

ಥಾಯ್ಲೆಂಡ್: ಕುಡುಕನೊಬ್ಬ ಬೌದ್ಧ ಮಂದಿರಕ್ಕೆ ನುಗ್ಗಿ ಸಾಕಷ್ಟು ವಿಧ್ವಂಸಕ ಕೃತ್ಯ ಎಸಗಿದ ಕೆಲ ಹೊತ್ತಿನಲ್ಲಿ ದೇವಾಲಯದ ಮುಂದೇಯೇ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಥಾಯ್ಲೆಂಡ್ನ ಚೋನ್ಬುರಿ ಪ್ರಾಂತ್ಯದ ಬಾನ್ಬಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
49 ವರ್ಷದ ಥಾಯ್ ಮೃತ. ಬೌದ್ಧ ಮಂದಿರಕ್ಕೆ ನುಗ್ಗಿ ಸಾಕಷ್ಟು ವಿಧ್ವಂಸಕ ಕೃತ್ಯ ಎಸಗಿದ ಕೆಲ ಹೊತ್ತಿನಲ್ಲಿ ದೇವಾಲಯದ ಮುಂದೇಯೇ ಬಿದ್ದು ಪ್ರಾಣ ಬಿಟ್ಟಿದ್ದಾನೆ.
ನಡೆದಿದ್ದೇನು?: ಥಾಯ್ ಏಕಾಏಕಿ ದೇವಾಲಯದ ಮುಖ್ಯ ಸಭಾಂಗಣ ಒಳಗೆ ನುಗ್ಗಿದ. ಬೌದ್ಧ ಸನ್ಯಾಸಿಗಳು ಆತನನ್ನು ತಡೆಯಲು ಪ್ರಯತ್ನಿಸಿದ್ದರು, ಆದರೆ ಬೌದ್ಧ ಸನ್ಯಾಸಿಗಳ ಮೇಲೂ ಹಲ್ಲೆ ನಡೆಸಿ ದೇವರ ವಿಗ್ರಹವನ್ನು ಕೆಡವಲು ಮುಂದಾದ. ಬುದ್ಧನ ಪ್ರತಿಮೆಯ ಚೂಪಾದ ಭಾಗವೊಂದು ಅವನ ತಲೆ ಮತ್ತು ಎದೆಗೆ ಚುಚ್ಚಿದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಫೆಬ್ರವರಿ 27ರಂದು ಈ ಘಟನೆ ನಡೆದಿದ್ದು, ಗಲಭೆ ವೇಳೆ ಸಂಭವಿಸಿದ ಈ ವಿಚಿತ್ರ ಸಾವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಲ್ಲಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.