More

    ಕಟ್ಟೆಕೆಳಗಿನ ಪಾಳ್ಯದಲ್ಲಿ ಸ್ವಚ್ಛತೆ ಮರೀಚಿಕೆ

    ಸಿ.ಎಸ್​.ವಿಶ್ವನಾಥಶಾಸ್ತ್ರಿ ಶ್ರೀನಿವಾಸಪುರ
    ಪಟ್ಟಣದ ಕಟ್ಟೆಕೆಳಗಿನ ಪಾಳ್ಯದಲ್ಲಿ ಗಲೀಜು ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪುರಸಭೆ ಅಧಿಕಾರಿಗಳ ರ್ನಿಲಕ್ಷ$್ಯದಿಂದಾಗಿ ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

    ಕಟ್ಟೆಕೆಳಗಿನ ಪಾಳ್ಯದಲ್ಲಿ ಸುಮಾರು 320 ಕುಟುಂಬಗಳು ವಾಸವಿದ್ದು, 950 ಮತದಾರರಿದ್ದಾರೆ. ರಾತ್ರಿಯಾದರೆ ಸಾಕು ಬೀದಿಗಳಲ್ಲಿ ಬೀದಿದೀಪ ಇಲ್ಲದೆ ಕಾರ್ಗತ್ತಲು ಆವರಿಸಿಬಿಡುತ್ತದೆ. ಮಳೆಗಾಲ ಬಂದರೆ ಚರಂಡಿ ನೀರು ರಸ್ತೆಗಳ ಮೇಲೆ ಹರಿಯುತ್ತದೆ.
    ಪಟ್ಟಣದ ರಕೀರ್​ ಹುಸೇನ್​ ಮೊಹಲ್ಲಾ, ಹೈದಾರಿ ಮೊಹಲ್ಲಾ, ಕೊಲ್ಲೂರು, ಕೊಲ್ಲೂರು ಹೊಸ ಬಡಾವಣೆ, ಬೈಪ್ಪಲ್ಲಿ, ಬೈರಪಲ್ಲಿ ಹೊಸ ಬಡಾವಣೆ ಹೀಗೆ ಪಟ್ಟಣದ ಬಹುತೇಕ ಕಡೆಯ ಕೊಳಚೆ ನೀರು ಕಟ್ಟೆಕೆಳಗಿನ ಪಾಳ್ಯದ ಮೂಲಕ ಹೆಬ್ಬಟ ಕೆರೆಗೆ ಹರಿಸಲು ನಾಲ್ಕು ವರ್ಷದ ಹಿಂದೆ ಆರಂಭಿಸಿದ ಒಳಚರಂಡಿ ಕಾಮಗಾರಿಯೂ ಇನ್ನೂ ಪೂರ್ಣಗೊಂಡಿಲ್ಲ. ಒಳಚರಂಡಿಗಳ ಛೇಂಬರ್​ಗಳಿಗೆ ಕಲ್ಲುಗಳನ್ನು ಹಾಕಿ ನೀರು ಮುಂದುಗಡೆ ಹೋಗದಂತೆ ಮಾಡಿ, ಈ ನೀರನ್ನು ಅಮಾನಿಕೆರೆಗೆ ಬಿಟ್ಟುಕೊಂಡು ಕೃಷಿ ಮಾಡುತ್ತಿದ್ದಾರೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ ಎಂಬುದು ಸ್ಥಳಿಯರ ಆರೋಪ.

    ಪುರಸಭೆಗೆ ಮುತ್ತಿಗೆ ಎಚ್ಚರಿಕೆ
    ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅವಡಗಳ ನಡೆಯುವ ಮುನ್ನ ಕಟ್ಟೆಕೆಳಗಿನ ಪಾಳ್ಯದ ನಿವಾಸಿಗಳ ಸಮಸ್ಯೆ ಪರಿಹರಿಸುವಂತೆ ನಿವಾಸಿಗಳಾದ ಮಂಗಮ್ಮ, ಜಗದೀಶ್​, ಮೇಸ್ತಿ ಶ್ರೀನಿವಾಸ್​, ಎಲೆಕ್ಷಷನ್​ ನಾಗರಾಜ್​ ಮನವಿ ಮಾಡಿದ್ದಾರೆ. ಅಧಿಕಾರಿಗಳು ನಿವಾಸಿಗಳ ಸಮಸ್ಯೆ ಬಗೆಹರಿಸದಿದ್ದಲ್ಲಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

    ಮುಳುಗಡೆ ಭೀತಿ
    ಸಣ್ಣ ಮಳೆಬಂದರೂ ಕಾಲುವೆಗಳು ಕಸ ಕಡ್ಡಿಯಿಂದ ತುಂಬಿ ನೀರು ಕಟ್ಟೆ ಕೆಳಗಿನ ಮನೆಗಳಿಗೆ ನುಗ್ಗುತ್ತಿವೆ. ಈ ವಿಚಾರವಾಗಿ ಸ್ಥಳಿಯರು ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಅವರು ಒಳಚರಂಡಿ ಮಂಡಳಿಯವರ ಮೇಲೆ ದೂರುತ್ತಾರೆ. ಈ ಬಗ್ಗೆ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಒಪ್ಪಿಸಿರುವ ಕಾಮಗಾರಿ ಮುಕ್ತಾಯಗೊಳಿಸಿದ್ದೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಎರಡು ಇಲಾಖೆಗಳ ರ್ನಿಲಕ್ಷ$್ಯಕ್ಕೆ ನಿವಾಸಿಗಳು ಅನಾರೋಗ್ಯದ ಭೀತಿ ಎದುರಿಸುವಂತಾಗಿದೆ. ಇನ್ನೊಂದೆಡೆ ನೀರಿನ ಹರಿವು ಹೆಚ್ಚಾಗಿ ಮನೆಗಳು ಮುಳುಗಡೆ ಭೀತಿ ಎದುರಾಗಿದೆ.

    ಕಟ್ಟೆಕೆಳಗಿನ ಪಾಳ್ಯದಲ್ಲಿ ಸ್ವಚ್ಛತೆ ಮರೀಚಿಕೆ

    ಸಮಸ್ಯೆಯ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಖುದ್ದಾಂಗಿ ಶಾಸಕರು ಎರಡು ತಿಂಗಳ ಹಿಂದೆ ಕುಂದುಕೊರತೆ ಸಭೆಯಲ್ಲಿ ಪುರಸಭೆ, ಒಳಚರಂಡಿ ಮಂಡಳಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರೂ ಶಾಸಕರ ಮಾತಿಗೂ ಸೊಪ್ಪು ಹಾಕದೆ ಅಧಿಕಾರಿಗಳು ರ್ನಿಲಕ್ಷ$್ಯ ವಹಿಸುತ್ತಿದ್ದಾರೆ. ಶಾಸಕರು ತಕ್ಷಣ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.

    ಜಗದೀಶ್​ ಕಟ್ಟೆಕೆಳಗಿನ ಪಾಳ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts