More

    ಜೂನ್ 04ಕ್ಕೆ ಅಮೇಜಾನ್​ ಪ್ರೈಮ್​​ನಲ್ಲಿ ಫ್ಯಾಮಿಲಿ ಮ್ಯಾನ್ 2

    ಮುಂಬೈ: ಅಮೇಜಾನ್​ ಪ್ರೈಮ್​ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ದಿ ಫ್ಯಾಮಿಲಿ ಮ್ಯಾನ್​ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಬುಧವಾರ ಈ ವೆಬ್​ಸರಣಿಯ ಟ್ರೇಲರ್​ ಬಿಡುಗಡೆಯಾಗಿದ್ದು, ಜೂನ್​ ನಾಲ್ಕರಂದು ಈ ಕಾರ್ಯಕ್ರಮ ಸ್ಟ್ರೀಮ್​ ಆಗಲಿದೆ.

    ಇದನ್ನೂ ಓದಿ: ‘ಶೇರಿಂಗ್ ಎ ರೈಡ್’: ಜಾಕ್​ಲೀನ್ ಫರ್ನಾಂಡಿಸ್ ಖಾಕಿ ಖದರ್

    ಈ ವರ್ಷದ ಫೆಬ್ರವರಿ 11ರಂದೇ ದಿ ಫ್ಯಾಮಿಲಿ ಮ್ಯಾನ್​ನ ಎರಡನೆಯ ಸೀಸನ್​ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಷ್ಟರಲ್ಲಿ ತಾಂಡವ್​ ವೆಬ್​ಸರಣಿ ಬಿಡುಗಡೆಯಾಗಿ ವಿವಾದಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ದಿ ಫ್ಯಾಮಿಲ್​ ಮ್ಯಾನ್​ ಮುಂದೂಡಲ್ಪಟ್ಟಿತು. ಕೊನೆಗೆ, ಜೂನ್​ 11ರಂದು ಈ ಕಾರ್ಯಕ್ರಮ ಸ್ಟ್ರೀಮ್​ ಆಗಲಿದೆ ಎಂದು ಹೇಳಲಾಯಿತು. ಅದೀಗ ಜೂನ್​​ 4ಕ್ಕೆ ಬಿಡುಗಡೆಯಾಗಲಿದೆ.

    ದಿ ಫ್ಯಾಮಿಲಿ ಮ್ಯಾನ್​ನಲ್ಲಿ ಮನೋಜ್​ ಬಾಜ್​ಪೇಯಿ, ನ್ಯಾಷನಲ್​ ಇಂಟಲಿಜೆನ್ಸ್​ ಏಜನ್ಸಿಯ ಏಜೆಂಟ್​ ಆಗಿ ನಟಿಸಿದ್ದರು. ಈ ಸೀಸನ್ 2ನಲ್ಲೂ ಅವರು ಭಯೋತ್ಪಾದಕರ ವಿರುದ್ಧ ಹೋರಾಡಲಿದ್ದಾರೆ. ಎರಡನೇ ಸೀಸನ್​ನಲ್ಲಿ ವಿಶೇಷ ಆಕರ್ಷಣೆ ಎಂದರೆ ಅದು ಟಾಲಿವುಡ್​ ನಟಿ ಸಮಂತಾ. ಈ ಬಾರಿ ಅವರು ಸೂಸೈಡ್​ ಬಾಂಬರ್​ ಆಗಿ ಕಾಣಿಸಿಕೊಂಡಿದ್ದು, ಅವರನ್ನು ತಡೆಯುವುದಕ್ಕೆ ಮನೋಜ್​ ಬಾಜ್ಪೇಯಿ ಏನೆಲ್ಲಾ ಮಾಡುತ್ತಾರೆ ಎಂಬುದು ಈ ಸೀಸನ್​ನ ಹೈಲೈಟ್​ ಆಗಲಿದೆ.

    ಇದನ್ನೂ ಓದಿ: ಸೂರರೈ ಪೊಟ್ರು ಹೊಸ ಸಾಧನೆ; ಜಗತ್ತಿನ ಸಾವಿರ ಚಿತ್ರಗಳ ಪೈಕಿ 3ನೇ ಸ್ಥಾನ

    ರಾಜ್​ ಮತ್ತು ಡಿಕೆ ಈ ವೆಬ್​ಸರಣಿಯನ್ನು ನಿರ್ದೇಶಿಸಿರುವ ಈ ಸರಣಿಯಲ್ಲಿ ಪ್ರಿಯಾಮಣಿ, ಶರದ್​ ಕೇಳ್ಕರ್​ ಸೇರಿದಂತೆ ಸಾಕಷ್ಟು ಜನಪ್ರಿಯ ನಟ-ನಟಿಯರು ಇದರಲ್ಲಿ ನಟಿಸಿದ್ದಾರೆ.

    ಮತ್ತೆ ಕಿರಿಕ್ ಮಾಡಲ್ಲ! ರಶ್ಮಿಕಾ ಕೊಟ್ಟಿದ್ದಾರೆ ಹೀಗೊಂದು ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts