65 ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಮೊದಲ​ ಫೋಟೋ ವೈರಲ್​​; ಒಂದು ಕೈಯಲ್ಲಿ ಕಾಫಿ ಮಗ್ಗು.. ಮತ್ತೊಂದು ಕೈಯಲ್ಲಿ ಸಿಗರೇಟ್

drashan
Published on

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಮಾಡಿದ್ದಾರೆ ಎನ್ನುವ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್ 65 ದಿನಗಳಿಂದ ಜೈಲಿನಲ್ಲಿದ್ದಾರೆ. ಇದೇ ಮೊದಲ ಬಾರಿ ದರ್ಶನ್​ ಅವರ ಫೋಟೋ ರಿಲೀಸ್​ ಆಗಿದೆ.

ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಮಾಡಿದ್ದಾರೆ ಎನ್ನುವ ಪ್ರಕರಣದಲ್ಲಿ ನಟ ದರ್ಶನ್​ ಜೈಲಿನನಲ್ಲಿದ್ದಾರೆ.   ಈ ಫೋಟೋ ವೈರಲ್​​ ಆಗುತ್ತಿದ್ದಂತೆ, ಕೊಲೆ ಆರೋಪದಲ್ಲಿ ನಟ ದರ್ಶನ್​ ಜೈಲು ಸೇರಿದ್ದು, ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಅವರಿಗೆ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಪ್ರಶ್ನೆ  ವ್ಯಕ್ತವಾಗುತ್ತಿದೆ.

ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕುಳಿತು ಬೆಂಗಳೂರಿನ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ದರ್ಶನ್ ಸಿಗರೇಟ್‌ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.ಪರಪ್ಪನ ಅಗ್ರಹಾರದ ಸ್ಪೆಷಲ್​ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ.

ಪ್ಲಾಸ್ಟಿಕ್‌ ಕುರ್ಚಿಯಲ್ಲಿ ಕುಳಿತುಕೊಂಡಿರುವ ದರ್ಶನ್‌, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್‌ ಹಿಡಿದುಕೊಂಡಿದ್ದಾನೆ. ಆತನ ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್‌ ನಾಗರಾಜ್‌ ಕೂಡ ಇದ್ದಾನೆ. ದರ್ಶನ್‌ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ.ಮಾತ್ರವಲ್ಲ ಈ ಫೋಟೋ ಹೇಗೆ ಹೊರಗಡೆ ಬಂತು ಎಂಬ ಕಥೆ ಕೂಡ ಕುತೂಹಲವಾಗಿದೆ.

ಜೈಲಿನಲ್ಲಿ ದರ್ಶನ್​ ತಲೆ ಬೋಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಫೋಟೋ ನೋಡಿದ ಬಳಿಕ ಅದು ಖಚಿತವಾಗಿದೆ. ಅವರ ವಿಗ್​ ಕೂಡ ತೆಗೆಸಲಾಗಿದೆ.

ಕೊಲೆ ಆರೋಪಿ ದರ್ಶನ್​ಗೆ ಜೈಲಲ್ಲಿ ಸಿಗರೇಟ್ ಸಿಕ್ಕಿದ್ದು ಹೇಗೆ..? ದುಡ್ಡು ಕೊಟ್ರೆ ಜೈಲಲ್ಲಿ ಏನು ಬೇಕಾದ್ರೂ ಸಿಗುತ್ತಾ? ಜೈಲಲ್ಲೂ ಕೊಲೆ ಆರೋಪಿಯ ಐಷಾರಾಮಿ ಲೈಫ್ ಇರುತ್ತಾ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net