ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ 61.79 ಲಕ್ಷ ರೂ ಲಾಭ

22GKK1
Published on

ಗೋಕಾಕ: ಪ್ರಸಕ್ತ ಸಾಲಿನಲ್ಲಿ ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ 25.54 ಕೋಟಿ ರೂ ವಹಿವಾಟು ನಡೆಸಿ 61.79 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಪ ಅಶೋಕ ನಾಯಿಕ ತಿಳಿಸಿದರು.

ನಗರದ ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 94ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯತೆ ವಹಿಸಿ ಮಾತನಾಡಿದರು.

ಗುಣಮಟ್ಟದ ಬೀಜ, ಗೊಬ್ಬರ ಪೂರೈಸಿ ಸಂಘ ರೈತರಿಗೆ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು, ಭಾರತೀಯ ಹತ್ತಿ ನಿಗಮ ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಹಾ ಮಂಡಳ ನವದೆಹಲಿ ಸೇರಿ ವಿವಿಧ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ತಿಳಿಸಿದರು.

ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಗಳಿಗೆ ತಲಾ ಹತ್ತು ಸಾವಿರ ರೂ. ಪ್ರೋತ್ಸಾಹ ಧನದ ಚೆಕ್​ ವಿತರಿಸಲಾಯಿತು. ಕಾರ್ಮಿಕ ಮುಖಂಡ ಅಂಬಿರಾವ್​ ಪಾಟೀಲ, ಸಂಘದ ಉಪಾಧ್ಯ ವಿಠ್ಠಲ ಪಾಟೀಲ, ಸದಸ್ಯರಾದ ಸುಭಾಸ ಢವಳೇಶ್ವರ, ಬಸಪ್ಪ ಕುರಿಬಾಗಿ, ಮಹಾಂತೇಶ ಅವರಗೋಳ, ಮುತ್ತಪ್ಪ ಝಲ್ಲಿ, ಸಿದ್ಧಪ್ಪ ಹಮ್ಮನವರ, ವೆಂಕನಗೌಡ ಪಾಟೀಲ, ಬಸನಗೌಡ ಪಾಟೀಲ, ಪ್ರಭಾಕರ ಬಂಗೇನ್ನವರ, ಸುರೇಶ ಗುಡ್ಡಾಕರ, ಗುರುನಾಥ ಕಂಕಣವಾಡಿ, ಮಲ್ಲಿಕಾರ್ಜುನ ಕಬ್ಬೂರ, ಗಂಗವ್ವ ಜೈನ, ಲೂಬಾನಾ ದೇಸಾಯಿ, ಪ್ರಧಾನ ವ್ಯವಸ್ಥಾಪಕ ಜಿ.ಎಂ.ಹಾರುಗೋಪ್ಪ, ಮುಖಂಡರಾದ ಸುಭಾಸ ಒಂಟಗೂಡಿ, ಪ್ರಶಾಂತ ಒಂಟಗೂಡಿ, ಮುರಿಗೆಪ್ಪ ಯಕ್ಸಂಬಿ, ಹನಮಂತ ಚನ್ನಾಳ, ಈಶ್ವರ ಬೆಳಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net