

ಗಂಗೊಳ್ಳಿ: ಕಾಲೇಜು ಶಿಕ್ಷಣ ಎನ್ನುವುದು ಕೇವಲ ಪದವಿ ಗಳಿಸುವುದಕ್ಕಾಗಿ ವಾತ್ರವಲ್ಲ. ಶಿಕ್ಷಣ ವಿದ್ಯಾರ್ಥಿಗಳಿಗೆ ಬದುಕುವ ಕಲೆಯನ್ನೂ ಕಲಿಸಬೇಕಾಗುತ್ತದೆ. ಇದು ಇಂದಿನ ಕಾಲಟ್ಟದಲ್ಲಿ ಬಹಳ ಮುಖ್ಯ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುವಾರ್ ಕೊಡ್ಗಿ ಹೇಳಿದರು.
ಶ್ರೀ ಶಾರದಾ ಕಾಲೇಜಿನಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಡಿಜಿಟಲ್ ಕಲಿಕಾ ಕೇಂದ್ರ ಮತ್ತು ಆಡಿಯೋ ವಿಶುವಲ್ ಹಾಲ್ ಉದ್ಘಾಟನಾ ಸವಾರಂಭದಲ್ಲಿ ಮಾತನಾಡಿದರು.
ಬೆಂಗಳೂರಿನ ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ವಾತನಾಡಿ, 50 ವರ್ಷಗಳ ಹಿಂದೆಯೇ ಬಸ್ರೂರಿನಲ್ಲಿ ಆರಂಭಗೊಂಡ ಶ್ರೀ ಶಾರದಾ ಕಾಲೇಜಿನಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಸವಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಪಾಠ ವಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಶಾಲೆ ಉತ್ತಮ ಸಾಧನೆ ವಾಡಿದೆ ಎಂದರು.
ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೆ.ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ಮಂಡಳಿಯವರು, ಬಿ.ಅಪ್ಪಣ್ಣ ಹೆಗ್ಡೆ ಹಿತೈಷಿಗಳು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ ಅನುಪವಾ ಎಸ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲೆ ಚಂದ್ರಾವತಿ ಶೆಟ್ಟಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ ಪೈ ವಂದಿಸಿದರು. ಉಪನ್ಯಾಸಕಿಯರಾದ ಮಮತಾ ಹಾಗೂ ಆಶಾ ನಿರೂಪಿಸಿದರು.