ನಿಟ್ಟೆ ಕೈಲಾಜೆ ರಸ್ತೆಯೆಲ್ಲ ಹೊಂಡಗುಂಡಿ

road
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ವರ್ಷಗಳ ಹಿಂದೆ ಡಾಂಬರೀಕರಣಗೊಂಡ ರಸ್ತೆ ನಂತರದ ದಿನಗಳಲ್ಲಿ ಸರಿಯಾದ ನಿರ್ವಹಣೆ ಕೊರತೆಯಿಂದ ಜಲ್ಲಿ ಟಾರು ಕಿತ್ತುಹೋಗಿ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಅತ್ತಿತ್ತ ಸಾಗುವ ವಾಹನ ಸವಾರರು ಹಾಗೂ ಗ್ರಾಮದ ಜನತೆ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.

ನಿಟ್ಟೆ ಗ್ರಾಪಂ ವ್ಯಾಪ್ತಿಯ ನಿಟ್ಟೆ ಕೈಲಾಜೆ ಶ್ರೀ ಉಮಾಮಹೇಶ್ವರ ದೇವಾಲಯ ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿಗೆ ವರ್ಷಗಳಿಂದ ಬೇಡಿಕೆ ಕೇಳಿಬರುತ್ತಿದ್ದರೂ ರಸ್ತೆ ಸರಿಪಡಿಸುವತ್ತ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ಸುಮಾರು 2 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ಬಿಡಿ, ಕಾಲು ನಡಿಗೆಗೂ ಯೋಗ್ಯವಲ್ಲದ ಮಟ್ಟಕ್ಕೆ ತಲುಪಿದೆ. ಈಗಾಗಲೇ ಈ ರಸ್ತೆ ದುರಸ್ತಿ ಕಾರ್ಯದ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ಸ್ಥಳೀಯರು ತಂದರೂ ಇಲ್ಲಿವರೆಗೂ ಯಾವುದೇ ಪ್ರಯೋಜವಾಗಿಲ್ಲ.

ವಾಹನ ಸಂಚಾರ ಸಂಕಟ

ಮನಸ್ಸಿಗೆ ನೆಮ್ಮದಿ ಸಿಗಲೆಂದು ಭಕ್ತರು ದೇವಾಲಯಕ್ಕೆ ಬರುತ್ತಾರೆ. ಆದರೆ ಇಲ್ಲಿ ದೇವಾಲಯಕ್ಕೆ ಬರುವ ಸುಮಾರು ಎರಡು ಕಿ.ಮೀ ಉದ್ದದ ರಸ್ತೆ ಸಾಗಿ ಬರುವ ವಾಹನ ಸವಾರರು ರಸ್ತೆ ಪರಿಸ್ಥಿತಿಯಿಂದ ಇದ್ದ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ನಿತ್ಯ ಈ ಭಾಗದ ರಸ್ತೆಯಲ್ಲಿ ಓಡಾಡುವ ಸ್ಥಳೀಯರು ಹಾಗೂ ಭಕ್ತರು ನಿತ್ಯ ಹಿಡಿಶಾಪ ಹಾಕುವುದು ಮಾಮೂಲು. ಅಲ್ಲದೆ ಸಾಕಷ್ಟು ಬೈಕ್ ಸವಾರರು ಜಲ್ಲಿ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪರಿಣಾಮ ಎಡವಟ್ಟು ಮಾಡಿಕೊಂಡು ಬಿದ್ದು ಗಾಯಗೊಂಡ ನಿದರ್ಶನವೂ ಇಲ್ಲಿ ಸಾಕಷ್ಟಿದೆ. ಇಲ್ಲಿನ ರಸ್ತೆಯಲ್ಲಿ ವಾಹನದಲ್ಲಿ ಓಡಾಡುವುದೇ ಒಂದು ರೀತಿಯಲ್ಲಿ ಸಂಕಟ ತರಿಸುತ್ತದೆ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.

ಸರಿಪಡಿಸಲು ಒತ್ತಾಯ

ನಿಟ್ಟೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ರಸ್ತೆ ಜಿಪಂ ಅನುದಾನದಲ್ಲಿ ವರ್ಷಗಳ ಹಿಂದೆ ನಿರ್ಮಾಣ ಮಾಡಿ, ಡಾಂಬರೀಕರಣ ಮಾಡಲಾಗಿತ್ತು, ಆದರೆ ಆ ಬಳಿಕದ ವರ್ಷಗಳಲ್ಲಿ ಯಾವುದೇ ಡಾಂಬರಿನ ತೇಪೆ ಹಾಕುವ ಕಾರ್ಯ ಇಲ್ಲಿ ನಡೆದಿಲ್ಲ. ಹೀಗಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಇದೀಗ ಇಲ್ಲಿನ ಸ್ಥಳೀಯ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದು, ಅಲ್ಲದೆ ದೇವಾಲಯಕ್ಕೆ ಬರುವ ಭಕ್ತರು ಸಂಕಟ ಅನುಭವಿಸುವಂತಾಗಿದ್ದು ಇಲ್ಲಿನ ರಸ್ತೆ ಕೂಡಲೇ ಸರಿಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆಯ ಡಾಂಬರು ಸಂಪೂರ್ಣ ಕಿತ್ತುಹೋಗಿ ಜಲ್ಲಿ ಟಾರು ಎಲ್ಲಾವೂ ಚೆಲ್ಲಾಪಿಲ್ಲಿಯಾಗಿದೆ. ಹೀಗಾಗಿ ವಾಹನಗಳು ಓಡಾಡುವುದೇ ಕಷ್ಟಕರವಾಗಿದೆ. ಈಗಾಗಲೇ ಸಾಕಷ್ಟು ಸವಾರರು ಬಿದ್ದು ಗಾಯಗೊಂಡಿದ್ದಾರೆ. ಸುದೀಪ್ ವಾಹನ ಸವಾರ ವರ್ಷಗಳ ಹಿಂದೆ ನಿರ್ಮಾಣಗೊಂಡ ರಸ್ತೆ ಮತ್ತೆ ಸರಿಪಡಿಸುವಲ್ಲಿ ಮುಂದಾಗಿಲ್ಲ. ಹೀಗಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಓಡಾಡುವುದೇ ಕಷ್ಟಕರವಾಗಿದೆ. ಸಣ್ಣ ಪುಟ್ಟ ವಾಹನದಲ್ಲಿಯಂತೂ ಓಡಾಡುವುದೇ ಕಷ್ಟ ಸಾಧ್ಯ. ಅರುಣ್ ಗ್ರಾಮಸ್ಥ https://www.vijayavani.net/daivajna-brahmin-sangha-anniversary https://www.vijayavani.net/ramtaraka-mantra-japa-yajna-in-gangolli

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net