ಇಂತಹ ಫೋನ್ಗಳನ್ನು ಉಪಯೋಗಿಸುವವರ ಸಂಖ್ಯೆ ಎಷ್ಟು ಹೆಚ್ಚಿದೆಯೋ ಅಷ್ಟೇ ಪ್ರಮಾಣದಲ್ಲಿ ಬ್ಯಾಟರಿ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆಯೂ ಇದೆ. ಆರಂಭದಲ್ಲಿ ಬ್ಯಾಟರಿ ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಚೆನ್ನಾಗಿ ನೋಡಿ, ಆನಂತರ ಖರೀದಿಸುವ ಜನಸಾಮಾನ್ಯರು, ಎಷ್ಟೇ ಬಾರಿ ಫುಲ್ ಚಾರ್ಚ್ ಮಾಡಿದರು, ದಿನ ಮುಗಿಯುವುದರೊಳಗೆ ಚಾರ್ಚ್ ಖಾಲಿಯಾಗಿದೆ ಎಂದು ತೀವ್ರ ಬೇಸರಕ್ಕೆ ಒಳಗಾಗುತ್ತಾರೆ. ಇದರಿಂದ ಸಿಟ್ಟಾಗಿ, ಸ್ಮಾರ್ಟ್‌ಫೋನ್ ಕಂಪನಿಗೂ ಹಿಗ್ಗಾಮುಗ್ಗಾ ಬೈಗುಳವನ್ನಿಡುತ್ತಾರೆ. ಪದೇ ಪದೇ ಚಾರ್ಚ್ ಮಾಡುವಂತ ಪರಿಸ್ಥಿತಿ ನಿಮ್ಮ ಫೋನ್ನಲ್ಲಿ ಕಾಡುತ್ತಿದ್ದರೆ, ಈ ಕೂಡಲೇ ನೀವು ಈ ಸೆಟ್ಟಿಂಗ್ಸ್ಗಳನ್ನು ಆಫ್ ಮಾಡುವ ಮೂಲಕ ಬ್ಯಾಟರಿ ಆರೋಗ್ಯವನ್ನು ಕಾಪಾಡಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ ಉತ್ತರ.