ಹ್ಯಾರಿಸ್ ರೌಫ್‌ಗೆ ಧನ್ಯವಾದಗಳು: Asia Cup ಗೆಲುವಿನಲ್ಲಿ ಪಾಕ್​ ವೇಗಿಯ ಪಾತ್ರ ದೊಡ್ಡದಿದೆ ಎಂದ ಭಾರತದ ಮಾಜಿ ಸ್ಪಿನ್ನರ್​

R Ashwin
Published on

Asia Cup: ಭಾರತ ಏಷ್ಯಾಕಪ್ ಗೆಲ್ಲಲು ನೆರವಾದ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಧನ್ಯವಾದ ಎಂದು ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಜಿ ಸ್ಪಿನ್ನರ್​, ಭಾರತದ ಪ್ರಶಸ್ತಿ ಗೆಲುವಿನಲ್ಲಿ ರೌಫ್ ವಹಿಸಿದ ನಿರ್ಣಾಯಕ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ತಿಲಕ್ ವರ್ಮಾ ಎಲ್ಲರ ಗಮನ ಸೆಳೆದರು. ವರ್ಮಾ ತಮ್ಮ ಆಟವನ್ನು ತುಂಬಾ ಚನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಆಟವಾಡಿದರು. ಚೇಸ್​ ಬೆನ್ನಟ್ಟಿದ ಭಾರತವು ಆರಂಭದಲ್ಲಿ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿತ್ತು. ಆದರೆ, ಹ್ಯಾರಿಸ್ ರೌಫ್‌ಗೆ ಧನ್ಯವಾದಗಳು, ನಾವು ಪಂದ್ಯವನ್ನು ಸುಲಭವಾಗಿ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅಶ್ವಿನ್​​​, ತಿಲಕ್ ವರ್ಮಾ ಒತ್ತಡವನ್ನು ಚೆನ್ನಾಗಿ ನಿಭಾಯಿಸಿದರು. ವರ್ಮಾ ಸ್ಪಿನ್​​ಗೆ ಅಧ್ಬುತವಾಗಿ ಆಡಿದರು. ಸ್ವೀಪ್‌ಗಳನ್ನು ಹೊಡೆದರು,ತಮ್ಮ ಶಾಟ್​ಗಳನ್ನು ನೆಲದ ಮೇಲೆಯೇ ಆಡಿದರು. ಅಲ್ಲದೆ, ವಿಕೆಟ್ ಮೇಲಿನ ಬೌನ್ಸ್ ಸ್ವಲ್ಪ ಜಿಗುಟಾಗಿದೆ ಎಂದು ಅರಿತುಕೊಂಡರು. ಈ ವಿಕೆಟ್‌ನಲ್ಲಿ ನೇರವಾಗಿ ಆಡಲು ಪ್ರಾರಂಭಿಸಿದರು. ರೌಫ್‌ಗೆ ಈ ಶಾಟ್ ಹೊಡೆಯುವುದು ಸುಲಭ ಎಂದು ಜನರು ಭಾವಿಸುತ್ತಾರೆ. ಆದರೆ, ಆ ಶಾಟ್​ ಹೊಡೆಯುವುದು ಕಷ್ಟ ಎಂದಿದ್ದಾರೆ.

ಪಂದ್ಯದಲ್ಲಿ ಒಟ್ಟಾರೆ ಆರು ವಿಕೆಟ್ ಪಡೆದ ಭಾರತದ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಅವರನ್ನು ಅಶ್ವಿನ್ ಶ್ಲಾಘಿಸಿದರು.

ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್​ಗೆ ನಾನು ಕ್ರೆಡಿಟ್ ನೀಡಲು ಬಯಸುತ್ತೇನೆ. ಪಾಕ್​ ಪರ ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಅತ್ಯುತ್ತಮ ಆರಂಭವನ್ನು ನೀಡಿದರು. ಆದರೆ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ವ್ಯತ್ಯಾಸ ಇದು. ಶ್ರೀಲಂಕಾ ನಮ್ಮ ಸ್ಪಿನ್ನರ್‌ಗಳನ್ನು ಸುಂದರವಾಗಿ ನಿರ್ವಹಿಸಿತು ಮತ್ತು ಸರಿಯಾದ ಶಾಟ್ ಆಯ್ಕೆಯನ್ನು ಸಹ ಮಾಡಿತು. ಏಷ್ಯಾದ ತಂಡಗಳನ್ನು ನೀವು ನೋಡಿದರೆ, ಪಾಕಿಸ್ತಾನವು ಉತ್ತಮ ಸ್ಪಿನ್ ಆಟಗಾರರನ್ನು ಹೊಂದಿದೆ. ಇದು ದೊಡ್ಡ ಪಂದ್ಯದ ಒತ್ತಡ. ಈ ಒತ್ತಡವನ್ನು ಎದುರಿಸಬಲ್ಲ ಅನೇಕ ಜನರಿದ್ದಾರೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net