ನ್ಯಾಯಾಲಯದ ಆದೇಶ ಉಲ್ಲಂಘಿಸಿ ಟೆಂಡರ್

DSC_2660
ವರ್ತಕ ದಿಲೀಪ್ ಕುಮಾರ್ ಜೈನ್ ಸುದ್ದಿಗೋಷ್ಟಿ.
Published on

ಚಿಕ್ಕಮಗಳೂರು: ನಗರಸಭೆಯಿಂದ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಲಾಗಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮಳಿಗೆಗಳಿಗೆ ಟೆಂಡರ್ ಕರೆದಿದ್ದು, ಇದರಿಂದಾಗಿ ಹಳೆಯ ಬಾಡಿಗೆದಾರರಿಗೆ ತೊಂದರೆಯಾಗಿದೆ ಎಂದು ನಗರದ ವರ್ತಕ ದಿಲೀಪ್ ಕುಮಾರ್ ಜೈನ್ ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು ೧೨ ವರ್ಷಗಳ ಹಿಂದೆ ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಮೂಲ ಬಾಡಿಗೆದಾರರನ್ನು ಅವಧಿಗೆ ಮುಂಚಿತವಾಗಿ ಖಾಲಿ ಮಾಡಿಸಲು ಕ್ರಮ ಕೈಗೊಂಡಾಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಈಗ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿದೆ. ಬಳಿಕ ನಗರಸಭೆ ಪೌರಾಯುಕ್ತರು ಹೊಸ ಮಳಿಗೆ ನಿರ್ಮಾಣವಾದ ಬಳಿಕ ಹಿಂದೆ ಬಾಡಿಗೆ ಇದ್ದವರಿಗೆ ಮಳಿಗೆಗಳನ್ನು ನೀಡುವುದಾಗಿ ಒಪ್ಪಿ ತೀರ್ಮಾನ ಮಾಡಿಕೊಂಡಿದ್ದರು. ಆದರೆ ಈಗ ಹಿಂದಿನ ತೀರ್ಮಾನವನ್ನು ಪರಿಗಣಿಸದೆ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ದೂರಿದರು.
ಹೊಸ ಮಳಿಗೆಗೆ ಟೆಂಡರ್ ಕರೆದಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದ್ದು, ನೂತನ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣದಲ್ಲಿ ನೆಲ ಮಾಳಿಗೆಯ ಹತ್ತು ಮಳಿಗೆಗಳನ್ನು ಬಿಟ್ಟು ಟೆಂಡರ್ ಕರೆಯಬೇಕಾಗಿತ್ತು. ಇದನ್ನು ಮೀರಿ ಮಳಿಗೆಗಳ ಹರಾಜು ನಡೆಸಿದರೆ ನೆಲ ಮಾಳಿಗೆಯ ೧೦ ಮಳಿಗೆಗಳ ಬಾಡಿಗೆದಾರರಿಗೆ ತೊಂದರೆಯಾಗಲಿದ್ದು, ಅದಕ್ಕೆ ಅವಕಾಶವಾಗದಂತೆ ಹಿಂದೆ ಒಪ್ಪಂದವಾದAತೆ ೧೦ ಮಳಿಗೆಗಳನ್ನು ಹಿಂದಿನ ಬಾಡಿಗೆದಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಹಳೆ ಬಾಡಿಗೆದಾರರಾದ ಮೊಸಿನ್ ಅಕ್ತರ್, ನರಪತ್ ಸಿಂಗ್, ಅಭಿದ್ ಜಮಾಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net