ಪವರ್​ಸ್ಟಾರ್ ಪವನ್​ ಕಲ್ಯಾಣ್​ಗೆ ಕರೊನಾ ಸೋಂಕು

Pawan Kalyan vvani
Published on

ಹೈದರಾಬಾದ್: ತೆಲುಗು ನಟ ಪವರ್​ಸ್ಟಾರ್ ಪವನ್ ಕಲ್ಯಾಣ ಅವರಿಗೆ ಕರೊನಾ ವೈರಸ್ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ.

ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು ಮನೆಯಲ್ಲೇ ಕ್ವಾರಂಟೈನ್​ಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇತ್ತೀಚಿಗೆ ಬಿಡುಗಡೆಗೊಂಡ ಅವರ ವಕೀಲ ಸಾಬ್ ಸಿನಿಮಾದ ಪ್ರಚಾರದ ವೇಳೆ ಅವರ ಹಲವಾರು ಸ್ನೇಹಿತರಿಗೆ ಕರೊನಾ ಸೋಂಕು ತಗುಲಿತ್ತು. ಹೀಗಾಗಿ ಅವರು ಮನೆಯಲ್ಲೇ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರು. ಇದು ಎದೆ ನೋವಿನ ಸಲುವಾಗಿ ಹೈದರಾಬಾದ್​ನಲ್ಲಿ ಖಾಸಗಿ ಆಸ್ಪತ್ರೆಗೆ ಹೋಗಿದ್ದಾಗ ಕರೊನಾ ತಗುಲಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net