6 ಮಂದಿ ಕೊವಿಡ್​-19 ಸೋಂಕಿತರು ಸೇರಿ 10 ರೋಗಿಗಳು ಆಸ್ಪತ್ರೆಯಿಂದ ಪರಾರಿ...

Hospital
Published on

ತೆಲಂಗಾಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಕೊವಿಡ್ 19 ನಿಯಂತ್ರಣಕ್ಕಾಗಿ ಸರ್ಕಾರ, ಸ್ಥಳೀಯ ಆಡಳಿತಗಳು ಹೋರಾಡುತ್ತಿವೆ. ಆದರೆ ಜನರು ಸರಿಯಾದ ಸಹಕಾರ ನೀಡುತ್ತಿಲ್ಲ ಎಂದು ವರದಿಯಾಗಿದೆ. ಅದರಲ್ಲೂ ಮುಖ್ಯವಾಗಿ ಆಸ್ಪತ್ರ, ಕೊವಿಡ್​-19 ಸೆಂಟರ್​ಗಳಿಂದ ರೋಗಿಗಳು ಪರಾರಿಯಾಗುತ್ತಿರುವುದು ತುಂಬ ಆತಂಕಕ್ಕೆ ಕಾರಣವಾಗುತ್ತಿದೆ.

ಅದರಲ್ಲೂ ಶನಿವಾರ ಅದಿಲಾಬಾದ್​ ರಾಜೀವ್​ ಗಾಂಧಿ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್ (ಆರ್​ಐಎಂಎಸ್) ಆಸ್ಪತ್ರೆಯಿಂದ 10 ರೋಗಿಗಳು ಪರಾರಿಯಾಗಿದ್ದಾರೆ.​

ಈ ಹತ್ತು ಮಂದಿಯಲ್ಲಿ 6 ಜನರು ಕೊವಿಡ್​-19 ಸೋಂಕಿತರಾಗಿದ್ದಾರೆ. ಹಾಗೇ ಉಳಿದಿಬ್ಬರು ಕೋವಿಡ್​-19 ಟೆಸ್ಟ್​ ಮಾಡಿಸಲಾಗಿದ್ದು, ವರದಿ ಇನ್ನೂ ಬರಬೇಕಿತ್ತು. ಆದರೆ ಈ ಹತ್ತೂ ಮಂದಿಗೆ ಕೊವಿಡ್​-19 ಲಕ್ಷಣಗಳಿವೆ ಎನ್ನಲಾಗಿದೆ.

ಹತ್ತೂ ಮಂದಿ ನಾಪತ್ತೆಯಾಗಿದ್ದು ಹೇಗೆ ಎಂಬ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೂ ತಿಳಿಯಲಿಲ್ಲ. ನಮಗೆ ಯಾರಿಗೂ ಏನೂ ಮಾಹಿತಿ ನೀಡದೆ ಹೋಗಿದ್ದಾರೆ ಎಂದು ಅಲ್ಲಿದ್ದವರು ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ಹೆಸರಿನಲ್ಲಿ ಕೋಟ್ಯಂತರ ರೂ.ಲೂಟಿ ; ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಆರೋಪ

ಅವರೆಲ್ಲರ ಆಧಾರ್​ ಕಾರ್ಡ್​ ಹಾಗೂ ಫೋನ್​ ನಂಬರ್​ಗಳು ಆಸ್ಪತ್ರೆಯಲ್ಲಿದ್ದು, ಅದರ ಆಧಾರದ ಮೇಲೆ ಪೊಲೀಸರು ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಆಸ್ಪತ್ರೆಯಲ್ಲಿ ಎರಡು ಪ್ರತ್ಯೇಕ ಐಸೋಲೇಶನ್​ ವಾರ್ಡ್​ಗಳಿವೆ. ಕೊವಿಡ್​ -19 ಸೋಂಕಿತರಿಗೆ ಒಂದು ಹಾಗೂ ವರದಿಗಾಗಿ ಕಾಯುತ್ತಿರುವವರಿಗೆ ಇನ್ನೊಂದು. ಆದರೆ ಇಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಐಸೋಲೇಶನ್​ನಲ್ಲಿರುವವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಹಾಗಾಗಿ ಇದೇ ಆಸ್ಪತ್ರೆಯಿಂದ ಪದೇಪದೆ ಸೋಂಕಿತರು ಪರಾರಿಯಾಗುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net