

ಬೆಂಗಳೂರು: ಬೆಲೆ ನಿಯಂತ್ರಣ ಹಾಗೂ ಕಾಳಸಂತೆಯಲ್ಲಿ ಅಕ್ರಮ ದಾಸ್ತಾನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗ್ರಾಹಕರಿಗೆ ನೇರವಾರಿ ಈರುಳ್ಳಿ ಮಾರಾಟ ಮಾಡಲು ಮೊಬೈಲ್ ವ್ಯಾನ್ ಪರಿಚಯಿಸುತ್ತಿದ್ದು, ಸೋಮವಾರದಿಂದ ಮಾರಾಟಕ್ಕೆ ಚಾಲನೆ ದೊರೆಯಲಿದೆ.
ಈಗಾಗಲೇ ಭಾರತ್ ಬ್ರ್ಯಾಂಡ್ನಲ್ಲಿ ಅಕ್ಕಿ ಮಾರಾಟ ಮಾಡುವ ಮೂಲಕ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ ಅದೇ ಮಾದರಿಯಲ್ಲಿ ಈರುಳ್ಳಿ ಮಾರಾಟಕ್ಕೆ ಮುಂದಾಗಿದೆ. ‘ಮೋದಿ ಅಕ್ಕಿ’ ಎಂಬ ಹೆಸರಿನಿಂದಲೇ ಜನಜನಿತವಾಗಿದ್ದು, ಇದೀಗ ಸಂಚಾರಿ ವ್ಯಾನ್ಗಳ ಮೂಲಕ ಈರುಳ್ಳಿ ಮಾರಾಟಕ್ಕೆ ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಲಿಮಿಟೆಡ್ (ಎನ್ಸಿಸಿಎ್) ಮೂಲಕ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಬಲ ಬೆಲೆಯಲ್ಲಿ ಅಂದರೆ ಈರುಳ್ಳಿ ಕೆಜಿಗೆ 35 ರೂಪಾಯಿ ನಿಗದಿಗೊಳಿಸಲಾಗಿದ್ದು, ಗ್ರಾಹಕರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಈರುಳ್ಳಿ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈಗಾಗಲೇ ಮುಂಬೈನಲ್ಲಿ ರಿಯಾಯಿತಿ ದರದಲ್ಲಿ ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಬೆಂಗಳೂರಿನಲ್ಲೂ ರಿಯಾಯಿತಿ ದರದಲ್ಲಿ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸೋಮವಾರ ಮಧ್ಯಾಹ್ನ 12.30ಕ್ಕೆ ಮೊಬೈಲ್ ವ್ಯಾನ್ಗಳ ಮೂಲಕ ಈರುಳ್ಳಿ ಮಾರಾಟಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರೆಯಲಿದೆ. ನಂದಿನಿ ಲೇಔಟ್, ಡಾಲರ್ಸ್ ಕಾಲೋನಿ, ಮುಖ್ಯ ರಸ್ತೆಯ ಎಚ್ಡಿಎ್ಸಿ ಬ್ಯಾಂಕ್ ಮುಂಭಾಗದಲ್ಲಿ ಈರುಳ್ಳಿ ಮಾರಾಟದ ವ್ಯಾನ್ಗೆ ಚಾಲನೆ ದೊರೆಯಲಿದೆ.