ಟೆಂಡರ್​ ಉಲ್ಲಂಘಿಸಿದ ಇಂಜಿನಿಯರ್​ ತಲೆದಂಡ

klr cmc
ಕೋಲಾರ ನಗರಸಭೆ ಕಚೇರಿ
Published on

ಕೋಲಾರ: ಸ್ವಚ್ಛ ಭಾರತ್​ ಮಿಷನ್​&1.0 ಯೋಜನೆಯಡಿ ಸ್ವಚ್ಛತಾ ಸಲಕರಣೆ ಖರೀದಿಯಲ್ಲಿನ ಅಕ್ರಮ ಪ್ರಕರಣದ ಸಂಬಂಧ ನಗರಸಭೆಯ ಇಂಜಿನಿಯರ್​ ತಲೆದಂಡವಾಗಿದೆ.

ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ (ಪರಿಸರ) ಎನ್​.ಆರ್​.ದಿಲೀಪ್​ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದು, ಅವರನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸರ್ಕಾರಕ್ಕೆ ಶಿಾರಸು ಮಾಡಿದ್ದರು. ವರದಿ ಪರಿಶೀಲಿಸಿರುವ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್​ ಅಮಾನತುಗೊಳಿಸಿ ಸೋಮವಾರ ಆದೇಶಿಸಿದ್ದಾರೆ.

ಎನ್​.ಆರ್​.ದಿಲೀಪ್​ ಕರ್ತವ್ಯಲೋಪವೆಸಗಿರುವುದು ಮೇಲ್ನೊಟಕ್ಕೆ ದೃಢಪಟ್ಟಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957ರ ನಿಯಮ-10(1)(ಡಿ) ಅಡಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಡುವಂತಿಲ್ಲ. ಜೀವನಾಧಾರ ಭತ್ಯೆಗೆ ಅರ್ಹರಿದ್ದು, ಶಹಬಾದ್​ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಸ್ಥಳಾಂತರಿಸಿ ಆದೇಶ ಮಾಡಲಾಗಿದೆ.

* ಏನಿದು ಪ್ರಕರಣ:

ಸ್ವಚ್ಛ ಭಾರತ್​ ಮಿಷನ್​&1.0 ಯೋಜನೆಯಡಿ 2024ರ ಜನವರಿ 1ರಂದು ಸ್ವಚ್ಛತಾ ಸಲಕರಣೆ ಖರೀದಿಯಲ್ಲಿ 2 ಚಾರ್ಜಿಂಗ್​ ಪಾಯಿಂಟ್​ ಖರೀದಿಗೆ 6.77 ಲಕ್ಷಕ್ಕೆ ಅನುಮೋದನೆ ನೀಡಲಾಗಿದ್ದು, ಎಸ್​ಆರ್​ ದರ ಲಭ್ಯವಿಲ್ಲದ ಕಾರಣ ಕೊಟೇಷನ್​ ಕರೆದು ದರಗಳನ್ನು ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕಿತ್ತು, ಆದರೆ ಅನುಮೋದನೆ ಪಡೆಯದೆ ಪ್ಯಾಕೇಜ್​ ಟೆಂಡರ್​ನಲ್ಲಿ ನತ್ಯಾಜ್ಯ ವಸ್ತು ನಿರ್ವಹಣೆಗೆ ಬೇಕಾಗಿರುವ ಬ್ಯಾಕ್​ ಹೆವಿ ಲೋಡರ್​-1, ಕಾಂಪ್ಯಾಕ್ಟರ್​-1, ಸಿಸಿ ಕ್ಯಾಮರಾ&2, ಟ್ರಾ$್ಯಕ್ಟರ್​ ಇಂಜಿನ್​&2 ಗಳನ್ನು ಒಂದೇ ಟೆಂಡರ್​ನಲ್ಲಿ ಕರೆದಿರುವುದಾಗಿ ತೋರಿಸಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ.

ಅಲ್ಲದೆ ಟೆಂಡರ್​ನಲ್ಲಿ ಭಾಗವಹಿಸಿರುವ ಬಿಡ್​ದಾರರ ದಾಖಲೆ ಲಭ್ಯವಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸ್​ಡಬ್ಲುಎಂ ಸಮಿತಿಯಲ್ಲಿ ಅನುಮೋದನೆ ಪಡೆಯದೆ ನೇರವಾಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆೆ.

ಎಲೆಕ್ಟ್ರಿಕಲ್​ ಆಟೋ ಟಿಪ್ಪರ್​&6, ಪುಷ್​ಕಾರ್ಟ್-&15, ವೀಲ್​ ಬಾರ್​ *12 ಖರೀದಿಗೂ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯದೆ ಇಂಜಿನಿಯರ್​ ದಿಲೀಪ್​ ಟೆಂಡರ್​ ಕರೆದಿರುವುದು ಗೊತ್ತಾಗಿದೆ.

ತ್ಯಾಜ್ಯ ನಿರ್ವಹಣಾ ಟಕಕ್ಕೆ 80 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್​ ಸಂಸ್ಕರಣಾ ಯಂತ್ರ ಅಳವಡಿಸಿದ್ದು, ಎನ್​ಜಿಡಿ 606/2018ರ ಆದೇಶಗಳನ್ವಯ ಪ್ರತಿ ವರ್ಷ ಅಫಿಡವಿಟ್​ ಸಲ್ಲಿಸಬೇಕಾಗಿರುವುದರಿಂದ ಟ್ರಾನ್ಸ್​ಪೋರ್ಟೇಷನ್​, ಕನೆಕ್ಷನ್​ ಮತ್ತು ಸಕ್ರಿಗೇಷನ್​ನನ್ನು ಸರಿಯಾದ ರೀತಿ ಮಾಡುವಲ್ಲಿ ವಿಲರಾಗಿದ್ದಾರೆ. ನತ್ಯಾಜ್ಯ ವಸ್ತು ನಿರ್ವಹಣೆಯ ಟಕಕ್ಕೆ ಪರಿಸರ ಮಾಲಿನ್ಯ ಅಧಿಕಾರಿಗಳಿಂದ ಎಂಎಸ್​ಡಬ್ಲು ಅರ್ಹತೆಯ ಅನುಮತಿ ಪಡೆಯದ ಕಾರಣ ಕಟ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಹಲವು ಬಾರಿ ಸಾಮಾನ್ಯ ಸಭೆಗಳಲ್ಲಿ ಮೌಖಿಕವಾಗಿ ಸೂಚಿಸಿದ್ದರೂ ಯಾವುದೇ ಕ್ರಮವಹಿಸುವಲ್ಲಿ ವಿಲರಾಗಿದ್ದಾರೆ. ನ ತ್ಯಾಜ್ಯ ನಿರ್ವಹಣಾ ಟಕಕ್ಕೆ ಸುಮಾರು < 1 ಕೋಟಿ ವೆಚ್ಚದಲ್ಲಿ 8 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್​ ಸಂಸ್ಕರಣಾ ಯಂತ್ರ ಅಳವಡಿಸಿದ್ದು, ನಗರದಲ್ಲಿನ ತ್ಯಾಜ್ಯವನ್ನು ಟಕಕ್ಕೆ ತಲುಪಿಸಿ ನಿರ್ವಹಣೆ ಮಾಡುವಲ್ಲಿ ಕೂಡ ಇಂಜಿನಿಯರ್​ ಮತ್ತು ತಂಡದವರು ವಿಲರಾಗಿದ್ದಾರೆ.

* ಯಾವುದಕ್ಕೆ ಎಷ್ಟೆಷ್ಟು ಬಿಲ್​?

6 ಬುಲೆಟ್​ ಸಿಸಿ ಕ್ಯಾಮರಾಗೆ ಮಾರುಕಟ್ಟೆ ಬೆಲೆ 10 ಸಾವಿರ ರೂ. ಇದ್ದರೆ ಬಿಲ್​ ಪಾವತಿ ಮಾಡಿರುವುದು 6.5 ಲಕ್ಷ ರೂ., 34 ಸಾವಿರ ರೂ. ಬೆಲೆಯ 2 ಚಾರ್ಜಿಂಗ್​ ಪಾಯಿಂಟ್​ಗೆ 8 ಲಕ್ಷ ರೂ., 1.20 ಲಕ್ಷ ಬೆಲೆಯ 15 ಪುಶ್​ ಕಾರ್ಟ್​ಗೆ 5.5 ಲಕ್ಷ ರೂ., 60 ಲಕ್ಷ ಬೆಲೆಯ 6 ಎಲೆಕ್ಟ್ರಿಕ್​ ಮಿನಿ ಟಿಪ್ಪರ್​ಗೆ 98 ಲಕ್ಷ ರೂ. ನೀಡಲಾಗಿದೆ. <25 ಲಕ್ಷದ ರೆಪ್ಯೂಸ್​ ಕಾಂಪ್ಯಾಕ್ಟರ್​ಗೆ 51 ಲಕ್ಷ ರೂ. ಬಿಲ್​ ಪಾವತಿ ಮಾಡಲಾಗಿದ್ದು, ಇದರ ಇನ್​ವಾಯ್ಸ್​ ಬಿಲ್​ "ವಿಜಯವಾಣಿ'ಗೆ ಲಭ್ಯವಾಗಿದೆ. 16,500 ರೂ. ಬೆಲೆಯಿರುವ ಒಂದು ಇವಿ ಚಾರ್ಜರ್​ಗೆ ಹೆಚ್ಚುವರಿಯಾಗಿ 3.38 ಲಕ್ಷ ರೂ. ಹೀಗೆ ಎರಡು ಚಾರ್ಜರ್​ಗಳಿಗೆ ಒಟ್ಟು 7.99 ಲಕ್ಷ ರೂ. ಪಾವತಿ ಮಾಡಲಾಗಿದ್ದು, ಸರ್ಕಾರದ ಅನುದಾನ ದುರುಪಯೋಗಪಡಿಸಲಾಗಿದೆ.

* ಬೆಳಕು ಚೆಲ್ಲಿದ್ದ ವಿಜಯವಾಣಿ

ಸ್ವಚ್ಛ ಭಾರತ್​ ಮಿಷನ್​&1.0 ಯೋಜನೆಯಡಿ ನಗರಸಭೆಯಿಂದ "ಸ್ವಚ್ಛತಾ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ?', ಶೀರ್ಷಿಕೆಯಡಿ ಅಕ್ಟೋಬರ್​ 16 ಮತ್ತು 24ರಂದು "ವಿಜಯವಾಣಿ'ಯಲ್ಲಿ ಸರಣಿ ವರದಿ ಮೂಲಕ ಬೆಳಕು ಚೆಲ್ಲಲಾಗಿತ್ತು. ಈ ಬಗ್ಗೆ ಸಾಮಾನ್ಯ ಸಭೆಯಲ್ಲೂ ವ್ಯಾಪಕ ಚರ್ಚೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net