ಅಪಾಯದ ಮುನ್ಸೂಚನೆ ನೀಡುತ್ತಿರುವ ಬಸ್ ನಿಲ್ದಾಣ; ಬಿಡಿಎ ನಿರ್ಲಕ್ಷ್ಯ

busstop
Published on

ಬೆಂಗಳೂರು: ಸಾರ್ವಜನಿಕರಿಗೆ ಬಿಸಿಲು, ಮಳೆಯಿಂದ ರಕ್ಷಣೆ ನೀಡಬೇಕಾದ ಬಸ್ ನಿಲ್ದಾಣವೊಂದು ಅಪಾಯದ ಮುನ್ಸೂಚನೆ ನೀಡುತ್ತಿದೆ. ನಾಗರಭಾವಿ ರಿಂಗ್‌ರಸ್ತೆಯ ಪಾಪರೆಡ್ಡಿ ಪಾಳ್ಯದಲ್ಲಿ ಬಿಡಿಎ ನಿರ್ಮಿಸಿರುವ ಆಲದಮರ ಬಸ್ ನಿಲ್ದಾಣದ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಜನರ ಉಪಯೋಗಕ್ಕೆ ಬಾರದಂತಾಗಿದೆ.

ಸೂಕ್ತ ನಿರ್ವಹಣೆ ಮಾಡಬೇಕಾದ ಬಿಡಿಎ ನಿರ್ಲಕ್ಷ್ಯ ವಹಿಸಿರುವುದರ ಪರಿಣಾಮ ಸಾರ್ವಜನಿಕರು, ಬಿಸಿಲು, ಮಳೆಯಲ್ಲೇ ನಿಂತು ಬಸ್ ಕಾಯುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಬಸ್ ನಿಲ್ದಾಣದ ಗೋಡೆ ವಾಲಿದ ಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಬಿದ್ದುಹೋಗುವ ಅಪಾಯವಿದೆ. ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಮಳೆನೀರಿಗೆ ಗೋಡೆ ಹಸಿಯಾಗಿದ್ದು, ಅಪಾಯವನ್ನು ತಡೆಯಬೇಕಾದ ಬಿಡಿಎ ಇತ್ತ ಗಮನಹರಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net