ಗೂಗಲ್​​ ಪೇನಲ್ಲಿ ಪೇಮೆಂಟ್​ ಹಿಸ್ಟರಿ ಡಿಲೀಟ್​ ಮಾಡುವುದು ಗೊತ್ತಿಲ್ಲವೇ? ಇಲ್ಲಿದೆ ನೋಡಿ ಸುಲಭ ವಿಧಾನ...Google Pay

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಬಹುತೇಕ ಜನರು ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಹಣದ ವಹಿವಾಟು ನಡೆಸುತ್ತಿದ್ದಾರೆ
  • ಏನೇ ಖರೀದಿ ಮಾಡಲು, ಹಣವನ್ನು ಇನ್ನೊಬ್ಬರಿಗೆ ಕಳುಹಿಸಲು ಆನ್​ಲೈನ್​ ಪಾವತಿ ಮೊರೆ ಹೋಗುತ್ತಿದ್ದಾರೆ
  • ಫೋನ್​ ಪೇ, ಪೇಟಿಎಂ, ಅಮೇಜಾನ್​ ಪೇ, ವಾಟ್ಸ್​ಆ್ಯಪ್​ ಪೇ ಮತ್ತು ಗೂಗಲ್​ ಪೇನಂತಹ ಅಪ್ಲಿಕೇಶನ್​ಗಳಿವೆ
Google Pay : ಇಂದು ಬಹುತೇಕ ಜನರು ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಹಣದ ವಹಿವಾಟು ನಡೆಸುತ್ತಿದ್ದಾರೆ. ಏನೇ ಖರೀದಿ ಮಾಡಲು, ಹಣವನ್ನು ಇನ್ನೊಬ್ಬರಿಗೆ ಕಳುಹಿಸಲು ಮತ್ತು ಶಾಪಿಂಗ್ ಮಾಡುವುದೂ ಸೇರಿದಂತೆ ಪ್ರತಿಯೊಂದಕ್ಕೂ ಆನ್​ಲೈನ್​ ಪಾವತಿ ಮೊರೆ ಹೋಗುತ್ತಿದ್ದಾರೆ. ಫೋನ್​ ಪೇ, ಪೇಟಿಎಂ, ಅಮೇಜಾನ್​ ಪೇ, ವಾಟ್ಸ್​ಆ್ಯಪ್​ ಪೇ ಮತ್ತು ಗೂಗಲ್​ ಪೇನಂತಹ ಅನೇಕ ಅಪ್ಲಿಕೇಶನ್​ಗಳು ನಮ್ಮ ನಡುವೆ ಇದೆ. ಅದರಲ್ಲಿ ಹೆಚ್ಚಿ ಮಂದಿ Google Pay ಅನ್ನು ಬಳಸುತ್ತಿದ್ದಾರೆ.
ಎಲ್ಲ ಅಪ್ಲಿಕೇಶನ್​ಗಳ ಪಾವತಿ ವ್ಯವಸ್ಥೆಯು UPI ಆಧರಿಸಿದೆ. ಬಿಲ್‌ಗಳನ್ನು ಪಾವತಿಸುವುದರಿಂದ ಹಿಡಿದು ಮೊಬೈಲ್ ಫೋನ್‌ಗಳನ್ನು ರೀಚಾರ್ಜ್ ಮಾಡುವವರೆಗೆ, ನೀವು ಈ ಅಪ್ಲಿಕೇಶನ್ ಮೂಲಕ ಎಲ್ಲವನ್ನೂ ಸುಲಭವಾಗಿ ಮಾಡಬಹುದು.
Google Pay ಈ ಎಲ್ಲಾ ವಹಿವಾಟುಗಳ ವಿವರಗಳನ್ನು ಸಂಗ್ರಹಿಸುತ್ತದೆ. ಅಂದರೆ, ನಿಮ್ಮ ವಹಿವಾಟಿನ ಹಿಸ್ಟರಿ ಸೇವ್​ ಆಗಿರುತ್ತದೆ. ಅನೇಕ ಜನರಿಗೆ ವಹಿವಾಟಿನ ಹಿಸ್ಟರಿಯನ್ನು ಹೇಗೆ ಡಿಲೀಟ್​ ಮಾಡಬೇಕೆಂಬುದು ತಿಳಿದಿಲ್ಲ. ಡಿಲೀಟ್​ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು ಮತ್ತು ಕೆಟ್ಟದು ಕೂಡ. ಆದಾಗ್ಯೂ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಈ ವಹಿವಾಟಿನ ಹಿಸ್ಟರಿಯನ್ನು ಸುಲಭವಾಗಿ ಅಳಿಸಬಹುದು. ಅದು ಹೇಗೆಂದು ನಾವೀಗ ತಿಳಿದುಕೊಳ್ಳೋಣ.
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Google Pay ಅಪ್ಲಿಕೇಶನ್ ತೆರೆಯಿರಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೆಟ್ಟಿಂಗ್‌ಗಳು ಕ್ಲಿಕ್ ಮಾಡಿ.

* ಪ್ರೈವಸಿ ಮತ್ತು ಸೆಕ್ಯುರಿಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

* ಡೇಟಾ ಮತ್ತು ಪರ್ಸನಲೈಜೇನ್​ ಆಯ್ಕೆಯನ್ನು ಆರಿಸಿ.

* ನಿಮ್ಮ Google ಖಾತೆ ಲಿಂಕ್ ಅನ್ನು ಕ್ಲಿಕ್ ಮಾಡಿ. ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಪಾವತಿ ವಹಿವಾಟುಗಳು ಮತ್ತು ಚಟುವಟಿಕೆಯನ್ನು ನೋಡಬಹುದು.

* ಅದರ ಪಕ್ಕದಲ್ಲಿರುವ ಕ್ರಾಸ್​ ಬಟನ್ ಕ್ಲಿಕ್ ಮಾಡುವ ಮೂಲಕ ನೀವು ವಹಿವಾಟು ಹಿಸ್ಟರಿಯನ್ನು ಡಿಲೀಟ್​ ಮಾಡಬಹುದು.

* ನೀವು ವಹಿವಾಟಿನ ಹಿಸ್ಟರಿಯನ್ನು ಒಂದೇ ಬಾರಿಗೆ ಡಿಲೀಟ್​ ಮಾಡಲು ಬಯಸಿದರೆ, ಮೇಲಿನ ರಿಮೋವ್​ ಅಥವಾ ಡಿಲೀಟ್​ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಡಿಲೀಟ್​ ಮಾಡಲು ಇಚ್ಛಿಸುವ ಸಮಯದ ಅವಧಿಯನ್ನು ಆಯ್ಕೆ ಮಾಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net