TGSRTC: ಪ್ರಯಾಣಿಕರಿಗೆ ಶಾಕ್​.. ಟಿಕೆಟ್ ದರ ಏರಿಕೆ!

TGSRTC
Published on

ಹೈದರಾಬಾದ್: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(TGSRTC) ಮಹಾನವಮಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಶಾಕ್​ ನೀಡಿದೆ. ಮಹಿಳೆಯರಿಗೆ ಫ್ರೀ ಪ್ರಯಾಣಾವಕಾಶ ಕಲ್ಪಿಸಿರುವ ಕಾಂಗ್ರೆಸ್​ ಸರ್ಕಾರ ದಸರಾ ವಿಶೇಷ ಬಸ್‌ಗಳ ಹೆಸರಿನಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಸಜ್ಜಾಗಿದೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಬಸ್‌ಗಳನ್ನು ಓಡಿಸುವುದಾಗಿ ಆರ್‌ಟಿಸಿ ಪ್ರಕಟಿಸಿದ್ದು, ಆ ಬಸ್‌ಗಳಲ್ಲಿ ವಿಶೇಷ ದರವಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ದಸರಾ ಜನದಟ್ಟಣೆ ಹಿನ್ನೆಲೆಯಲ್ಲಿ ವಿಶೇಷವಾಗಿ 6,300 ಬಸ್‌ಗಳು ಸಂಚರಿಸುತ್ತಿವೆ ಎಂದು ಆರ್‌ಟಿಸಿ ಸಂಸದ ಸಜ್ಜನರ್‌ ಪ್ರಕಟಿಸಿದರು.

ಈ ಸ್ಪೆಷಲ್ ಬಸ್‌ಗಳಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ವಾಪಸಾಗುವಾಗ ಬಸ್‌ಗಳು ಖಾಲಿ ಬರಬೇಕಾಗಿರುವುದರಿಂದ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕೆಲವು ಬಸ್‌ಗಳು ಓಡುತ್ತಿವೆ. ಗುರುವಾರ(ಅ.10)ದಿಂದ ಎಲ್ಲಾ ಬಸ್‌ಗಳು ಓಡಲಿವೆ. ಈ ವಿಶೇಷ ಬಸ್‌ಗಳು ಇದೇ 14ರವರೆಗೆ ಲಭ್ಯವಿರಲಿವೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net