More

    ಕರೊನಾ ಲಾಕ್‌ಡೌನ್‌ನಲ್ಲಿ ಮಗಳ ಸಮಾನ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

    ಬೆಂಗಳೂರು: ಕರೊನಾ ಲಾಕ್‌ಡೌನ್‌ನಲ್ಲಿ ಮಗಳ ಸಮಾನಳಾದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್​ಎಸ್‌ಸಿ-3ನೇ ನ್ಯಾಯಾಲಯ ತೀರ್ಪು ನೀಡಿದೆ.

    3 ತಿಂಗಳ ಕಾಲ ಲೈಂಗಿಕ ದೌರ್ಜನ್ಯ

    ಪಿಳ್ಳಗಾನಹಳ್ಳಿ ರಾಘವೇಂದ್ರ ಲೇಔಟ್ ನಿವಾಸಿ ಶಾಂತಕುಮಾರ್ ಅಲಿಯಾಸ್ ಶಾಂತರಾಜ್ ಶಿಕ್ಷೆಗೆ ಒಳಗಾದ ಅಪರಾಧಿ. ತಂದೆ-ತಾಯಿ ಜತೆಗೆ ಸಂತ್ರಸ್ತೆ ನೆಲೆಸಿದ್ದಳು. ಕರೊನಾ ಲಾಕ್‌ಡೌನ್‌ನಲ್ಲಿ 2020ರ ಜೂನ್ ಮೊದಲನೇ ವಾರದ ವರೆಗೂ ಅಪರಾಧಿ, ಸಂತ್ರಸ್ತೆ ಮನೆಯಲ್ಲಿ ನೆಲೆಸಿದ್ದ. ಅಪರಾಧಿಗೆ ಸಂತ್ರಸ್ತೆ ಮಗಳ ಸಮಾನಳಾಗಿದ್ದಳು. ಈ ವಿಚಾರ ಗೊತ್ತಿದ್ದರೂ ಶಾಂತಕುಮಾರ್, ಸಂತ್ರಸ್ತೆ ಮೇಲೆ ನಿರಂತರವಾಗಿ 3 ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದ. ಎಲ್ಲಿಯಾದರೂ ಬಾಯಿಬಿಟ್ಟರೇ ರೌಡಿಗಳನ್ನು ಕರೆತಂದು ಎಲ್ಲರು ಮಲಗಿದ್ದಾಗ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ.

    ಇದನ್ನೂ ಓದಿ: ಕಂಪನಿ ಮಾಲೀಕನ ಬ್ಯಾಂಕ್​ ಖಾತೆಯಿಂದ ಬಾಯ್​ಫ್ರೆಂಡ್​ ಖಾತೆಗೆ ಹಣ ವರ್ಗಾವಣೆ: ನಾಲ್ವರ ಬಂಧನ

    ಇದರ ನಡುವೆ ಸಂತ್ರಸ್ತೆ, ಗರ್ಭೀಣಿ ಆಗಿದ್ದಳು. ತಾಯಿ, ತನ್ನ ಮಗಳನ್ನು ಜಯನಗರ ಜನರಲ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಗರ್ಭೀಣಿ ಆಗಿರುವುದು ದೃಢವಾಗಿತ್ತು. ಬಳಿಕ ವೈದ್ಯರ ಸಮುಖದಲ್ಲಿ ಸಂತ್ರಸ್ತೆ, ಕೋಣನಕುಂಟೆ ಪೊಲೀಸರಿಗೆ ದೂರು ಸಲ್ಲಿಸಿದ್ದಳು. ಇದರ ಮೇರೆಗೆ ಪೋಕ್ಸೋ ಪ್ರಕರಣ ದಾಖಲು ಮಾಡಿಕೊಂಡ ತನಿಖಾಧಿಕಾರಿ ಎಸ್. ನಂಜೇಗೌಡ, ಅಪರಾಧಿ ಶಾಂತಕುಮಾರ್‌ನ್ನು ಬಂಧಿಸಿದ್ದರು.

    20 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ

    ಸಂತ್ರಸ್ತೆಗೆ ಜನಿಸಿದ ಮಗುವಿನ ರಕ್ತದ ಸ್ಯಾಂಪಲ್ ಪಡೆದು ಕೋರ್ಟ್ ಅನುಮತಿ ಪಡೆದು ಡಿಎನ್‌ಎ ಪರೀಕ್ಷೆ ನಡೆಸಿದಾಗ ಅಪರಾಧಿ ಡಿಎನ್‌ಎಗೆ ಹೋಲಿಕೆ ಆಗಿತ್ತು. ಈ ಎಲ್ಲ ಮಾಹಿತಿ ಆಧರಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು. ನ್ಯಾ.ಇಷ್ರತ್ ಜಹಾನ್ ಅರ ಅವರು ವಾದ-ಪ್ರತಿವಾದ ಆಲಿಸಿ, ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂತ್ರಸ್ತೆಗೆ 4 ಲಕ್ಷ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.

    ಪಶ್ಚಿಮ ಬಂಗಾಳದ ಬ್ಯಾನ್​ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ: ದಿ ಕೇರಳ ಸ್ಟೋರಿ ಚಿತ್ರತಂಡಕ್ಕೆ ಗೆಲುವು

    ಸೀಮೆಬದನೆ ರೂಪದ ಮಾವಿನ ಹಣ್ಣು! ಉಡುಪಿಯಲ್ಲಿ ಪ್ರಕೃತಿ ವೈಚಿತ್ರ್ಯ ಪತ್ತೆ…

    ಸಿದ್ದರಾಮಯ್ಯ ಮತ್ತೆ ಸಿಎಂ; ಬಡವರ ಪಾಲಿಗೆ ವರದಾನವಾಗಿದ್ದ ಇಂದಿರಾ ಕ್ಯಾಂಟೀನ್​ಗೆ ಸಿಗಲಿದ್ಯಾ ಮರುಜೀವ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts