್ಕೆ ಭಾನುವಾರ ರಾತ್ರಿ ನುಗ್ಗಿದ ಸಲಗ ಅಡಕೆ ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿದೆ.
ಕಡಿರುದ್ಯಾವರ, ಮುಂಡಾಜೆ ಚಾರ್ಮಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಕಳೆದ ಹತ್ತು ದಿನಗಳಿಂದ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿರಲಿಲ್ಲ. ಈಗ ಮತ್ತೆ ಕಾಡಾನೆ ಈ ಪ್ರದೇಶಗಳತ್ತ ಸುಳಿದಿರುವುದು ಕೃಷಿಕರ ಆತಂಕ ಹೆಚ್ಚಿಸಿದೆ.