Thailand Earthquake | ಕಂಪಿಸಿದ ಭೂಮಿಯ ತೀವ್ರತೆಗೆ ನಡುಗಿದ ಮೆಟ್ರೋ ನಿಲ್ದಾಣ; ಜನ ಭಯಭೀತ

Untitled design (95)
Published on

ಥೈಲ್ಯಾಂಡ್​​: ಪ್ರಕೃತಿ ವಿಕೋಪಗಳು ಸಂಭವಿಸುವುದಕ್ಕೆ ಯಾವುದೇ ನಿಗದಿತ ಸಮಯವಿಲ್ಲ. ಆದರೆ ಒಂದು ಪ್ರಬಲ ಭೂಕಂಪವು ಇಡೀ ನಗರ ಅಥವಾ ಒಂದು ದೇಶವನ್ನೇ ಆವರಿಸುವ ಶಕ್ತಿಯನ್ನು ಹೊಂದಿದೆ. ಥೈಲ್ಯಾಂಡ್ ಮತ್ತು ಮ್ಯಾನ್ಮಾರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪಶ್ರ(Thailand Earthquake) ಸಂಭವಿಸಿದೆ. ಇದರಿಂದಾಗಿ, ಎರಡೂ ದೇಶಗಳಿಂದ ವಿನಾಶದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಆ ದೃಶ್ಯಗಳನ್ನು ನೋಡಿ ನೆಟ್ಟಿಗರು ಸಹ ಆಘಾತಕ್ಕೊಳಗಾಗಿದ್ದಾರೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಮೆಟ್ರೋ ನಿಲ್ದಾಣದ ನಡುಗುತ್ತಿರುವುದನ್ನು ಕಾಣಬಹುದು. ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಮೆಟ್ರೋ ನಿಲ್ದಾಣದಕೆಟ್ಟದಾಗಿ ಅಲುಗಾಡುತ್ತಿದೆ. ಈ ವಿಡಿಯೋ ನೋಡಿದ ನಂತರ ಜನರು ಈಗ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಭೂಕಂಪದಿಂದ ಉಂಟಾದ ವಿನಾಶದ ದೃಶ್ಯವನ್ನು ಕಾಣಬಹುದು. ಇದರಲ್ಲಿ ಪ್ಲಾಟ್‌ಫಾರ್ಮ್ ಮೇಲೆ ನಿಂತಿದ್ದ ಮೆಟ್ರೋ ತೀವ್ರವಾಗಿ ಅಲುಗಾಡುತ್ತಿರುವುದು ಕಂಡುಬಂದಿದೆ. ಬ್ಯಾಂಕಾಕ್‌ನ ಮೆಟ್ರೋ ನಿಲ್ದಾಣದ ಸ್ಥಿತಿಯನ್ನು ನೋಡಿದರೆ ರೈಲು ಹಳಿತಪ್ಪಿ ನಿಲ್ದಾಣದೊಳಗೆ ಬೀಳಬಹುದು ಎಂದು ತೋರುತ್ತದೆ. ಏಕೆಂದರೆ ತೀವ್ರ ಭೂಕಂಪದಿಂದಾಗಿ ಮೆಟ್ರೋ ವೇಗವಾಗಿ ಅಲುಗಾಡುತ್ತಿದೆ.

ಸುಮಾರು 7 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಭೂಕಂಪವು ಘರ್ಷಣೆ, ಭೂಮಿಯ ಟೆಕ್ಟೋನಿಕ್ ಪ್ಲೇಟ್‌ಗಳ ಜಾರುವಿಕೆ ಅಥವಾ ಶಕ್ತಿಯ ಹಠಾತ್ ಬಿಡುಗಡೆಯಿಂದ ಉಂಟಾಗುತ್ತದೆ. ಕೆಲವೊಮ್ಮೆ ಭೂಕಂಪಗಳು ಜ್ವಾಲಾಮುಖಿ ಸ್ಫೋಟಗಳು, ಗಣಿಗಾರಿಕೆ ಅಥವಾ ದೊಡ್ಡ ಅಣೆಕಟ್ಟುಗಳಿಂದ ಉಂಟಾಗುವ ಒತ್ತಡದಿಂದಲೂ ಸಂಭವಿಸಬಹುದು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net