ಕುಕ್ಕರ್‌ನಿಂದ ಹೊಡೆದು ಕೊಲೆಗೈದು, ಅಲ್ಲೇ ಸ್ನಾನ ಮಾಡಿ, 40ಗ್ರಾಂ ಚಿನ್ನ ದೋಚಿ ಪರಾರಿಯಾದ ಕಳ್ಳರು! | Cooker

Untitled design - 2025-09-11T130523.191
Published on

ಹೈದರಾಬಾದ್: ಮಹಿಳೆಯೊಬ್ಬರನ್ನು ಕಟ್ಟಿಹಾಕಿ ಪ್ರೆಶರ್ ಕುಕ್ಕರ್‌ನಿಂದ(Cooker) ಹೊಡೆದು, ನಂತರ ಚಾಕು ಮತ್ತು ಕತ್ತರಿಗಳಿಂದ ಆಕೆಯ ಗಂಟಲು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಸೈಬರಾಬಾದ್‌ನ ಐಟಿ ಕೇಂದ್ರದಲ್ಲಿರುವ ಗೇಟೆಡ್ ಸಮುದಾಯವಾದ ಸ್ವಾನ್ ಲೇಕ್ ಅಪಾರ್ಟ್‌ಮೆಂಟ್‌ನ 13ನೇ ಮಹಡಿಯಲ್ಲಿ ವಾಸಿಸುತ್ತಿದ್ದ ರೇಣು ಅಗರ್ವಾಲ್(50) ಕೊಲೆಯಾದ ಮಹಿಳೆ. ಆಕೆಯ ಮನೆಯಲ್ಲಿ ಆರೋಪಿಗಳು ಲೂಟಿ ಮಾಡಲು ಬಂದಿದ್ದು, ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಆ ಇಬ್ಬರು ವ್ಯಕ್ತಿಗಳು ಮನೆಯಲ್ಲಿ ಕಳ್ಳತನ (ಸುಮಾರು 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದನ್ನು ದೋಚಿದ್ದಾರೆ) ಮಾಡಿ ಅಲ್ಲದೆ, ಆಕೆಯ ಮನೆಯಲ್ಲಿ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಬುಧವಾರ, ಬೆಳಿಗ್ಗೆ 10 ಗಂಟೆ ಸುಮಾರಿಗೆ, ಮೃತೆ ರೇಣು ಅಗರ್ವಾಲ್ ಪತಿ ತಮ್ಮ 26 ವರ್ಷದ ಮಗನೊಂದಿಗೆ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಸಂಜೆ 5 ಗಂಟೆಗೆ, ಪತ್ನಿ ರೇಣುಗೆ ಕಾಲ್​ ಮಾಡಿದಾಗ ಕರೆಗಳಿಗೆ ಯಾವುದೇ ಉತ್ತರ ಸಿಗಲಿಲ್ಲ. ಅಸಾಮಾನ್ಯ ನಡವಳಿಕೆಯಿಂದ ಆಶ್ಚರ್ಯಚಕಿತರಾದ ಪತಿ ಹೆಂಡತಿಯನ್ನು ನೋಡಲು ಬೇಗನೆ ಮನೆಗೆ ಬಂದಿದ್ದಾರೆ.

ಬಾಗಿಲು ಲಾಕ್ ಆಗಿದ್ದರಿಂದ, ಅವರು ಪ್ಲಂಬರ್ ಸಹಾಯದಿಂದ ಬಾಲ್ಕನಿಯಲ್ಲಿ ಅದನ್ನು ತೆರೆದಾಗ ರೇಣು ಅಗರ್ವಾಲ್ ಮೃತಪಟ್ಟಿರುವುದು ಕಂಡುಬಂದಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net