ವಕ್ಫ್ ಬೋರ್ಡ್​ಗೆ ನ್ಯಾಯಾಂಗದ ಅಧಿಕಾರ?

Telangana
Published on

ಹೈದರಾಬಾದ್: ವಕ್ಫ್ ಬೋರ್ಡ್​ಗೆ ಸಂಬಂಧಿಸಿದ ಆಸ್ತಿಗಳು ರಾಜ್ಯದಾದ್ಯಂತ ಇದ್ದು, ಅವುಗಳನ್ನು ರಕ್ಷಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತೆಲಂಗಾಣದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕೊಪ್ಪುಲ ಈಶ್ವರ್ ಪ್ರಕಟಿಸಿದ್ದಾರೆ. ವಕ್ಫ್​ ಜಮೀನು ಸರ್ವೇ ಕಾರ್ಯ ಎರಡನೇ ಬಾರಿ ನಡೆಸುವುದಕ್ಕೆ ಸಂಬಂಧಿಸಿ ಅಧಿಸೂಚನೆ ಪ್ರಕಟಿಸುವುದು ವಿಳಂಬವಾಗಿದೆ. ಈ ಸಂಬಂಧ ಸರ್ಕಾರ ಶೀಘ್ರವೇ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ವಕ್ಫ್ ಬೋರ್ಡ್​ಗೆ ನ್ಯಾಯಾಂಗದ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರು ಸಭೆಯ ನಂತರದಲ್ಲಿ ಪರಿಶೀಲಿಸಲಿದ್ದಾರೆ. ಈ ಬಗ್ಗೆ ಅವರ ಗಮನಸೆಳೆಯುವ ಕೆಲಸವನ್ನು ಮಾಡುತ್ತೇನೆ ಎಂದು ಸಚಿವ ಕೊಪ್ಪುಲ ಈಶ್ವರ್ ವಿಧಾನಸಭೆಯಲ್ಲಿ ಬುಧವಾರ ಭರವಸೆ ನೀಡಿದ್ದಾರೆ. ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ವಿಧಾಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ವಕ್ಫ್ ಆಸ್ತಿಯ ಸರ್ವೇ ವಿಚಾರ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಚಿವ ಈಶ್ವರ್ ಉತ್ತರಿಸಿದ್ದರು.

ವಕ್ಫ್​ ಆಸ್ತಿಗಳ ಮೊದಲ ಸಮೀಕ್ಷೆ 1954ರಲ್ಲಿ ನಡೆದಿತ್ತು. ಅಂದು, 77,539 ಎಕರೆ ಜಮೀನು 3,929 ಪ್ರದೇಶಗಳಲ್ಲಿ ಇರುವುದನ್ನು ಗುರುತಿಸಲಾಗಿತ್ತು. ಎರಡನೇ ಸರ್ವೇ 2001ರಲ್ಲಿ ಆರಂಭವಾಗಿದ್ದು 2016ರಲ್ಲಿ ಕೊನೆಗೊಂಡಿದೆ. ಈ ಸರ್ವೇ ಫಲಿತಾಂಶದ ಪ್ರಕಾರ, 13,610 ಪ್ರದೇಶಗಳಲ್ಲಿ 3,372 ಎಕರೆ ಪ್ರದೇಶವಷ್ಟೇ ವಕ್ಫ್ ಮಂಡಳಿ ಹೆಸರಲ್ಲಿ ಬಾಕಿ ಇರುವುದು ಕಂಡುಬಂದಿದೆ ಎಂದು ಓವೈಸಿ ಗಮನಸೆಳೆದಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net