ವಾಗ್ಯುದ್ಧಕ್ಕೆ ಸಾಕ್ಷಿಯಾದ ಕೋಮುಲ್​ ಸಭೆ

komul gbm
ವೇದಿಕೆಯಲ್ಲಿ ಎಸ್​.ಎನ್​.ನಾರಾಯಣಸ್ವಾಮಿ ಅವರನ್ನು ಮನವೊಲಿಸುತ್ತಿರುವ ಅಧ್ಯಕ್ಷ ನಂಜೇಗೌಡ ಹಾಗೂ ನಿರ್ದೇಶಕರು.
Published on

ಕೋಲಾರ: ಕೋಲಾರ ಜಿಲ್ಲಾ ಹಾಲು ಸಹಕಾರ ಸಂಗಳ ಒಕ್ಕೂಟ (ಕೋಮುಲ್​) ಸರ್ವ ಸದಸ್ಯರ ಸಭೆ ವಾಗ್ಯುದ್ಧಕ್ಕೆ ಸಾಯಾಯಿತು.

ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯ ಆರಂಭದಲ್ಲಿ ಒಕ್ಕೂಟದ ನಿರ್ದೇಶಕ ಹಾಗೂ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತಾಧಿಕಾರಿ ಡಾ.ಮೈತ್ರಿ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಅನುಮೋದನೆ, ಸೋಲಾರ್​ ಟಕ, ಎಂವಿಕೆ ಡೇರಿ ನಿರ್ಮಾಣ ಕುರಿತು ಪ್ರಶ್ನೆಯೆತ್ತಿದರು. ಇದಕ್ಕೆ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಅವರು ಸಮಜಾಯಿಷಿ ನೀಡಿದರು.

ಆಡಳಿತಾಧಿಕಾರಿ ಅವಧಿಯಲ್ಲಿನ ಹಣಕಾಸು ವಿಚಾರಗಳಿಗೆ ನಂಜೇಗೌಡ ಅನುಮೋದನೆ ಪಡೆಯಲು ವಿಷಯ ಮಂಡಿಸಿದರು. ಇದಕ್ಕೆ ಬಹುತೇಕ ಸದಸ್ಯರು ಅನುಮೋದನೆ ನೀಡಿದರಾದರೂ ನಾರಾಯಣಸ್ವಾಮಿ ವಿರೋಧಿಸಿ ಅನುಮೋದನೆ ನೀಡಬಾರದು ಎಂದು ಪಟ್ಟು ಹಿಡಿದರು.

ಈ ಹಿಂದೆ ಆಡಳಿತ ಮಂಡಳಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ ಸಮಿತಿ ನೇಮಿಸಲಾಗಿದೆ. ಅಲ್ಲದೇ, ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸಮಿತಿ ವರದಿ ಹಾಗೂ ಸರ್ಕಾರದ ವರದಿ ಬಂದ ಮೇಲೆ ಕ್ರಮ ವಹಿಸಲಾಗುವುದು ಎಂದು ನಂಜೇಗೌಡ ಭರವಸೆ ನೀಡಿದರು.

ಆಗ ನಾರಾಯಣಸ್ವಾಮಿ, ಇದು ರೈತರು ಹಾಗೂ ಮಹಿಳೆಯರ ಶ್ರಮದ ವಿಚಾರ. ನೀವು ಏಕೆ ಆಡಳಿತಾಧಿಕಾರಿ ಪರ ವಕಾಲತು ವಹಿಸುತ್ತೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಂಜೇಗೌಡ, ಆಡಳಿತ ಮಂಡಳಿಯಲ್ಲಿ ಕೈಗೊಂಡ ನಿರ್ಧಾರಗಳನ್ನು ಆಡಳಿತಾಧಿಕಾರಿ ಅನುಷ್ಠಾನಗೊಳಿಸಿರುತ್ತಾರೆ. ಏನಾದರೂ ವ್ಯತ್ಯಾಸಗಳಿದ್ದರೆ ತನಿಖಾ ವರದಿಯಲ್ಲಿ ಗೊತ್ತಾಗುತ್ತದೆ. ಆ ಸಮಿತಿಯಲ್ಲಿ ನಿವೂ ಸದಸ್ಯರಾಗಿದ್ದೀರಿ. ವರದಿ ಬಂದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿರ್ದೇಶಕರಾದ ಜೈಸಿಂಹ ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್​, ಹನುಮೇಶ್​, ವಡಗೂರು ಹರೀಶ್​, ಕಾಂತಮ್ಮ, ಚಂಜಿಮಲೆ ಜೆ.ರಮೇಶ್​, ಚೆಲುವನಹಳ್ಳಿ ನಾಗರಾಜಪ್ಪ, ಶ್ರೀನಿವಾಸ್​, ಕೆ.ಕೆ.ಮಂಜುನಾಥ್​, ಶಾಮೇಗೌಡ, ಮಹಾಲಕ್ಷ್ಮಿ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್​.ಗೋಪಾಲಮೂರ್ತಿ, ಅಡ್ಮಿನ್​ ನಾಗೇಶ್​ ಹಾಜರಿದ್ದರು.

* ಉತ್ಪನ್ನಗಳ ಮಾರಾಟ ಹೆಚ್ಚಲಿ

ತುರಾಂಡಹಳ್ಳಿ ವೆಂಕಟೇಶ್​ ಮಾತನಾಡಿ, ಒಕ್ಕೂಟ ವಿಭಜನೆಯ ನಂತರವೂ ಉತ್ಪಾದನೆ ಹೆಚ್ಚಾಗಿದೆ. ಉತ್ಪನ್ನಗಳ ಮಾರಾಟ ಹೆಚ್ಚಾಗಬೇಕಿದ್ದು, ಶುಭ ಸಮಾರಭಗಳಲ್ಲಿ ಪ್ರಚಾರ ಪಡಿಸಬೇಕು ಎಂದು ಒತ್ತಾಯಿಸಿದರು.

ಕಿರುವಾರ ಲಕ್ಷ$್ಮಣರೆಡ್ಡಿ ಮಾತನಾಡಿ, ಹಸುವಿನ ಮ್ಯಾಟ್​ಗಳು ಕಳೆದ ಎರಡು ವರ್ಷದಿಂದ ಬರುತ್ತಿಲ್ಲ. ರೈತರು ಬೇಡಿಕೆ ಇಟ್ಟಿದ್ದು ಸರಬರಾಜು ಮಾಡಬೇಕು, ಪಶು ಆಹಾರ ಸಬರಾಜು ಸಹ ಸಕಾಲಕ್ಕೆ ಆಗುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಕೆ.ವೈ.ನಂಜೇಗೌಡ, ಒಕ್ಕೂಟದಿಂದ ಸಂಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಭೆಯಲ್ಲಿ ಚರ್ಚೆಯಾಗಿರುವ ವಿಷಯಗಳಿಗೆ ಅನುಮೋದನೆ ಸಿಕ್ಕಿದ್ದು ಹಂತಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದರು.

* ಉತ್ಪಾದನೆ ಜತೆಗೆ ಮಾರುಕಟ್ಟೆಗೂ ಒತ್ತು

ಒಕ್ಕೂಟ ವಿಭಜನೆಯ ನಂತರ 6 ಲಕ್ಷ ಲೀಟರ್​ ಇದ್ದ ಹಾಲು ಉತ್ಪಾದನೆ 8 ಲಕ್ಷಕ್ಕೆ ಏರಿಕೆಯಾಗಿದೆ. ಉತ್ಪಾದನೆ ಜತೆಗೆ ಮಾರುಕಟ್ಟೆ ಮಾಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಕೆ.ವೈ.ನಂಜೇಗೌಡ ಹೇಳಿದರು.

ಒಕ್ಕೂಟದಿಂದ ಪ್ರತಿ ಪಂಚಾಯಿತಿ, ಹೋಬಳಿ ನಂದಿನಿ ಪಾರ್ಲರ್​ ತೆರೆಯುವ ಮೂಲಕ ಮಾರುಕಟ್ಟೆ ಉತ್ತೇಜನ ನೀಡಲಾಗುತ್ತಿದೆ. ಸಂಗಳಿಂದ ಹಿಡಿದು ಒಕ್ಕೂಟದ ಆಡಳಿತದಲ್ಲೂ ಪಾದರರ್ಶಕತೆ ತರಲಾಗಿದೆ. ಸಂಗಳಲ್ಲಿ ಕಾಮನ್​ ಸ್ಟ್​ಾವೇರ್​ ಅಳವಡಿಸಲಾಗುತ್ತಿದೆ. ಆ ಮೂಲಕ ಸೋರಿಕೆ ಸೇರಿ ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಲಾಗಿದೆ. ಸೋಲಾರ್​ ಟಕದಿಂದ ಉತ್ಪಾದನೆಯಾಗುವ ವಿದ್ಯುತ್​ಅನ್ನು ಬೆಸ್ಕಾಂಗೆ ನೀಡಿ, ಅಲ್ಲಿಂದ ಬಿಎಂಸಿ ಕೇಂದ್ರಗಳಿಗೆ ಉಚಿತವಾಗಿ ನೀಡಲಾಗುವುದು. ಇದರಿಂದ ಒಕ್ಕೂಟಕ್ಕೆ ತಿಂಗಳಿಗೆ 75 ಲಕ್ಷ ರೂ.ಉಳಿತಾಯವಾಗಲಿದೆ ಎಂದು ತಿಳಿಸಿದರು.

* ಪಶು ಆಹಾರ ಟಕ ನಿರ್ಮಾಣಕ್ಕೆ ಚಿಂತನೆ

ಕೆಎಂಎ್​ನಿಂದ ಸಾದಲಿ ಬಳಿ ಆಹಾರ ಉತ್ಪಾದನ ಟಕ ನಿರ್ವಹಿಸಲಾಗುತ್ತಿದೆ. ಇಲ್ಲಿಒತ್ತಡ ಜಾಸ್ತಿ ಆಗುತ್ತಿರುವುದರಿಂದ ಗುಣಮಟ್ಟದ ಆಹಾರ ಸಬರಾಜು ಆಗುತ್ತಿಲ್ಲ. ಈ ಬಗ್ಗೆ ಸಭೆಯಲ್ಲಿ ಸಾಕಷ್ಟು ಸದಸ್ಯರು ಗಮನಕ್ಕೆ ತಂದಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಪಣಸಮಾನಕಹಳ್ಳಿ ಸಮೀಪ ಒಕ್ಕೂಟದ ಜಾಗವಿದ್ದು, ಒಕ್ಕೂಟದಿಂದಲೇ ಪಶು ಆಹಾರ ಉತ್ಪಾದನ ಟಕ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಈ ಬಗ್ಗೆ ಕೆಎಂಎ್​ ಸಭೆಯಲ್ಲೂ ಪ್ರಸ್ತಾಪ ಮಾಡಲಾಗಿದೆ. ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ನಂಜೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net