

Rekha Gupta: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ನಂತರ ಅವರ ಭದ್ರತೆಗಾಗಿ ನೀಡಲಾಗಿದ್ದ ಝಡ್-ಕೆಟಗರಿ ಸಿಆರ್ಎಫ್ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆದಿದೆ. ಹಾಗೂ ಅವರ ಭದ್ರತೆಗಾಗಿ ದೆಹಲಿ ಪೊಲೀಸರಿಗೆ ವಹಿಸಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ (ಆಗಸ್ಟ್ 25) ತಿಳಿಸಿವೆ.
ಆಗಸ್ಟ್ 20 ರಂದು ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆದ 'ಜನ್ ಸುನ್‌ವೈ' ಕಾರ್ಯಕ್ರಮದಲ್ಲಿ ಗುಪ್ತಾ ಮೇಲೆ ಸಕರಿಯಾ ಎಂಬ ವ್ಯಕ್ತಿ ದಾಳಿ ನಡೆಸಿದ್ದು, ಕಚೇರಿಯವರು ಈ ಹಲ್ಲೆಯನ್ನು ಅವರನ್ನು ಕೊಲ್ಲಲು ಮಾಡಿದ ಸಂಚು ಎಂದು ಬಣ್ಣಿಸಿದ್ದರು.
ಘಟನೆ ನಡೆದ ಒಂದು ದಿನದ ನಂತರ , ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನ್ನು ಅವರ ಭದ್ರತೆಗಾಗಿ ನೇಮಿಸಿತ್ತು. ಇನ್ನು ಈ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದ್ದು, ಸದ್ಯ ದೆಹಲಿ ಪೊಲೀಸರು ಭದ್ರತೆ ನೀಡುತ್ತಿದ್ದಾರೆ.
ಮುಖ್ಯಮಂತ್ರಿಯವರ ಮೇಲೆ ದಾಳಿ ನಡೆದ ನಂತರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಮುಖ್ಯ ಆರೋಪಿ ಗುಜುರಾತ್ನ ರಾಜ್ಕೋಟ್ ನಿವಾಸಿ ಹಾಗೂ ಆಟೋರಿಕ್ಷಾ ಚಾಲಕ ಸಕ್ರಿಯಾ ರಾಜೇಶ್ಭಾಯ್ ಖಿಮ್ಜಿ ಎಂದು ಗುರುತಿಸಲಾಗಿದೆ.
(ಏಜೆನ್ಸೀಸ್)