More

    ಬಂಧಿಸಲು ಮುಂದಾದ ಪೇದೆಗೆ ಹಲ್ಲೆ: ರೌಡಿ ಕಪ್ಪೆ ಕಾಲಿಗೆ ಗುಂಡೇಟು

    ಬೆಂಗಳೂರು: ಹಲ್ಲೆ ನಡೆಸಿದ್ದ ವಿಚಾರಕ್ಕೆ ದೂರು ಕೊಟ್ಟವರಿಗೆ ಪ್ರಾಣ ಬೆದರಿಕೆ ಹಾಕಿದ್ದ ರೌಡಿ ಕಾಲಿಗೆ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ. ಅಮೃತಹಳ್ಳಿ ನಿವಾಸಿ ಮುನಿಕೃಷ್ಣ ಅಲಿಯಾಸ್ ಕಪ್ಪೆ (27) ಬಂಧಿತ. ಈತನನ್ನು ಹಾಗೂ ಈತನಿಂದ ಹಲ್ಲೆಗೊಳಗಾದ ಮುಖ್ಯಪೇದೆ ನಂದೀಶ್ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

    ಹೊಯ್ಸಳನಗರದಲ್ಲಿ ಮೇ 4ರಂದು ದರ್ಶನ್ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಪ್ರಶ್ನಿಸಲು ಹೋಗಿದ್ದ ದರ್ಶನ್ ಸ್ನೇಹಿತ ಯಶ್ವಂತ್​ಗೂ ಥಳಿಸಿದ್ದರು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಶ್ವಂತ್ ದೂರು ಕೊಟ್ಟಿದ್ದರು.

    ಇದನ್ನೂ ಓದಿ: ತೆರಿಗೆ ವಂಚಿಸಿದ್ದಕ್ಕೆ ಬೆಂಝ್​​​ ಕಾರ್ ಜಪ್ತಿ

    ಇದಕ್ಕೆ ಆಕ್ರೋಶಗೊಂಡಿದ್ದ ಮುನಿಕೃಷ್ಣ, ತನ್ನ ಸಹಚರರ ಜತೆ ತೆರಳಿ ಯಶ್ವಂತ್​ಗೆ ಮತ್ತೆ ಥಳಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಬಳಿಕ ಆರೋಪಿ ತಲೆಮರೆಸಿಕೊಂಡು ತಿರುಗುತ್ತಿದ್ದ. ಖಚಿತ ಮಾಹಿತಿ ಆಧರಿಸಿದ ಪೊಲೀಸರು ಬುಧವಾರ (ಜೂ.3) ಬೆಳಗಿನ ಜಾವ ದಾಳಿ ನಡೆಸಿದರು. ಖಾಕಿ ಸಿಬ್ಬಂದಿ ಕಂಡ ಓರ್ವ ಆರೋಪಿ ಪರಾರಿ ಯಾಗಿದ್ದಾನೆ. ಮುನಿಕೃಷ್ಣನನ್ನು ಬಂಧಿಸಲು ಮುಂದಾದ ಮುಖ್ಯಪೇದೆ ನಂದೀಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಇನ್​ಸ್ಪೆಕ್ಟರ್ ಅರುಣ್​ಕುಮಾರ್, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾ ಗುವಂತೆ ಸೂಚಿಸಿದ್ದಾರೆ. ಆದರೂ ಹಲ್ಲೆಗೆ ಮುಂದಾದಾಗ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಮುನಿಕೃಷ್ಣ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

    ಕಾರ್ವಿುಕರ ಭವನದಲ್ಲಿ ಗಲಾಟೆ

    ಬೆಂಗಳೂರು: ಕಾರ್ವಿುಕರ ಭವನದಲ್ಲಿ ಮಹಿಳಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಸಬ್​ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ವಿುಕ ಇಲಾಖೆ ಅಧಿಕಾರಿ ವೇದಲಾಂಬಿಕೆ ಮತ್ತು ಪಿಎಸ್​ಐ ಸಲ್ಮಾನ್ ನೀಡಿದ ಪ್ರತ್ಯೇಕ ದೂರಿನ ಅನ್ವಯ ಪ್ರತ್ಯೇಕ ಎಫ್​ಐಆರ್ ದಾಖಲಿಸಿ ಆರೋಪಿ ಚಂದ್ರಶೇಖರ್(34) ಎಂಬಾತನನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಸಿದ್ದಾಪುರ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ಕಾರ್ವಿುಕ ಇಲಾಖೆ ಆಯುಕ್ತರ ಕಚೇರಿಯಲ್ಲಿನ ಗ್ರಂಥಾಲಯದಲ್ಲಿ ವೇದಲಾಂಬಿಕೆ ಕೆಲಸ ಮಾಡುತ್ತಿದ್ದಾರೆ. ಇವರ ಕಚೇರಿಗೆ ಬಂದ ಚಂದ್ರಶೇಖರ್, ಕುರ್ಚಿ ಮೇಲೆ ಕುಳಿತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಹೊರಗೆ ಹೋಗುವಂತೆ ತಿಳಿಸಿದರೂ ಕೇಳದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಸಿದ್ದಾಪುರ ಠಾಣೆ ಪಿಎಸ್​ಐ ಸಲ್ಮಾನ್ ಮತ್ತು ಮುಖ್ಯಪೇದೆ ಶರಣಪ್ಪ ಹೋಗಿ ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ದಾನೆ. ತಕ್ಷಣ ಚಂದ್ರಶೇಖರ್​ನನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಸಾಮಾಜಿಕ ಕಳಕಳಿಯ ತಳಹದಿ ಮೇಲೆ ಉದ್ಯಮ ಸಾಮ್ರಾಜ್ಯ

    ಆಪ್ತ ಸಲಹೆ: ಅಹಂನಿಂದ ಹುಡುಗಿಯರನ್ನ ತಿರಸ್ಕರಿಸಿದ ಮಗ, ಈಗ ಮದ್ವೆಯಾಗದೇ ಕೂಗಾಡ್ತಾನೆ, ಏನು ಪರಿಹಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts