ಪ್ರಸ್ತುತ ಕಾಂಕ್ರೀಟ್ ಕಾಡಿನಲ್ಲಿ ವಾಸ್ತವ್ಯ ಖೇದ

kota (9)
Published on

ಕೋಟ: ಪರಿಸರದ ಬಗ್ಗೆ ಪ್ರಾಥಮಿಕ ಹಂತದಲ್ಲೆ ಜಾಗೃತಿ ಮೂಡಿಸಬೇಕಿದೆ. ಪ್ರಸ್ತುತ ದಿನಗಳಲ್ಲಿ ನಮ್ಮ ವಾಸ್ತವ್ಯ ಕಾಂಕ್ರೀಟ್ ಕಾಡುಗಳಲ್ಲಾಗಿದೆ ಇದರಿಂದ ವಾತಾವರಣದಲ್ಲಿ ಭಾರಿ ವ್ಯತ್ಯಾಸ ಕಾಣುವಂತ್ತಾಗಿದೆ. ನಮ್ಮ ಹಿರಿಯರು ನಮ್ಮಗೆ ಹಸಿರು ಹಾಗೂ ಉಸಿರು ನೀಡಿದ್ದಾರೆ ಅದೇ ರೀತಿ ಮುಂದಿನ ಜನಾಂಗಕ್ಕೆ ನಾವುಗಳು ಈಗಿಂದಿಗಲೇ ಕಾರ್ಯಪ್ರವೃತರಾಗಿ ಹಸಿರು ಕ್ರಾಂತಿ ಸೃಷ್ಟಿಸುವ ಎಂದು ಪರಿಸರ ಪ್ರೇಮಿ ಶಿಕ್ಷಕ ಕೋಡಿ ಅನಂತಯ್ಯ ನಾವಡ ಅಭಿಪ್ರಾಯಪಟ್ಟರು.

ಕೋಟ ಪಂಚವರ್ಣ ಯುವಕ, ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಡಾಕೆರೆ ಕುಂಬ್ರಿ ಕೋಟೇಶ್ವರ ಇವರ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಅನ್ನಪೂರ್ಣ ನರ್ಸರಿ ಪೇತ್ರಿ ಕೊಡ ವಾಡಿದ ಗಿಡಗಳನ್ನು ವಿತರಿಸಿ ಮಾತನಾಡಿದರು.

ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ವಿವಿಧ ತರಹದ ತಳಿಗಳ ಗಿಡಗಳನ್ನು ವಿತರಿಸಲಾಯಿಲಾಯಿತು. ಪಂಚವರ್ಣ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಮಕ್ಕಳಿಗೆ ಪರಿಸರ ಜಾಗೃತಿ ವಾಹಿತಿ ನೀಡಿದರು.

ಹೊಸ ಬಡಾಕೆರೆ ಕುಂಬ್ರಿ ಕೋಟೇಶ್ವರ ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ ಕೃಪಾಶ್ರೀ ಪುರಾಣಿಕ್, ಶಾಲಾ ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಆನಂದ್ ಕುಂದರ್, ಪ್ರೌಢ ಶಾಲಾ ಇಕೋ ಕ್ಲಬ್ ಶಿಕ್ಷಕಿ ಮಂಗಳ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ರುಕ್ಮ ಖಾರ್ವಿ, ಉದ್ಯಮಿ ಮುರಳಿ ಗಾಣಿಗ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿ, ಅಜಿತ್ ಆಚಾರ್ ವಂದಿಸಿದರು. ರವೀಂದ್ರ ಕೋಟ ಸಂಯೋಜಿಸಿದರು. ಸುಜಾತ ಬಾಯರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net