ಟೆಂಪಲ್ಸ್ ಆಫ್ ಗೋವಾ ಪುಸ್ತಕ ಮೋದಿ ಅವರಿಗೆ ಸಮರ್ಪಣೆ

mng-21aug-goa book
Published on


ಮಂಗಳೂರು : ಮಂಗಳೂರಿನಲ್ಲಿ ಜಾಹೀರಾತು, ಮುದ್ರಣ, ವಿನ್ಯಾಸ ಮತ್ತು ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ತರ್ಜನಿ ಕಮ್ಯುನಿಕೇಷನ್ಸ್ ಪ್ರೈ.ಲಿ.ಸಂಸ್ಥೆ ವಿನ್ಯಾಸಗೊಳಿಸಿದ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಪ್ರಕಟಿಸಲ್ಪಟ್ಟ ‘ಟೆಂಪಲ್ಸ್ ಆಫ್ ಗೋವಾ’ ಸಚಿತ್ರ ಕಾಫಿ ಟೇಬಲ್ ಪುಸ್ತಕವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.
ಈ ಕಾಫಿ ಟೇಬಲ್ ಪುಸ್ತಕದ ಪರಿಕಲ್ಪನೆ, ವಿನ್ಯಾಸ, ವಿಷಯ ಸಂಗ್ರಹಣೆ ಮತ್ತು ಮುದ್ರಣದವರೆಗಿನ ಜವಾಬ್ದಾರಿಯನ್ನು ತರ್ಜನಿ ಕಮ್ಯುನಿಕೇಷನ್ಸ್ ಸಂಸ್ಥೆ ನಿರ್ವಹಿಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದು ನಮ್ಮ ಸಂಸ್ಥೆಗೆ ಗೌರವದ ಜತೆಗೆ ಹೆಮ್ಮೆಯ ವಿಷಯ ಎಂದು ತರ್ಜನಿ ಕಮ್ಯುನಿಕೇಷನ್ಸ್‌ನ ಚೇರ್ಮನ್ ಸಂಜಯ ಪ್ರಭು ಅಭಿಪ್ರಾಯ ಪಟ್ಟಿದ್ದಾರೆ.
ತರ್ಜನಿ ಕಮ್ಯುನಿಕೇಷನ್ಸ್‌ನ ಸಂಸ್ಥೆಯ ನೇತೃತ್ವದಲ್ಲಿ ಪ್ರಕಟಗೊಂಡ ಟೆಂಪಲ್ಸ್ ಆಫ್ ಗೋವಾದ ಕಾಫಿ ಟೇಬಲ್ ಪುಸ್ತಕ ಪ್ರಧಾನಿ
ವರಿಗೆ ತಲುಪಿದ್ದು, ನಮ್ಮ ಸಂಸ್ಥೆಯ ಯಶಸ್ಸಿನ ಪ್ರತೀಕವಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶೇಷಗಿರಿ ಕೆ.ಜಿ. ತಿಳಿಸಿದ್ದಾರೆ . ಈ ಪುಸ್ತಕದ ಸಂಪಾದಕಿಯಾಗಿ ತರ್ಜನಿ ಕಮ್ಯುನಿಕೇಷನ್ಸ್ ಸಂಸ್ಥೆಯ ಎಡಿಟರ್ ಡಾ. ಭಾರತಿ ಶೇವಗೂರು
ಕಾರ್ಯನಿರ್ವಹಿಸಿದ್ದಾರೆ. ಈ ಪುಸ್ತಕದಲ್ಲಿರುವ ಸುಂದರ ಫೋಟೋಗಳನ್ನು ಮಂಗಳೂರಿನ ಪ್ರಸಿದ್ಧ ಛಾಯಾಗ್ರಾಹಕ ಅನ್ನು ಮಂಗಳೂರು ಸೆರೆ ಹಿಡಿದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net