ತ್ಯಾಜ್ಯ ಎಸೆದ ಟೆಂಪೋ ಚಾಲಕನಿಗೆ ದಂಡ

New Project (19)
Published on

ಗುರುಪುರ: ಮೂಡುಪೆರಾರ ಮತ್ತು ಪಡುಪೆರಾರ ಗ್ರಾಮಗಳ ಮುಖ್ಯರಸ್ತೆ ಹಾಗೂ ಒಳರಸ್ತೆಗಳ ಬದಿ ತ್ಯಾಜ್ಯ ಸುರಿಯುವವರ ವಿರುದ್ಧ ಪಡುಪೆರಾರ ಗ್ರಾಪಂ ಪಿಡಿಒ ಉಗ್ಗಪ್ಪ ಮೂಲ್ಯ ಕಾಯಾಚರಣೆಗಿಳಿದಿದ್ದು, ಶುಕ್ರವಾರ ಬೆಳಗ್ಗೆ ಪಡುಪೆರಾರ ಗ್ರಾಮ ವ್ಯಾಪ್ತಿಯ ಪುಚ್ಚೆಲ ಎಂಬಲ್ಲಿ ತ್ಯಾಜ್ಯ ಎಸೆಯುತ್ತಿದ್ದ ತಮಿಳುನಾಡು ಮೂಲದ ಟೆಂಪೋ ಹಿಡಿದು ದಂಡ ವಿಧಿಸಲಾಗಿದೆ.

ಖಚಿತ ಮಾಹಿತಿ ಪಡೆದ ಪಿಡಿಒ ಉಗ್ಗಪ್ಪ ಮೂಲ್ಯ, ಪಂಚಾಯಿತಿ ಲೆಕ್ಕ ಸಹಾಯಕ ನಾಗೇಶ್, ಕಾರ್ಯದರ್ಶಿ ಕಮಲಾಕ್ಷ, ಸಿಬ್ಬಂದಿ ಭರತ್ ಕುವಾರ್ ಮತ್ತು ಭೋಜ ಅವರೊಂದಿಗೆ ಸ್ಥಳಕ್ಕೆ ದಾಳಿ ವಾಡಿ ಟೆಂಪೋ ವಶಕ್ಕೆ ಪಡೆದು 5,000 ರೂ. ದಂಡ ಹಾಕಿದ್ದಾರೆ. ಅಲ್ಲದೆ ರಸ್ತೆ ಬದಿ ಹಾಕಿದ್ದ ತ್ಯಾಜ್ಯವನ್ನು ಚಾಲಕನಿಂದಲೇ ಟೆಂಪೋಗೆ ಲೋಡ್ ಮಾಡಿಸಿದ್ದಾರೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ತ್ಯಾಜ್ಯದಿಂದ ಪರಿಸರ ನಾಶವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪಂಚಾಯಿತಿ ವಾಹನಗಳಿಗೆ ಮನೆ ಮತ್ತು ಅಂಗಡಿಗಳ ತ್ಯಾಜ್ಯ ಒದಗಿಸಬೇಕು. ಎಲ್ಲೆಂದರಲ್ಲಿ ಕಸ ಬಿಸಾಡಬಾರದು. ಪರಿಸರದ ಬಗ್ಗೆ ಎಲ್ಲರಲ್ಲೂ ಕಾಳಜಿ ಮೂಡಿದರೆ ಇದು ಸಾಧ್ಯ ಉಗ್ಗಪ್ಪ ಮೂಲ್ಯ, ಪಿಡಿಒ https://www.vijayavani.net/lorry-s-scooter-accident https://www.vijayavani.net/aturu-jathre

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net