ಡಂಬೆಲ್ಸ್​ನಿಂದ ಪತ್ನಿ ಹತ್ಯೆ; ಸ್ಥಳಕ್ಕೆ ಹೋದ ಪೊಲೀಸರಿಗೇ ಶಾಕ್: ಡಿಸಿಪಿ

dumbell urder police reac
Published on

ಬೆಂಗಳೂರು: ತನ್ನ ಹೆಂಡತಿಯನ್ನೇ ಡಂಬೆಲ್ಸ್​​ ಬಳಸಿ ಇಲ್ಲೊಬ್ಬ ಪತಿಯಾರ ಭೀಕರವಾಗಿ ಕೊಲೆ ಮಾಡಿದ್ದಾನೆ. ಈತ ಡಂಬೆಲ್​ ಬಳಸಿ ಹೆಂಡತಿಯ ತಲೆಗೆ ತೀವ್ರವಾಗಿ ಹೊಡೆದಿದ್ದು ರಕ್ತ ಧಾರಾಕಾರವಾಗಿ ನೆಲದಲ್ಲಿ ಹರಿದಿದೆ. ಮಹಿಳೆಯ ಮುಖವೂ ಒಮ್ಮೆಗೆ ಗುರುತು ಸಿಗದಷ್ಟು ರಕ್ತಸಿಕ್ತವಾಗಿದೆ. ಈ ಘಟನೆ ನಡೆದದ್ದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ.

ಮೊರೀಸ್ ಎಂಬಾತ, ತನ್ನ ಪತ್ನಿಯಾದ ಲೈದಿಯಾಳನ್ನು(44) ಕೊಲೆ ಮಾಡಿದ್ದಾನೆ. ಬೆಳಗ್ಗೆ 9.30ಕ್ಕೆ ಈ ಘಟನೆ ನಡೆದಿತ್ತು. ಈ ಭೀಕರ ಕೊಲೆಗೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಹೇಳಿಕೆ ನೀಡಿದ್ದಾರೆ.

'ಬೆಳಗ್ಗೆ ಸುಮಾರು 10.30ಗಂಟೆ ಸುಮಾರಿಗೆ ಹೊಯ್ಸಳ ಕಂಟ್ರೋಲ್ ರೂಮ್​ಗೆ ಕರೆ ಮಾಡಿದ್ದ ಮೋರಿಸ್​, ತನ್ನ ಮನೆಯಲ್ಲಿ ಕೌಟುಂಬಿಕ ಗಲಾಟೆ ನಡೀತಿದೆ ಎಂದು ಹೇಳುತ್ತಾನೆ. ಇದಕ್ಕೆ ತಕ್ಷಣ ಸ್ಪಂದಿಸಿದ ಹೊಯ್ಸಳ ಪೊಲೀಸರು ಘಟನಾ ಸ್ಥಳಕ್ಕೆ ಹೋದಾಗ ನಮ್ಮ ಪೊಲೀಸರೇ ರಕ್ತದ ಮಡಿಲು ನೋಡಿ ಶಾಕ್ ಆಗಿದ್ದಾರೆ.

ಈ ವೇಳೆ 'ನನ್ನ ಪತ್ನಿಯದ್ದೇ ಶವ ಸಾರ್. ನಾನೇ ಡಂಬಲ್ಸ್ ನಿಂದ ಹೊಡೆದಿದ್ದೇನೆ. ಕೊಲೆ‌ ಆದ್ಳು' ಎಂದು ಮೋರಿಸ್​ ಹೇಳಿದ್ದಾನೆ. ಆತ ಲೈದಿಯಾಳನ್ನು ಸುಮಾರು 5-6ಬಾರಿ ಹೊಡೆದು ಕೊಲೆ ಮಾಡಿದ್ದಾನೆ. ಮೂರು ಮಹಡಿಯ ಕಟ್ಟಡಲ್ಲಿ ಎರಡನೇ ಮನೇಲಿ ಇವರು ವಾಸ ಇರುತ್ತಾರೆ. ಬೆಳಗ್ಗೆ ಮಕ್ಕಳು ಶಾಲೆಗೆ ಹೋದಾಗ ಗಲಾಟೆ ಆಗಿ ಕೊಲೆ ಆಗಿದೆ' ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net