More

    ರಾಜಧಾನಿಯಲ್ಲಿವೆ 40 ಕಂಟೇನ್ಮೆಂಟ್ ಪ್ರದೇಶ

    ಬೆಂಗಳೂರು: ರಾಜಧಾನಿಯ 70 ವಾರ್ಡ್​ಗಳಲ್ಲಿ ಕರೊನಾ ಸೋಂಕಿತರು ಕಂಡುಬಂದಿದ್ದು, ಪ್ರಸ್ತುತ 40 ವಾರ್ಡ್​ಗಳಲ್ಲಿ ವಿವಿಧ ಮಾದರಿಯ ಕಂಟೇನ್ಮೆಂಟ್ ಜಾರಿಗೊಳಿಸಲಾಗಿದೆ. ಉಳಿದ 158 ವಾರ್ಡ್​ಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶವಿದೆ.

    ಇದನ್ನೂ ಓದಿ: ಸಹೋದರನ ಹತ್ಯೆಗೆ ಸುಪಾರಿ ಕೊಟ್ಟ ಅಕ್ಕ

    ವಿದೇಶ ಹಾಗೂ ಹೊರ ರಾಜ್ಯಗಳಿಂದ (ಮಹಾರಾಷ್ಟ್ರ ಹೊರತಾಗಿ) ನಗರಕ್ಕೆ ಆಗಮಿಸಿದವರನ್ನು ರೋಗ ಲಕ್ಷಣ ಪರೀಕ್ಷೆ ಮಾಡಿ ನೇರವಾಗಿ ಹೋಂ ಕ್ವಾರಂಟೈನ್​ಗೆ ಕಳಿಸಲಾಗುತ್ತಿದೆ. ಒಂದು ವೇಳೆ ಅಲ್ಲಿರುವವರಿಗೆ ಸೋಂಕು ಬಂದರೆ, ಅವರಿಂದ ಕನಿಷ್ಠ 10 ಜನ ಹಾಗೂ ಗರಿಷ್ಠ 50 ಜನರು ಸಂಪರ್ಕಕ್ಕೆ ಒಳಗಾಗಿರುತ್ತಾರೆ. ಅದರಲ್ಲಿ ಶೇ.20 ಜನರಿಗೆ ಸೋಂಕು ಕಂಡುಬರುತ್ತಿದೆ. ಹೀಗಾಗಿ ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

    ‘ಕಂಟೇನ್ಮೆಂಟ್’ ಎಂದಾಕ್ಷಣ ಇಡೀ ವಾರ್ಡ್​ಗಳನ್ನು ಸೀಲ್​ಡೌನ್ ಮಾಡದೆ ಸೋಂಕಿತ ವ್ಯಕ್ತಿ ವಾಸವಿರುವ ಸ್ಥಳ ಹಾಗೂ ಪ್ರದೇಶದ ಆಧಾರದಲ್ಲಿ ನಿರ್ಬಂಧ ವಿಧಿಸಲಾಗುತ್ತಿದೆ. ಸರ್ಕಾರ ಇದನ್ನು ಪ್ರದೇಶ, ನಿರ್ದಿಷ್ಟ ವ್ಯಾಪ್ತಿ, ಅಪಾರ್ಟ್​ವೆುಂಟ್, ಕೊಳೆಗೇರಿ ಹಾಗೂ ಹೋಟೆಲ್​ಗಳ ಕಂಟೇನ್ಮೆಂಟ್ ಎಂದು 5 ವಿವಿಧ ಮಾದರಿಗಳಲ್ಲಿ ಗುರುತಿಸಿದೆ. ಈ ಎಲ್ಲ ಮಾದರಿಗಳ ಕಂಟೇನ್ಮೆಂಟ್ ಪ್ರಸ್ತುತ ನಗರದಲ್ಲಿ ಜಾರಿಯಲ್ಲಿವೆ.

    ಇದನ್ನೂ ಓದಿ: ಬಂಧಿಸಲು ಮುಂದಾದ ಪೇದೆಗೆ ಹಲ್ಲೆ: ರೌಡಿ ಕಪ್ಪೆ ಕಾಲಿಗೆ ಗುಂಡೇಟು

    5 ಮಾದರಿಯ ಕಂಟೇನ್ಮೆಂಟ್

    ಎ (ನಿರ್ದಿಷ್ಟ ಪ್ರದೇಶ): ಇಲ್ಲಿ ಕೋವಿಡ್-19 ಸೋಂಕು ಹೊಂದಿರುವ ವ್ಯಕ್ತಿ ವಾಸಸ್ಥಳದ ಆಧಾರದಲ್ಲಿ 100 ಮೀ. ಸುತ್ತಳತೆಯಲ್ಲಿ ಕಂಟೇನ್ಮೆಂಟ್ ವಿಧಿಸಲಾಗುತ್ತದೆ.

    ಎಪಿ (ಅಪಾರ್ಟ್​ವೆುಂಟ್): ಅಪಾರ್ಟ್​ವೆುಂಟ್ ನಿವಾಸಿ ಸೋಂಕಿಗೀಡಾದರೆ ಅವರ ವಾಸದ ಮಹಡಿ, ಮೇಲಿನ ಮಹಡಿ ಹಾಗೂ ಕೆಳಮಹಡಿಯನ್ನು ಸೀಲ್ ಮಾಡಲಾಗುತ್ತದೆ.

    ಎಸ್ (ಕೊಳೆಗೇರಿ): ಕೊಳೆಗೇರಿ ಪ್ರದೇಶದ ವ್ಯಕ್ತಿಗೆ ಕೊರನಾ ಪಾಸಿಟಿವ್ ಬಂದರೆ ಅವರು ವಾಸವಿರುವ ರಸ್ತೆಯ ಜತೆಗೆ ಹಿಂದಿನ ಮತ್ತು ಮುಂದಿನ ಎರಡು ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ.

    ಸಿಎಲ್ (ಪ್ರದೇಶ): ಸೋಂಕಿತ ವ್ಯಕ್ತಿ ಹಾಗೂ ಆತನಿಂದ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆಗಳಿರುವ ಒಟ್ಟು ಪ್ರದೇಶವನ್ನು ಕಂಟೇನ್ಮೆಂಟ್​ಗೆ ಒಳಪಡಿಸಲಾಗುತ್ತಿದೆ.

    ಎಚ್ (ಹೋಟೆಲ್): ಹೋಟೆಲ್ ಕ್ವಾರಂಟೈನ್​ನಲ್ಲಿ ಸೋಂಕಿತ ವ್ಯಕ್ತಿ ವಾಸವಿರುವ ಹೋಟೆಲ್, ವಸತಿಗೃಹಗಳನ್ನು ಕಂಟೇನ್ಮೆಂಟ್ ಮಾಡಲಾಗುತ್ತದೆ.

    ಸಿಲಿಕಾನ್​ಸಿಟಿಯಲ್ಲಿ 400 ಗಡಿ ದಾಟಿದ ಪ್ರಕರಣ

    ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ 20 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 417ಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ 15 ಜನರು ಹೋಂ ಕ್ವಾರಂಟೈನ್​ನಲ್ಲಿದ್ದು ಅವರ ಸಂಪರ್ಕದಲ್ಲಿರುವವರಿಗೂ ಸೋಂಕಿನ ಆತಂಕ ಶುರುವಾಗಿದೆ.

    ಇದನ್ನೂ ಓದಿ: ತೆರಿಗೆ ವಂಚಿಸಿದ್ದಕ್ಕೆ ಬೆಂಝ್​​​ ಕಾರ್ ಜಪ್ತಿ

    ಸೋಂಕಿತ ಪ್ರಕರಣಗಳಲ್ಲಿ ನವದೆಹಲಿಯಿಂದ 8, ಬಿಹಾರ 4, ಮಹಾರಾಷ್ಟ್ರ 4, ತಮಿಳುನಾಡು 2 ಹಾಗೂ ರಾಜಧಾನಿಯಲ್ಲಿವೆ 40 ಕಂಟೇನ್ಮೆಂಟ್ ಪ್ರದೇಶರಾಜಸ್ಥಾನದಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮಹಾರಾಷ್ಟ್ರದಿಂದ ಬಂದ ನಾಲ್ವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಉಳಿದ 15 ಜನರನ್ನು ಹೋಂ ಕ್ವಾರಂಟೈನ್​ಗೆ ಕಳಿಸಲಾಗಿತ್ತು. ಸೋಂಕು ದೃಢಪಟ್ಟ ನಂತರ ಅವರನ್ನು ಆಸ್ಪತ್ರೆಗೆ ಕಳಿಸಿ ಅವರ ಸಂಪರ್ಕದವರ ಪತ್ತೆಗೆ ಆರೋಗ್ಯ ಸಿಬ್ಬಂದಿ ಮುಂದಾಗಿದ್ದಾರೆ. ಆದರೆ, ಹೋಂ ಕ್ವಾರಂಟೈನ್​ಗೆ ಕಳಿಸಿದ್ದವರಿಂದ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ.

    ಅನಂತಪುರದ ಮಹಿಳೆಗೆ ಸೋಂಕು: ಅನಂತಪುರದಿಂದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ 58 ವರ್ಷದ ಮಹಿಳೆಗೆ (ಪಿ-3863) ಬುಧವಾರ ಸೋಂಕು ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿಯನ್ನು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಕಾರಣ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಮಹಿಳೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡುವಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಬಿ.ಕೆ. ವಿಜೇಂದ್ರ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಸಂಪಾದಕೀಯ: ಮಹತ್ವದ ಉಪಕ್ರಮ

    19 ಜನರ ಬಿಡುಗಡೆ: ನಗರದ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 19 ಜನರು ಸೋಂಕು ಮುಕ್ತರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳಿಸಲಾಗಿದೆ. ಅವರನ್ನು ಹೊರ ಹೋಗದಂತೆ 14 ದಿನ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚನೆ ನೀಡಲಾಗಿದೆ.

    ರಾಜಧಾನಿಯಲ್ಲಿವೆ 40 ಕಂಟೇನ್ಮೆಂಟ್ ಪ್ರದೇಶ

    ತತ್ತರಿಸಿದ ಹೋಟೆಲೋದ್ಯಮ: 6000 ಕೋಟಿ ರೂ. ವಹಿವಾಟಿಗೆ ಕುತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts