ಕಗಿಸೊ ರಬಾಡ ಐಪಿಎಲ್​ನಿಂದ ಹೊರಬೀಳಲು ಕಾರಣವಾದ ಅಚ್ಚರಿಯ ಪ್ರಕರಣ ಬಹಿರಂಗ!

web rabada
Published on

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಸ್ಟಾರ್​ ವೇಗಿ ಕಗಿಸೊ ರಬಾಡ ಗುಜರಾತ್​ ಟೈಟಾನ್ಸ್​ ಪರ ಮೊದಲ 2 ಪಂದ್ಯಗಳಲ್ಲಿ ಆಡಿದ ನಂತರ ವೈಯಕ್ತಿಕ ಕಾರಣ ನೀಡಿ ಐಪಿಎಲ್​ 18ನೇ ಆವೃತ್ತಿಯಿಂದ ಹೊರಗುಳಿದಿದ್ದರು. ರಬಾಡ ಗೈರಿಗೆ ಅಸಲಿ ಕಾರಣ ಇದೀಗ ಬಹಿರಂಗಗೊಂಡಿದೆ. ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೀಪನವಲ್ಲದ ನಿಷೇಧಿತ ರಿಕ್ರಿಯೇಷನಲ್​ ಡ್ರಗ್​ (ಮನರಂಜನಾ ಉದ್ದೀಪನ) ಬಳಕೆಗಾಗಿ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಕಾರಣ ತಾನು ಐಪಿಎಲ್​ನಿಂದ ಹೊರಗುಳಿದಿದ್ದೇನೆ ಎಂದು ರಬಾಡ ಶನಿವಾರ ಬಹಿರಂಗಪಡಿಸಿದ್ದಾರೆ.

ಹಾಲಿ ತಿಂಗಳು 30ನೇ ವಯಸ್ಸಿಗೆ ಕಾಲಿಡಲಿರುವ ರಬಾಡ, ದ. ಆಫ್ರಿಕಾ ಕ್ರಿಕೆಟರ್ಸ್​ ಸಂಸ್ಥೆಯ ಮೂಲಕ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ, ಉದ್ದೀಪನ ಪರೀೆಯಲ್ಲಿ ತಾನು ಸಿಕ್ಕಿಬಿದ್ದಿದ್ದ ಕಾರಣದಿಂದಲೇ ಐಪಿಎಲ್​ನಿಂದ ತವರಿಗೆ ಮರಳಿರುವುದಾಗಿ ತಿಳಿಸಿದ್ದಾರೆ. ಜತೆಗೆ ತನ್ನ ಅಚಾತುರ್ಯಕ್ಕೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

ತವರಿನ ಎಸ್​ಎ20 ಟೂರ್ನಿಯಲ್ಲಿ ಎಂಐ ಕೇಪ್​ಟೌನ್​ ಪರ ಆಡುತ್ತಿದ್ದ ವೇಳೆ ನಡೆದ ಉದ್ದೀಪನ ಪರೀಕ್ಷೆಯಲ್ಲಿ ರಬಾಡ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ರಬಾಡ ದಣ ಆಫ್ರಿಕಾ ಪರ 70 ಟೆಸ್ಟ್​, 106 ಏಕದಿನ, 65 ಟಿ20 ಪಂದ್ಯ ಆಡಿದ್ದು, ಒಟ್ಟಾರೆ 550ಕ್ಕೂ ಅಧಿಕ ವಿಕೆಟ್​ ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net