ಪ್ರತಿಭೆ ಹೊರಹೊಮ್ಮಲು ಕ್ರೀಡಾಕೂಟ ವೇದಿಕೆ

Tubachi 8-2
ತುಬಚಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾವಳಗಿ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಬಸವರಾಜಗೌಡ ಪಾಟೀಲ, ಸದಾಶಿವ ಕರಬಸನವರ ಇತರರಿದ್ದರು.
Published on

ತುಬಚಿ: ಗ್ರಾಮಿಣ ಪ್ರತಿಭೆ ಹೊರಹೊಮ್ಮಲು ವಲಯ ಮಟ್ಟದ ಕ್ರೀಡಾಕೂಟ ಒಂದು ಉತ್ತಮ ವೇದಿಕೆ ಎಂದು ತುಬಚಿ ಗ್ರಾಮದ ಹಿರಿಯರಾದ ಬಸವರಾಜಗೌಡ ಪಾಟೀಲ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ 2022-23ನೇ ಸಾಲಿನ ಸಾವಳಗಿ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ವಲಯ ಮಟ್ಟದ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ತಿಳಿಸಿದರು.

ಗ್ರಾಮದ ಹಿರಿಯರಾದ ಸದಾಶಿವ ಕರಬಸನವರ, ಅಪ್ಪಾಸಾಬ ಬಿರಾದಾರ, ಮುತ್ತಪ್ಪ ಕುಂಬಾರ, ನಿಂಗಪ್ಪ ಬೊರ‌್ಯಾಳ, ಮಹಾದೇವ ಬ್ಯಾಡಗಿ, ಅಶೋಕ ಗೌಡಪ್ಪನವರ, ತುಕ್ಕಪ್ಪ ಹಿಡಕಲ್, ಶಿವಲಿಂಗಪ್ಪ ಕುಂಬಾರ, ಈರಪ್ಪ ಸಿಂಧೂರ, ಅಣ್ಣಪ್ಪ ಕರಬಸನವರ, ಬಸವರಾಜ ಪಾಟೀಲ, ಮಲ್ಲಪ್ಪ ಬಾಲಪ್ಪನವರ, ಮಹಾಂತೇಶ ಅಡಹಳ್ಳಿಮಠ, ಮಲ್ಲಿಕಾರ್ಜುನ ಬಿರಾದಾರ, ಮಲ್ಲಿಕಾರ್ಜುನ ದಳವಾಯಿ, ರಾಜು ಪಾಟೀಲ, ಸದಾಶಿವ ಮುದಿಗೌಡರ, ರಾವಸಾಬ ದಳವಾಯಿ, ರಮೇಶ ಕುರಿ, ಶಾಲೆ ಮುಖ್ಯಶಿಕ್ಷಕ ಎಸ್.ಎಸ್. ಕೊಳ್ಳಿ ಹಾಗೂ ವಲಯ ಮಟ್ಟದ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net