

ಬೆಂಗಳೂರು: ಕನ್ನಡ ಚಿತ್ರರಂಗದ(Sandalwood) ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಕಿಚ್ಚ 46' ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಹೊರಬಂದಿದೆ.
ಕಬ್ಜ ಚಿತ್ರದ ಬಳಿಕ ಕಿಚ್ಚ ಸುದೀಪ್(Kiccha Sudeep) ಅವರ ಮುಂದಿನ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಖುಷಿ ಸಂಗತಿಯೊಂದು ದೊರೆತಿದೆ. ಇಂದು ಸಂಜೆ 6:30ಕ್ಕೆ 'ಕಿಚ್ಚ 46'(Kiccha 46) ಸಿನಿಮಾ ಕುರಿತು ಹೊಸ ಅಪ್ಡೇಟ್ ಸಿಗಲಿದೆ ಎಂದು ನಿರ್ಮಾಪಕ ಕಲೈಪುಲಿ ಎಸ್. ಥಾನು ಅವರು ತಮ್ಮ ಟ್ವಿಟರ್(Twitter) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮೇ 2023 ರಲ್ಲಿ, ನಟ ಕಿಚ್ಚ ಸುದೀಪ್ ಅವರ 46ನೇ ಚಿತ್ರವನ್ನು ವಿ. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ಥಾನು ಅವರು ನಿರ್ಮಾಣ ಮಾಡಲಿದ್ದಾರೆ ಮತ್ತು ಚೊಚ್ಚಲ ನಿರ್ದೇಶಕನಾಗಿ ವಿಜಯ್ ಕಾರ್ತಿಕೆಯನ್(Vijay Karthikeyan) ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗಿತ್ತು. ಸದ್ಯ ಚಿತ್ರತಂಡ 'ಕಿಚ್ಚ 46' ಚಿತ್ರದ ಬಗ್ಗೆ ಸುದೀಪ್ ಅವರ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.