More

    ಟೆನಿಸ್​ ಸ್ಟಾರ್ಸ್​ ವಾವ್ರಿಂಕಾ-ಮುಗುರುಜಾ ಸೀಕ್ರೆಟ್​ ಲವ್​ ಪತ್ತೆ ಹಚ್ಚಿದ ಅಭಿಮಾನಿಗಳು!

    ಮ್ಯಾಡ್ರಿಡ್​: ಸ್ವಿಸ್​ ಟೆನಿಸ್​ ಆಟಗಾರ ಸ್ಟಾನಿಸ್ಲಾಸ್​ ವಾವ್ರಿಂಕಾ ಮತ್ತು ಸ್ಪೇನ್​ ಟೆನಿಸ್​ ಆಟಗಾರ್ತಿ ಗಾರ್ಬಿನ್​ ಮುಗುರುಜಾ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಕಳೆದ ಕೆಲ ಸಮಯದಿಂದ ಅನುಮಾನದ ವರದಿಗಳು ಹರಡಿದ್ದವು. ಆದರೆ ಎಲ್ಲೂ ಈ ವಿಷಯ ಖಚಿತಪಟ್ಟಿರಲಿಲ್ಲ. ಆದರೆ ಈಗ ವಾವ್ರಿಂಕಾ ಮತ್ತು ಮುಗುರುಜಾ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್​ಗಳಿಂದ ಅವರ ಅಭಿಮಾನಿಗಳು ಅವರಿಬ್ಬರ ‘ಸೀಕ್ರೆಟ್​ ಲವ್’​ ಅನ್ನು ಬಹಿರಂಗಪಡಿಸಿದ್ದಾರೆ!

    ಗ್ರಾಂಡ್​ ಸ್ಲಾಂ ಪ್ರಶಸ್ತಿ ವಿಜೇತರಾದ 35 ವರ್ಷದ ವಾವ್ರಿಂಕಾ ಮತ್ತು 26 ವರ್ಷದ ಮುಗುರುಜಾ ಇಬ್ಬರೂ ಈಗ ಲಾಕ್​ಡೌನ್​ ಸಮಯದಲ್ಲಿ ಸ್ವಿರ್ಜಲೆಂಡ್​ನಲ್ಲಿ ಜತೆಯಾಗಿ ಇದ್ದಾರೆ ಎನ್ನಲಾಗಿದ್ದು, ಇಬ್ಬರೂ ಒಂದೇ ಸ್ಥಳದಲ್ಲಿ ಇರುವುದನ್ನು ಅವರಿಬ್ಬರ ಪೋಸ್ಟ್​ಗಳ ಮೂಲಕ ಅಭಿಮಾನಿಗಳು ಪತ್ತೆಹಚ್ಚಿದ್ದಾರೆ. ಇಬ್ಬರೂ ಜೆನೆವಾದಲ್ಲಿ ವಾವ್ರಿಂಕಾ ಮನೆಯಲ್ಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: VIDEO | ಮಗನಿಗೆ ಕುದುರೆ ಸವಾರಿ ಕಲಿಸಿದ ಶಿಖರ್​ ಧವನ್​!

    ವಿಶ್ವ ನಂ. 16 ಆಟಗಾರ್ತಿ ಮುಗುರುಜಾ ಈಜುಕೊಳದ ಬದಿಯಲ್ಲಿ ಮಲಗಿರುವ ಚಿತ್ರವೊಂದನ್ನು 3 ದಿನದ ಹಿಂದೆ ಪೋಸ್ಟ್​ ಮಾಡಿದ್ದರೆ, ವಿಶ್ವ ನಂ. 17 ಆಟಗಾರ ವಾವ್ರಿಂಕಾ ಕೂಡ ಕೆಲವಾರಗಳ ಹಿಂದೆ ಈಜುಕೊಳದಲ್ಲಿನ ಚಿತ್ರವನ್ನು ಪೋಸ್ಟ್​ ಮಾಡಿದ್ದರು. ಇವೆರಡೂ ಒಂದೇ ಈಜುಕೊಳವಾಗಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಅನುಮಾನಪಟ್ಟಿದ್ದು, ಈಜುಕೊಳದ ಮೇಲಿನ ಟೈಲ್ಸ್​ಗಳು ಒಂದೇ ರೀತಿಯಾಗಿವೆ. ಹಿನ್ನೆಲೆಯ ದೃಶ್ಯಗಳಲ್ಲೂ ಹೋಲಿಕೆಗಳಿವೆ ಎಂದು ಆನ್​ಲೈನ್​ ಡಿಡೆಕ್ಟಿವ್​ಗಳು ಹೇಳಿದ್ದಾರೆ. ವಾವ್ರಿಂಕಾ 3 ಮತ್ತು ಮುಗುರುಜಾ 2 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

    ಟೆನಿಸ್​ ಸ್ಟಾರ್ಸ್​ ವಾವ್ರಿಂಕಾ-ಮುಗುರುಜಾ ಸೀಕ್ರೆಟ್​ ಲವ್​ ಪತ್ತೆ ಹಚ್ಚಿದ ಅಭಿಮಾನಿಗಳು!

    ವಾವ್ರಿಂಕಾ ಈ ಹಿಂದೆ ಮತ್ತೋರ್ವ ಟೆನಿಸ್​ ಆಟಗಾರ್ತಿ ಡೊನ್ನಾ ವೆಕಿಕ್​ ಜತೆಗೆ ಡೇಟಿಂಗ್​ ನಡೆಸುತ್ತಿದ್ದರು. 4 ವರ್ಷಗಳ ಇವರ ಸಂಬಂಧ ಕಳೆದ ವರ್ಷ ಮುರಿದುಬಿದ್ದಿತ್ತು. ಕಳೆದ ಜೂನ್​ನಲ್ಲೇ ವಾವ್ರಿಂಕಾ, ಮುಗುರುಜಾ ಜತೆಗೆ ಟೆನಿಸ್​ ತರಬೇತಿಯಲ್ಲಿ ಪಾಲ್ಗೊಂಡ ಬಳಿಕದ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದರು. ಆದರೆ ಆಗ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅಲ್ಲಿಂದ ಇಲ್ಲಿಯವರೆಗೂ ಇಬ್ಬರೂ ಒಂದೇ ಸ್ಥಳದಲ್ಲಿ ಇದ್ದಾರೆ ಎಂಬುದು ಈಗ ಅಭಿಮಾನಿಗಳು ಅವರ ‘ಸೀಕ್ರೆಟ್​ ಲವ್​’ ಪತ್ತೆಹಚ್ಚುವಂತೆ ಮಾಡಿದೆ. ಟೆನಿಸ್​ ತಾರೆಯರು ಪರಸ್ಪರ ಪ್ರೀತಿಸುವುದು ಇದೇ ಮೊದಲಲ್ಲ. ಸ್ಟೆಫಿಗ್ರಾಫ್​-ಆಂಡ್ರೆ ಅಗಾಸಿಯಿಂದ ಈಗಿನ ಗೇಲ್​ ಮಾನ್​ಫಿಲ್ಸ್​-ಎಲಿನಾ ಸ್ವಿಟೋಲಿನಾ, ಫ್ಯಾಬಿಯೊ ಫೋಗ್ನಿನಿ-ಪ್ಲಾವಿಯಾ ಪೆನ್ನೆಟ್ಟಾವರೆಗೆ ದೃಷ್ಟಾಂತಗಳು ಮುಂದುವರಿದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts